Asianet Suvarna News Asianet Suvarna News

ರಾಜಧಾನಿ ಜನರಿಗೆ ಶಾಕ್ ಮೇಲೆ ಶಾಕ್, ವರ್ಷಕ್ಕೊಮ್ಮೆ ನೀರಿನ ದರ ಏರಿಸುವಂತೆ BWSSB ಪ್ರಸ್ತಾಪ!

ಕನಿಷ್ಠ ಪ್ರತಿ ಒಂದು ವರ್ಷಕ್ಕೊಮ್ಮೆ ನೀರಿನ ದರ ಏರಿಸುವಂತೆ  ಬೆಂಗಳೂರು ಜಲಮಂಡಳಿ ರಾಜ್ಯ ಸರ್ಕಾರಕ್ಕೆ  ಪ್ರಸ್ತಾವನೆ ಸಲ್ಲಿಸಿದೆ.  ನಷ್ಟದ ನೆಪವೊಡ್ಡಿ ಪ್ರತಿ ವರ್ಷ ನೀರಿನ ದರ ಹೆಚ್ಚಳಕ್ಕೆ ಜಲಮಂಡಳಿ ಮನವಿ ಮಾಡಿದ್ದು, ಬೆಂಗಳೂರು ಜಲಮಂಡಳಿ ಪ್ರಸ್ತಾವನೆಗೆ ಸರ್ಕಾರ ಹಸಿರು ನಿಶಾನೆ ನೀಡಿದರೆ ಜನರಿಗೆ ನೀರು ಬಿಲ್ ಹೊರೆ ಬೀಳಲಿದೆ. 

BWSSB wants to revise the water tariff every year to meet the increasing expenditure gow
Author
First Published Nov 17, 2022, 10:19 PM IST

ಬೆಂಗಳೂರು (ನ.17): ಇನ್ಮೇಲೆ ಬೆಂಗಳೂರಿಗರಿಗೆ  ವರ್ಷಕ್ಕೊಮ್ಮೆ ಕಾದಿದ್ಯಾ ವಾಟರ್ ಹೊರೆ. ಏಕೆಂದರೆ  ಕನಿಷ್ಠ ಪ್ರತಿ ಒಂದು ವರ್ಷಕ್ಕೊಮ್ಮೆ ನೀರಿನ ದರ ಏರಿಸುವಂತೆ BWSSB ಪ್ರಸ್ತಾಪ ಮಾಡಿದೆ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಬೆಂಗಳೂರು ಜಲಮಂಡಳಿ  ಪ್ರಸ್ತಾವನೆ ಸಲ್ಲಿಸಿದೆ. ಹಾಗಾದ್ರೆ KERC ನಂತೆ ಬೆಂಗಳೂರು ಜಲಮಂಡಳಿಯೂ ಪ್ರತಿ ವರ್ಷ ಏಪ್ರಿಲ್ ನಲ್ಲಿ ನೀರಿನ ದರ ಪರಿಷ್ಕರಣೆ ಮಾಡುತ್ತಾ ಎಂಬುದನ್ನು ಮುಂದೆ ನೋಡಬೇಕಿದೆ. ಆಡಳಿತ ನಿರ್ವಹಣೆ ವೆಚ್ಚ ಸರಿದೂಗಿಸುವ ನಿಟ್ಟಿನಲ್ಲಿ ವರ್ಷಕೊಮ್ಮೆ ನೀರಿನ ದರ ಹೆಚ್ಚಳಕ್ಕೆ ಮನವಿ ಮಾಡಲಾಗಿದೆ. ನಷ್ಟದ ನೆಪವೊಡ್ಡಿ ಪ್ರತಿ ವರ್ಷ ನೀರಿನ ದರ ಹೆಚ್ಚಳಕ್ಕೆ ಜಲಮಂಡಳಿ ಮನವಿ ಮಾಡಿದ್ದು, ಬೆಂಗಳೂರು ಜಲಮಂಡಳಿ ಪ್ರಸ್ತಾವನೆಗೆ ಸರ್ಕಾರ ಹಸಿರು ನಿಶಾನೆ ನೀಡಿದರೆ ಜನರಿಗೆ ನೀರು ಬಿಲ್ ಹೊರೆ ಬೀಳಲಿದೆ. 2014, ಅಕ್ಟೋಬರ್ 20 ನಿಂದ ಬೆಂಗಳೂರಿನಲ್ಲಿ ಕಾವೇರಿ ನೀರಿನ ದರ ಪರಿಷ್ಕರಣೆ ಆಗಿಲ್ಲ. ಆದ್ರೆ 2014 ರಿಂದ 10 ಬಾರಿ ವಿದ್ಯುತ್ ದರ ಪರಿಷ್ಕರಣೆ ಆಗಿದೆ. ಹೀಗಾಗಿ ವರ್ಷಕ್ಕೊಮ್ಮೆ ನೀರಿನ ದರ ಏರಿಕೆಗೆ ಅವಕಾಶ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಬೆಂಗಳೂರು ಜಲಮಂಡಳಿ ಚೀಫ್  ಇಂಜಿನಿಯರ್ ಸುರೇಶ್ ಹೇಳಿಕೆ ನೀಡಿದ್ದಾರೆ.

