ಬ್ರಹ್ಮಾವರ(ಜೂ.22): ಇಲ್ಲಿನ ಬಾರ್ಕೂರಿಂದ ಸಾಯ್ಬರಕಟ್ಟೆ ಮಾರ್ಗದ ತಿರುವಿನಲ್ಲಿರುವ ಇತಿಹಾಸ ಪ್ರಸಿದ್ಧ ಚೌಳಿ ಕೆರೆಗೆ ಭಾನುವಾರ ಕಾರು ಬಿದ್ದು ಉದ್ಯಮಿ ಸಂತೋಷ್‌ ಶೆಟ್ಟಿ(40) ಎಂಬವರು ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ 23 ವರ್ಷದ ಯುವತಿ ಗಂಭೀರ ಗಾಯಗಳೊಂದಿಗೆ ಪಾರಾಗಿದ್ದಾರೆ.

"

ಭಾನುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಸಂತೋಷ್‌ ಶೆಟ್ಟಿ ಅವರು ತಮ್ಮ ಕ್ರೇಟಾ ಕಾರನ್ನು ಚಲಾಯಿಸುತಿದ್ದರು. ಕಾರು ವೇಗಕ್ಕೆ ನಿಯಂತ್ರಣ ತಪ್ಪಿ ಆವರಣ ಗೋಡೆ ಇಲ್ಲ ವಿಶಾಲವಾದ ಕೆರೆಗೆ ಬಿದ್ದಿದೆ ಎಂದು ಭಾವಿಸಲಾಗಿದೆ.

ದಕ್ಷಿಣ ಕನ್ನಡದಲ್ಲಿ ಮುಂಗಾರು ಚುರುಕು: ಗುಡುಗು ಸಹಿತ ಭಾರೀ ಮಳೆ

ತಕ್ಷಣ ಸ್ಥಳೀಯರು ಕಾರಿನಿಂದ ಸಂತೋಷ್‌ ಮತ್ತು ಯುವತಿಯನ್ನು ಹೊರಗೆ ತೆಗೆದಾಗ ಇಬ್ಬರೂ ಪ್ರಜ್ಞೆ ಕಳೆದುಕೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ, ಸಂತೋಷ್‌ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಯುವತಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಸಂತೋಷ್‌ ಅವರು ಬೀಜಾಡಿಯಲ್ಲಿ ಫ್ಲೈವುಡ್‌ ಅಂಗಡಿ ನಡೆಸುತ್ತಿದ್ದರು. ಅವರಿಗೆ 4 ವರ್ಷದ ಮಗುವಿದ್ದು, ಈಗ ಪತ್ನಿ ತುಂಬಿ ಗರ್ಭಿಣಿಯಾಗಿದ್ದಾರೆ. ಈ ಸಂಬಂಧ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"