ಅನ್ನಭಾಗ್ಯಕ್ಕೆ ರಾಜ್ಯದ ರೈತರಿಂದಲೇ ಭತ್ತ, ರಾಗಿ, ಜೋಳ ಖರೀದಿಸಿ: ಕುರುಬೂರು ಶಾಂತಕುಮಾರ್‌

ರಾಜ್ಯದ ರೈತರಿಂದಲೇ ಭತ್ತ, ರಾಗಿ, ಜೋಳ ಖರೀದಿಸಿ ಅನ್ನಭಾಗ್ಯ ಯೋಜನೆಗೆ ಉಪಯೋಗಿಸಿಕೊಳ್ಳಿ. ಆ ಮೂಲಕ ರಾಜ್ಯದ ರೈತರನ್ನ ರಕ್ಷಿಸಿ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ ಆಗ್ರಹಿಸಿದ್ದಾರೆ. 

buy rice millet and maize from state farmers for anna bhagya yojana says kuruburu shanthakumar gvd

ಮೈಸೂರು (ಜೂ.16): ರಾಜ್ಯದ ರೈತರಿಂದಲೇ ಭತ್ತ, ರಾಗಿ, ಜೋಳ ಖರೀದಿಸಿ ಅನ್ನಭಾಗ್ಯ ಯೋಜನೆಗೆ ಉಪಯೋಗಿಸಿಕೊಳ್ಳಿ. ಆ ಮೂಲಕ ರಾಜ್ಯದ ರೈತರನ್ನ ರಕ್ಷಿಸಿ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ ಆಗ್ರಹಿಸಿದ್ದಾರೆ. 

ಈ ಸಂಬಂಧ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿರುವ ಅವರು, ಮುಖ್ಯಮಂತ್ರಿಯವರು ಕೇಂದ್ರ ಸರ್ಕಾರಕ್ಕೆ ಹಾಗೂ ಬೇರೆ ಬೇರೆ ರಾಜ್ಯಗಳಿಗೆ ಅಕ್ಕಿ ಖರೀದಿ ಬೇಡಿಕೆ ಸಲ್ಲಿಸಲಾಗಿದ್ದು, ಅದಕ್ಕೆ ಕೇಂದ್ರ ಸರ್ಕಾರ ಸಮ್ಮತಿ ನೀಡಿಲ್ಲ ಎಂದು ಹೇಳಿದ್ದೀರಿ. ರಾಜ್ಯದ ಜನರ ತೆರಿಗೆ ಹಣವನ್ನು ಕೇಂದ್ರ ಸರ್ಕಾರಕ್ಕೆ ಕೊಡುವ ಬದಲು, ರಾಜ್ಯದ ರೈತರಿಂದಲೇ ನೇರವಾಗಿ ಭತ್ತ, ರಾಗಿ ಜೋಳ ಖರೀದಿ ಮಾಡಿ ಅದನ್ನ ಬಡವರಿಗೆ ಅನ್ನ ಭಾಗ್ಯ ಯೋಜನೆಯಲ್ಲಿ ವಿತರಿಸುವ ಯೋಜನೆ ಕೈಗೆತ್ತಿಕೊಂಡರೆ ಖಂಡಿತವಾಗಿ ರಾಜ್ಯದ ರೈತರಿಗೂ ಅನುಕೂಲವಾಗುತ್ತದೆ. ಬಡವರಿಗೂ ಅನುಕೂಲವಾಗುತ್ತದೆ. ಈ ದಿಕ್ಕಿನಲ್ಲಿ ಚಿಂತನೆ ನಡೆಸುವುದು ಬಹಳ ಮುಖ್ಯವಾಗಿದೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಅರಣ್ಯ ವ್ಯಾಪ್ತಿಯನ್ನು ಶೇ.33ಕ್ಕೆ ಹೆಚ್ಚಿಸಲು ಸರ್ಕಾರ ಪ್ರಯತ್ನ: ಸಚಿವ ಈಶ್ವರ ಖಂಡ್ರೆ

ಬಡವರಿಗೆ 200 ಯೂನಿಟ್‌ ಉಚಿತ ವಿದ್ಯುತ ನೀಡುವ ಯೋಜನೆ ಘೋಷಣೆ ಮಾಡಿದ್ದೀರಿ. ಅದರ ಉತ್ಪಾದನೆಗೆ ತಗಲುವ ವೆಚ್ಚ ಎಷ್ಟು? ಸರ್ಕಾರದಿಂದ ಆಗುವ ಖರ್ಚು ಎಷ್ಟುಲೆಕ್ಕ ಹಾಕಬೇಕು. ಅದರ ಬದಲು ಸಣ್ಣ ಮಟ್ಟದ ಒಂದು ಕೆ.ವಿ ಸಾಮರ್ಥ್ಯದ ಸೋಲಾರ್‌ ವಿದ್ಯುತ್‌ ಯೋಜನೆಯನ್ನು ಪ್ರತಿ ಮನೆಗೆ ಕಲ್ಪಿಸಿದರೆ, ಶಾಶ್ವತವಾದ ಯೋಜನೆಯಾಗುತ್ತದೆ. ಇದರಿಂದ ಪರಿಸರ ಸಂರಕ್ಷಣೆಯಾಗುತ್ತದೆ. ಸರ್ಕಾರಕ್ಕೂ ಪ್ರತಿ ವರ್ಷ ಹೂರೆಯಾಗುವುದು ಕಡಿಮೆಯಾಗುತ್ತದೆ. ಈ ಬಗೆಯು ಮುಖ್ಯಮಂತ್ರಿಯವರು ಗಂಭೀರವಾಗಿ ಚಿಂತೆನೆ ನಡೆಸಬೇಕು ಎಂದು ಅವರು ಹೇಳಿದ್ದಾರೆ.

