'ಹಣ ಹಂಚಲಾರದೇ ಚುನಾವಣೆ ನಡೆದಿದ್ರೆ ನಾನೇ ಗೆಲ್ತೀನಿ'

ಹಣ ಬಲ, ಅಧಿಕಾರದಲ್ಲಿರುವ ಪಕ್ಷದ ಬಲ ಸೇರಿದಂತೆ ಹಲವು ಆತಂಕಗಳು ನನ್ನಲ್ಲಿವೆ ಎಂದ ಅಶೋಕ ಪೂಜಾರಿ| ಗೆಲುವಿನ ಪರಿಣಾಮ ಬರೋವರೆಗೂ ಗೆಲುವಿನ ವಿಶ್ವಾಸ ಹೊಂದುವುದಿಲ್ಲ| ಈ ಸಲದ್ದು ಜನರ ಚುನಾವಣೆಯಾಗಿದೆ, ಹಿಂದಿನ ಚುನಾವಣೆಗಿಂತ ಈ ಚುನಾವಣೆ ಭಿನ್ನವಾಗಿದೆ| ಜಾರಕಿಹೊಳಿ ಸಹೋದರರ ವಿರುದ್ಧ 20 ವರ್ಷಗಳಿಂದ ಹೋರಾಡುತ್ತ ಬಂದಿದ್ದೇನೆ| 

Gokak JDS Candidate Ashok Poojary Talks Over ByElection Result

ಗೋಕಾಕ್(ಡಿ.06): ಜನರು ಬದಲಾವಣೆ ಬಯಸ್ತಿದ್ದಾರೆ ಅದು ನಿಜವಾದರೆ ಮಾತ್ರ ನನ್ನ ಗೆಲುವು ನಿಶ್ಚಿತ. ನನ್ನ ಗೆಲುವಿನ ಬಗ್ಗೆ ಇವತ್ತು ನನಗೆ ಆತಂಕವಿದೆ. ನಾನು ಓವರ್ ಕಾನ್ಫಿಡೆನ್ಸ್, ಅತಿ ಆತ್ಮವಿಶ್ವಾಸದ ರಾಜಕಾರಣಿ ಅಲ್ಲ ಎಂದು ಗೋಕಾಕ್ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಅವರು ಹೇಳಿದ್ದಾರೆ. 

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣ ಬಲ, ಅಧಿಕಾರದಲ್ಲಿರುವ ಪಕ್ಷದ ಬಲ ಸೇರಿದಂತೆ ಹಲವು ಆತಂಕಗಳು ನನ್ನಲ್ಲಿವೆ. ಗೆಲುವಿನ ಪರಿಣಾಮ ಬರೋವರೆಗೂ ಗೆಲುವಿನ ವಿಶ್ವಾಸ ಹೊಂದುವುದಿಲ್ಲ. ಈ ಸಲದ್ದು ಜನರ ಚುನಾವಣೆಯಾಗಿದೆ. ಹಿಂದಿನ ಚುನಾವಣೆಗಿಂತ ಈ ಚುನಾವಣೆ ಭಿನ್ನವಾಗಿದೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಜಾರಕಿಹೊಳಿ ಸಹೋದರರ ವಿರುದ್ಧ 20 ವರ್ಷಗಳಿಂದ ಹೋರಾಡುತ್ತ ಬಂದಿದ್ದೇನೆ. ಬಹುಶಃ ಪ್ರಾಮಾಣಿಕವಾಗಿ ಹಣ ಹಂಚಲಾರದೇ ಚುನಾವಣೆ ನಡೆದಿದ್ರೆ ನಾನೇ ಗೆಲ್ತೀನಿ. ಎರಡ್ಮೂರು ಸಲ ಗೆಲುವಿನ ಅಂಚಿಗೆ ಬಂದು ಸೋತಿದ್ದೇನೆ ಎಂದು ತಿಳಿಸಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.

Latest Videos
Follow Us:
Download App:
  • android
  • ios