ಮೈಸೂರು (ಜು.17): ಕೇಬಲ್‌ ಅಳವಡಿಸಲು ತೋಡಿದ ಗುಂಡಿಯನ್ನು ಸರಿಯಾಗಿ ಮುಚ್ಚದ ಕಾರಣ ರಸ್ತೆಯಲ್ಲೇ ಕೆಎಸ್‌ಆರ್‌ಟಿಸಿ ಬಸ್‌ನ ಚಕ್ರ ಹೂತುಗೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಕೇಬಲ್‌ ಅಳವಡಿಸಲು ತೋಡಿದ ಗುಂಡಿಗೆ ಸರಗೂರಿನಿಂದ ಸಾಗರೆಗೆ ಸಂಚರಿಸುವ ಬಸ್‌ ಚಕ್ರ ಸಿಕ್ಕಿಹಾಕಿಕೊಂಡು ಪ್ರಯಣಿಕರು ಪರದಾಡಿದರು. ಪ್ರತಿನಿತ್ಯವೂ ಈ ರಸ್ತೆಯಲ್ಲಿ ಬಸ್‌ ಹಾಗೂ ಲಾರಿ ಸೇರಿದಂತೆ ಹಲವು ವಾಹನಗಳ ಚಕ್ರ ಗುಂಡಿಯಲ್ಲಿ ಹೂತುಕೊಂಡು ಬಾಕಿಯಾಗುವುದರಿಂದ ವಾಹನ ಸವಾರರಿಗೆ ತುಂಬಾ ತೊಂದರೆ ಉಂಟಾಗುತ್ತಿದೆ.

221 ರಸ್ತೆ ಗುಂಡಿ ಮುಚ್ಚಿದ ಬೆಂಗಳೂರು ಸಂಚಾರ ಪೊಲೀಸರು!

ಕೇಬಲ್‌ ಅಳವಡಿಸಲು ತೋಡಿರುವ ಗುಂಡಿಯನ್ನು ಗುತ್ತಿಗೆದಾರ ಸರಿಯಾಗಿ ಮುಚ್ಚದೇ ಇರುವುದರಿಂದ ವಾಹನ ಸವಾರರು ಹಾಗೂ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ಸಂಬಂಧಪಟ್ಟಅಧಿಕಾರಿಗಳು ಗಮನಹರಿಸಿ ಗುಂಡಿ ಸರಿಯಾಗಿ ಮುಚ್ಚಿಸಿ ಹಾಗೂ ಗುತ್ತಿಗೆ ದರನ ಮೇಲೆ ಕ್ರಮ ಕೈಗೊಳ್ಳುವಂತೆ ಪ್ರಯಾಣಿಕರು ಹಾಗೂ ವಾಹನ ಸವಾರರು ಒತ್ತಾಯಿಸಿದ್ದಾರೆ.