ಗೋ ಹತ್ಯೆ ನಿಷೇಧ ಕಾಯ್ದೆ ಸಮಗ್ರ ಚರ್ಚೆಯಾಗಲಿ: ಗೋ ಹತ್ಯೆ ನಿಷೇಧ ಕಾಯ್ದೆ ರದ್ದು ಮಾಡುವ ಬದಲು ಕಾಯ್ದೆಯ ಕುರಿತು ಸಮಗ್ರ ಚರ್ಚೆಯಾಗಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘ, ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ ಆಗ್ರಹಿಸಿದರು. ನಗರದ ಗನ್‌ಹೌಸ್‌ನಲ್ಲಿರುವ ಕುವೆಂಪು ಉದ್ಯಾನವನದಲ್ಲಿ ರೈತ ಮುಖಂಡರ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ಬಗ್ಗೆ ರೇಷ್ಮೆ ಸಚಿವರು ಕೋಣನಿಗೂ, ಹಸುವಿಗೂ ಹೋಲಿಕೆ ಮಾಡಿರುವುದು ಸರಿಯಲ್ಲ. ಹಸುಗಳು ರೈತರ ಬದುಕಿಗೆ ಆಸರೆಯಾಗಿ ಕಾಯಕ ಮಾಡುತ್ತವೆ. 

ರೈತರ ಜೀವನಾಡಿಗಳಾಗಿವೆ. ರೈತರು ಗೋವುಗಳನ್ನು ಗೌರವ ಭಾವನೆಯಿಂದ ಪೂಜಿಸುತ್ತಾರೆ. ಇಂತಹ ಪ್ರಾಣಿಗಳನ್ನು ಹತ್ಯೆ ಮಾಡಿ ಎಂದು ಹೇಳುವುದು ಒಪ್ಪುವಂತದ್ದಲ್ಲ ಎಂದು ಖಂಡಿಸಿದರು. ಅನಾದಿ ಕಾಲದಿಂದಲೂ ಕೃಷಿ ಜೊತೆ ಜೊತೆಯಾಗಿ ಬದುಕು ನಡೆಸುತ್ತಿರುವ ಗೋವುಗಳನ್ನು ಮಾನವೀಯತೆ ಮೀರಿ ಕೊಲ್ಲಲು ಅವಕಾಶ ಕೊಡುವುದು ನಮ್ಮ ಸಂಸ್ಕೃತಿ ಅಲ್ಲ. ಗೋವುಗಳ ವಿಚಾರದಲ್ಲಿ ಧರ್ಮ ರಾಜಕಾರಣ ಮಾಡುವುದನ್ನು ಬಿಡಬೇಕು. ಕಾನೂನಿನಲ್ಲಿರುವ ಸಾಧಕ ಬಾದಕಗಳ ಬಗ್ಗೆ ಸಮಗ್ರ ಚರ್ಚೆ ನಡೆಸಬೇಕು. ಗೋ ಹತ್ಯೆ ನಿಷೇಧ ಕಾಯ್ದೆ ಕುರಿತು ಜೂ.28 ರಂದು ಬೆಂಗಳೂರಿನಲ್ಲಿ ರೈತ ಸಂಘಟನೆಗಳ ರಾಜ್ಯಮಟ್ಟದ ವಿಚಾರ ಸಂಕಿರಣ ನಡೆಸಲಿದ್ದೇವೆ ಎಂದರು.

ಬೇಡಿಕೆ ಕಳೆ​ದು​ಕೊಂಡ ಶಿಕ್ಷಣ ಹಕ್ಕು ಕಾಯಿದೆ: ಬದ​ಲಾದ ನಿಯ​ಮ​ದಿಂದಾಗಿ ಸೀಟು ಕೇಳು​ವ​ವರೇ ಇಲ್ಲ!

ಕಾಡು ಪ್ರಾಣಿಗಳಿಂದ ಕಾಡಂಚಿನ ಭಾಗದ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ರೈತರ ಬೆಳೆಗಳ ನಾಶ ತಪ್ಪಿಸಲು ಕಾಡಿನ ಒಳಗೆ ಇರುವ ಎಲ್ಲಾ ರೆಸಾರ್ಚ್‌ಗಳನ್ನು ಮುಚ್ಚಿಸಬೇಕು. ಕಾಡಿನ ಒಳಗೆ ಗಣಿಗಾರಿಕೆ ನಿಲ್ಲಿಸಬೇಕು. ಪ್ರಾಣಿಗಳು ಕಾಡಿನ ಒಳಗೆ ಸ್ವೇಚ್ಛಾಚಾರವಾಗಿ ತಿರುಗಾಡಲು ಅವಕಾಶವಾಗುತ್ತಿಲ್ಲ. ಇದರಿಂದ ನಾಡಿಗೆ ಬಂದು ಜನರ ಬಲಿ ಪಡೆಯುತ್ತಿವೆ. ಈ ಸಂಬಂಧ ಸರ್ಕಾರ ಎಚ್ಚೆತ್ತುಕ್ಕೊಳ್ಳದಿದ್ದರೆ ಕಾಡಿನ ಒಳಗೆ ಇರುವ ಅರಣ್ಯ ಇಲಾಖೆ ಕಚೇರಿಗಳನ್ನು ಮುಚ್ಚಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

Latest Videos
Follow Us:
Download App:
  • android
  • ios