ನೀರಿನ ದರ ಪರಿಷ್ಕರಿಸುವಂತೆ ಎರಡು ವರ್ಷದ ಹಿಂದೆ ಸಲ್ಲಿಸಿದ್ದ ಪ್ರಸ್ತಾವನೆ ಪರಿಶೀಲಿಸಿ ಒಪ್ಪಿಗೆ ನೀಡುವಂತೆ ಬೆಂಗಳೂರು ಜಲಮಂಡಳಿ ರಾಜ್ಯ ಸರ್ಕಾರಕ್ಕೆ ಪುನಃ ಪತ್ರ ಬರೆದಿದ್ದು, ಸರ್ಕಾರ ಸಮ್ಮತಿ ನೀಡಿದರೆ ಜನರಿಗೆ ನೀರು ಇನ್ನಷ್ಟು ದುಬಾರಿಯಾಗಲಿದೆ.

ಬೆಂಗಳೂರು (ಜ.22): ನೀರಿನ ದರ ಪರಿಷ್ಕರಿಸುವಂತೆ ಎರಡು ವರ್ಷದ ಹಿಂದೆ ಸಲ್ಲಿಸಿದ್ದ ಪ್ರಸ್ತಾವನೆ ಪರಿಶೀಲಿಸಿ ಒಪ್ಪಿಗೆ ನೀಡುವಂತೆ ಬೆಂಗಳೂರು ಜಲಮಂಡಳಿ (BWSSB) ರಾಜ್ಯ ಸರ್ಕಾರಕ್ಕೆ ಪುನಃ ಪತ್ರ ಬರೆದಿದ್ದು, ಸರ್ಕಾರ ಸಮ್ಮತಿ ನೀಡಿದರೆ ಜನರಿಗೆ ನೀರು (Water) ಇನ್ನಷ್ಟು ದುಬಾರಿಯಾಗಲಿದೆ.

ಎರಡು ವರ್ಷದ(2019) ಹಿಂದೆ ಬೆಂಗಳೂರು ಜಲಮಂಡಳಿ ರಾಜ್ಯ ಸರ್ಕಾರಕ್ಕೆ ಗೃಹ ಬಳಕೆಯ(0-8,000 ಲೀ. ಬಳಕೆಗೆ) ಪ್ರತಿ ಸಾವಿರ ಲೀ.ಗೆ .7 ದರ ವಿಧಿಸುತ್ತಿತ್ತು. ಅದನ್ನು ಶೇ.16ರಷ್ಟುಹೆಚ್ಚಿಸುವಂತೆ ಹಾಗೂ ವಾಣಿಜ್ಯ ಬಳಕೆಯ(0-10,000 ಲೀ. ಬಳಕೆಗೆ) ಪ್ರತಿ ಸಾವಿರ ಲೀ.ಗೆ ಇದ್ದ .50 ದರವನ್ನು ಶೇ.21ರಷ್ಟುಹೆಚ್ಚಿಸುವಂತೆ ಪ್ರಸ್ತಾವನೆ ಸಲ್ಲಿಸಿತ್ತು.

ಆದರೆ, ಕೋವಿಡ್‌, ಲಾಕ್‌ಡೌನ್‌ ಕಾರಣದಿಂದ ಜಲಮಂಡಳಿ ಸಲ್ಲಿಸಿದ್ದ ಪ್ರಸ್ತಾವನೆ ಬಗ್ಗೆ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡಿರಲಿಲ್ಲ. ಲಾಕ್‌ಡೌನ್‌ ಜಾರಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ ವೇಳೆ ನೀರಿನ ದರ ಹೆಚ್ಚಳ ಮಾಡುವುದು ಸೂಕ್ತವಲ್ಲ ಎಂಬ ಕಾರಣದಿಂದ ಸರ್ಕಾರ ಪ್ರಸ್ತಾವನೆ ಪರಿಶೀಲನೆಗೆ ಮುಂದಾಗಿರಲಿಲ್ಲ. ಈಗ ನಗರದಲ್ಲಿ ಆರ್ಥಿಕ ಚಟುವಟಿಕೆ ಎಂದಿನಂತೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಲಮಂಡಳಿ ಪ್ರಸ್ತಾವನೆಗೆ ಒಪ್ಪಿಗೆ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿದೆ.

