Asianet Suvarna News Asianet Suvarna News

ಬ್ಯಾಡಗಿ ಮೆಣಸು ದಾಖ​ಲೆಯ 41000ಕ್ಕೆ ಮಾರಾ​ಟ!

ಎಪಿಎಂಸಿ ಮಾರುಕಟ್ಟೆಯಲ್ಲಿ ಬ್ಯಾಡಗಿ ಮೆಣಿಸನಕಾಯಿ ಅತಿ ಹೆಚ್ಚು ದರಕ್ಕೆ ಮಾರಾಟವಾಗಿ ದಾಖಲೆ ಬರೆದಿದೆ. 

Byadgi chilli price hit all-time high snr
Author
Bengaluru, First Published Dec 20, 2020, 9:01 AM IST

ಗದಗ (ಡಿ.20): ಗದಗ ಎಪಿಎಂಸಿ ಮಾರುಕಟ್ಟೆಇತಿ​ಹಾ​ಸ​ದ​ಲ್ಲೇ ಮೊದಲ ಬಾರಿಗೆ ಒಣ ಮೆಣ​ಸಿ​ನ​ಕಾಯಿ .41 ಸಾವಿ​ರಕ್ಕೆ ಮಾರಾಟ​ವಾ​ಗುವ ಮೂಲಕ ಐತಿ​ಹಾ​ಸಿಕ ದಾಖಲೆ ನಿರ್ಮಿ​ಸಿ​ದೆ.

ರೋಣ ತಾಲೂಕಿನ ಸವಡಿ ಗ್ರಾಮದ ರೈತ ಸುರೇಶ ಜೋಗರಡ್ಡಿ ಎನ್ನುವವರಿಗೆ ಸೇರಿದ ಡಬ್ಬಿ ಒಣ ಮೆಣಸಿನಕಾಯಿ ಬೆಳೆ ಕ್ವಿಂಟಲ್‌ಗೆ ಬರೋ​ಬರಿ . 41,125 ಮಾರಾ​ಟ​ವಾ​ಗುವ ಮೂಲಕ ಮಾರು​ಕ​ಟ್ಟೆ​ಯ​ಲ್ಲಿಯೇ ಸಾರ್ವ​ಕಾ​ಲಿಕ ದಾಖಲೆ ನಿರ್ಮಿ​ಸಿದೆ. 

ಬ್ಯಾಡಗಿ ಮೆಣಸಿನ ಕಾಯಿಗೆ ಭಾರಿ ಬೆಲೆ : ರೈತರಿಗೆ ಬಂಪರ್ ಆದಾಯ

ಏಷ್ಯಾ​ದಲ್ಲಿ ದೊಡ್ಡ ಮೆಣ​ಸಿ​ನ​ಕಾಯಿ ಮಾರು​ಕಟ್ಟೆಹೊಂದಿ​ರುವ ಬ್ಯಾಡಗಿ ಎಪಿ​ಎಂಸಿ​ಯಲ್ಲಿ ಸೋಮ​ವಾರ ಪ್ರತಿ ಕ್ವಿಂಟಲ್‌ಗೆ .35.555ಕ್ಕೆ ಮಾರಾಟವಾಗುವ ಮೂಲಕ ಎಲ್ಲ ದಾಖಲೆಗಳನ್ನು ಹಿಂದಿಕ್ಕಿ ನೂತನ ದಾಖಲೆ ದರವನ್ನು ಸೃಷ್ಟಿಸಿತ್ತು.

 ಬಳಿಕ ಗುರುವಾರ ಬ್ಯಾಡಗಿಯಲ್ಲಿ ಆಂಧ್ರಪ್ರದೇಶದ ಅನಂತಪುರ ರೈತರೊಬ್ಬರ ಮೆಣಸಿನಕಾಯಿ 36999 ಗೆ ಮಾರಾಟವಾಗಿ ದಾಖಲೆ ಸೃಷ್ಟಿಸಿತ್ತು.

Follow Us:
Download App:
  • android
  • ios