ಮೈಸೂರು(ಫೆ.15): 35 ಜನ ಅಯ್ಯಪ್ಪ ವೃತಧಾರಿಗಳಿದ್ದ ಬಸ್‌ ಹೊತ್ತಿ ಉರಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಭಕ್ತರು ಅಯ್ಯಪ್ಪ ಸ್ವಾಮಿ ದರ್ಶನಕ್ಕೆಂದು ಶಬರಿಮಲೆಗೆ ಹೊರಟಿದ್ದರು.

ಅಯ್ಯಪ್ಪನ ದರ್ಶನಕ್ಕೆ ತೆರಳಿದ್ದ ಬಸ್ ಬೆಂಕಿಗೆ ಆಹುತಿಯಾಗಿದ್ದು, ಕರ್ನಾಟಕದಿಂದ ಶಬರಿ ಮಲೆಗೆ ತೆರಳಿದ್ದ 35ಕ್ಕೂ ಹೆಚ್ಚು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶುಕ್ರವಾರ ಸಂಜೆ 7.45 ರ ವೇಳೆ ಘಟನೆ ನಡೆದಿದ್ದು, ನೆಲಕ್ಕಲ್‌ನಿಂದ ಪಂಪಾಗೆ ಕೇರಳ ಸರ್ಕಾರಿ ಬಸ್‌ನಲ್ಲಿ ತೆರಳುವಾಗ ಬೆಂಕಿ ಅಪಘಾತ ಸಂಭವಿಸಿದೆ.

ರಾಜಮನೆತನದೊಳಗೆ ಕಿತ್ತಾಟ, ಅಯ್ಯಪ್ಪನ ಆಭರಣ ಪಟ್ಟಿ ತಯಾರಿಗೆ ಸುಪ್ರೀಂ ಆದೇಶ!

ಬಸ್‌ನಲ್ಲಿ ಮೈಸೂರಿನ ಹೂಟಗಳಲ್ಲಿಯ 23 ಮಂದಿ ಅಯ್ಯಪ್ಪನ ಭಕ್ತರು ಇದ್ದರು. ಟಯರ್ ಸ್ಪೋಟಗೊಂಡು ಸರ್ಕಾರಿ ಬಸ್‌‌ ಹೊತ್ತಿ ಉರಿದಿದೆ. ಸ್ಥಳೀಯರು ಹಾಗೂ ಇತರೆ ಪ್ರಯಾಣಿಕರು ಭಕ್ತರನ್ನು ರಕ್ಷಿಸಿದ್ದಾರೆ. ಘಟನೆಯಿಂದ ಓರ್ವ ಯುವಕನಿಗೆ ಗಾಯಗಳಾಗಿವೆ.

ಪ್ರೇಮಿಗಳ ದಿನದಂದೇ ಯುವಕನ ಮರ್ಮಾಂಗಕ್ಕೆ ಕತ್ತರಿ

ಯುವಕನನ್ನು ಕೇರಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಸ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಮೈಸೂರಿನ ಹೂಟಗಳ್ಳಿ ನಿವಾಸಿಗಳು ಪ್ರಾಣಾಪಯಾದಿಂದ ಪಾರಾಗಿದ್ದಾರೆ.