Nandini Milk: ಹಾಲಿನ ದರ ಹೆಚ್ಚಿಸಲು ಒತ್ತಾಯ: ಮಾಲೂರು ಶಾಸಕ ನಂಜೇಗೌಡ ಆಗ್ರಹ

ಜಲಮಂಡಳಿ 2014ರ ನಂತರ ದರ ಪರಿಷ್ಕರಣೆ ಮಾಡಿಲ್ಲ. ಕಳೆದ ಆರೇಳು ವರ್ಷಗಳಲ್ಲಿ ವಿದ್ಯುತ್‌ ದರ ಹಲವು ಬಾರಿ ಏರಿಕೆಯಾಗಿದೆ. 2014ರಲ್ಲಿ ಮಾಸಿಕ ಅಂದಾಜು .25ಕೋಟಿ ವಿದ್ಯುತ್‌ ಶುಲ್ಕ ಪಾವತಿಸುತ್ತಿದ್ದ ಜಲಮಂಡಳಿ ಸದ್ಯ ಅಂದಾಜು .60 ಕೋಟಿ ಪಾವತಿಸುತ್ತಿದೆ. ನಗರಕ್ಕೆ ನಿತ್ಯ 1400ಎಂಎಲ್‌ಡಿ ನೀರು ಪೂರೈಸುವ ಮೂಲಕ ಮಾಸಿಕ ಸುಮಾರು .115 ಕೋಟಿಯಷ್ಟುಆದಾಯ ಸಂಗ್ರಹವಾಗುತ್ತಿದೆ.

ಇದರಲ್ಲಿಯೇ ವಿದ್ಯುತ್‌ ಶುಲ್ಕ, ಅಧಿಕಾರಿ ಮತ್ತು ಸಿಬ್ಬಂದಿ ವೇತನ, ಕೊಳವೆಗಳ ಜೋಡಣೆ ಸೇರಿದಂತೆ ಅಗತ್ಯ ನಿರ್ವಹಣೆಯ ಖರ್ಚು ಸರಿದೂಗಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪ್ರಸ್ತಾವನೆ ಸಲ್ಲಿಸಿ ಎರಡು ವರ್ಷವಾದರೂ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳದ ಹಿನ್ನೆಲೆಯಲ್ಲಿ ಜಲಮಂಡಳಿ ಪತ್ರ ಬರೆದಿದೆ ಎಂದು ಮೂಲಗಳು ತಿಳಿಸಿವೆ.

ಶಾಕಿಂಗ್‌ ನ್ಯೂಸ್‌: ವಿದ್ಯುತ್‌ ಆಯ್ತು, ಈಗ ನೀರಿನ ದರವೂ ಹೆಚ್ಚಳ..!

ನೀರು ಪೂರೈಕೆ ಒಟ್ಟು ನಿರ್ವಹಣೆ ದೃಷ್ಟಿಯಿಂದ ದರ ಪರಿಷ್ಕರಿಸುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸದ್ಯ ಅದು ರಾಜ್ಯ ಸರ್ಕಾರದ ಮುಂದಿದ್ದು, ಎರಡು ವರ್ಷವೇ ಆಗಿದೆ. ಈ ಬಗ್ಗೆ ಏನನ್ನು ಹೇಳಲಾಗದು. ಎಲ್ಲದರ ಬಗ್ಗೆ ಸರ್ಕಾರವೇ ನಿರ್ಧರಿಸಲಿದೆ.
-ಎನ್‌.ಜಯರಾಮ್‌, ಬೆಂಗಳೂರು ಜಲಮಂಡಳಿ ಅಧ್ಯಕ್ಷ