ಮಂಡ್ಯ [ಡಿ.06]:  ಚುನಾವಣೆ ಘೋಷಣೆಯಾದ ದಿನದಿಂದ ರಣಾಂಗಣವಾಗಿದ್ದ ಕೆ.ಆರ್.ಪೇಟೆ ಚುನಾವಣೆ ಮುಗಿದ ಬಳಿಕ ತಣ್ಣಗಾಗಿದೆ. 

ಜೆಡಿಎಸ್, ಕಾಂಗ್ರೆಸ್ , ಬಿಜೆಪಿ ಮುಖಂಡರು ಗೆಲುವಿಗಾಗಿ ನಿರಂತರ ಪ್ರಯತ್ನ ನಡೆಸಿದ್ದು, ಇದೀಗ ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. 

ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ಸ್ಥಳೀಯ ಕಾಂಗ್ರೆಸ್ ಮುಖಂಡರ ಜೊತೆಗೆ ಚರ್ಚೆ ನಡೆಸಿದ್ದು, ನನ್ನ ಜನರ ನಾಡಿ ಮಿಡಿತ ನನಗೆ ಗೊತ್ತು. ತಾವು ಈ ಬಾರಿ 15 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತೇನೆ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ. 

ಇನ್ನು ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಸಹ ಯಾವ ಭಾಗದಲ್ಲಿ ಜೆಡಿಎಸ್ ಹೆಚ್ಚು ಮತಗಳನ್ನು ಪಡೆದುಕೊಂಡಿದೆ. ಕಾಂಗ್ರೆಸ್ ನಮಗೆ ಹೆಚ್ಚು ಫೈಟ್ ಕೊಟ್ಟಿದ್ದು 25 ಸಾವಿರ ಮತಗಳ ಅಂತರದಲ್ಲಿ ನಮ್ಮ ಗೆಲುವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

'ಹಣ ಹಂಚಲಾರದೇ ಚುನಾವಣೆ ನಡೆದಿದ್ರೆ ನಾನೇ ಗೆಲ್ತೀನಿ'...

ಇನ್ನು ಬಿಜೆಪಿ ಅಭ್ಯರ್ಥಿಯಾಗಿರುವ ಕೆ‌.ಸಿ.ನಾರಾಯಣಗೌಡ ಅವರು ರಿಲ್ಯಾಕ್ಸ್ ಮೂಡ್ ನಲ್ಲಿದ್ದು, ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.   

ಇಷ್ಟು ದಿನ ಇಡೀ ಕ್ಷೇತ್ರ ರಾಜಕೀಯ ಚಟುವಟಿಕೆಯಿಂದ  ಫುಲ್ ಬಿಸಿ ಬಿಸಿ ಆಗಿತ್ತು. ಆದರೆ ಈಗ ಕೆಆರ್‌ಪೇಟೆ ಕ್ಷೇತ್ರ ಫುಲ್ ಕೂಲ್ ಆಗಿದೆ.  ಇನ್ನೊಂದೆಡೆ ಕೆಆರ್‌ಪೇಟೆಯ ಕಿಂಗ್ ಯಾರು ಎಂದು ಈಗಾಗಲೇ ಕೆಆರ್‌ಪೇಟೆ ಕ್ಷೇತ್ರದ ಮತದಾರರು ನಿರ್ಧಾರ ಮಾಡಿದ್ದು, ಅವರ ತೀರ್ಪು ಭದ್ರವಾಗಿ ಮತ ಪೆಟ್ಟಿಗೆಯನ್ನು ಸೇರಿವೆ. ಡಿಸೆಂಬರ್ 9 ರಂದು ಫಲಿತಾಂಶ ಪ್ರಕಟವಾಗಲಿದ್ದು, ಅಲ್ಲಿಯವರೆಗೆ ಕಾಯವೇಕಿದೆ.