ನ. 21ರಂದು ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ: ನ. 21ರಂದು(ಸೋಮವಾರ) ನಗರದ ವಿವಿಧಡೆ ಕಾವೇರಿ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಅಂತ ಜಲ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. 

3 ತಿಂಗಳು ವಿದ್ಯುತ್ ಬಿಲ್ ಕಟ್ಟದಿದ್ದರೆ ನಿಮ್ಮ ಮನೆಯ ‌ವಿದ್ಯುತ್ ಸಂಪರ್ಕ ಲೈಸೆನ್ಸ್ ರದ್ದು

ಕಾವೇರಿ 4ನೇ ಹಂತದ 1ನೇ ಘಟ್ಟದಡಿಯಲ್ಲಿ, ಕೆಆರ್ ಪುರಂನಿಂದ ರೇಷ್ಮೆ ಸಂಸ್ಥೆಯ ಹೊರವರ್ತುಲ ರಸ್ತೆಯ ಮೆಟ್ರೋ ನಿಲ್ದಾಣದಲ್ಲಿ ವಿವಿಧ ಕಾಮಗಾರಿ ಇರುವ ಹಿನ್ನೆಲೆಯಲ್ಲಿ ಒಂದು ದಿನ ನೀರಿನ ಪೂರೈಕೆಯಲ್ಲಿ ಸಮಸ್ಯೆಯಾಗಲಿದೆ. ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಅಂತ ತಿಳಿಸಿದೆ. 

ರಾಮನಗರದಲ್ಲಿ ಮನೆ ಮನೆಗೆ ಕಾವೇರಿ ನೀರು

ಎಲ್ಲೆಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ?
ಜಂಬೂಸವಾರಿ ದಿಣ್ಣೆ, ಪುಟ್ಟೇನಹಳ್ಳಿ, ಕೋಣನಕುಂಟೆ ಕ್ರಾಸ್, ಜರಗನಹಳ್ಳಿ, ಜೆ.ಪಿ.ನಗರ 4,5 6 ಮತ್ತು 7ನೇ ಹಂತ, ಬನ್ನೇರುಘಟ್ಟ ಮುಖ್ಯ ರಸ್ತೆ, ಜಯದೇವ ಆಸ್ಪತ್ರೆ, 4ನೇ 'ಟಿ' ಬ್ಲಾಕ್‌ ಪಾರ್ಟ್ 'ಎ', ತಿಲಕ್ ನಗರ, ವಿಜಯ ಬ್ಯಾಂಕ್ ಲೇಔಟ್, ಬಿಳೇಕಹಳ್ಳಿ, ಹೆಚ್‌.ಎಸ್.ಆರ್. ಲೇಔಟ್ 1 ರಿಂದ 7 ಸೆಕ್ಟರ್, ಮಂಗಮ್ಮನಪಾಳ್ಯ, ಹೊಸಪಾಳ್ಯ, ಎಲೆಕ್ಟ್ರಾನಿಕ್ ಸಿಟಿ 1 ಮತ್ತು 2ನೇ ಹಂತ, 3ನೇ ಬ್ಲಾಕ್ ಕೋರಮಂಗಲ, ಮೈಕೋ ಲೇಔಟ್, ಎನ್.ಎಸ್.ಪಾಳ್ಯ ಸೇರಿದಂತೆ ಸುತ್ತಮುತ್ತಲಿನ 100ಕ್ಕೂ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಉಂಟಾಗಲಿದೆ ಅಂತ ಜಲ ಮಂಡಳಿಯಿಂದ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. 

Follow Us:
Download App:
  • android
  • ios