ಬಸ್ ಮುಷ್ಕರ;  32 ಸಿಬ್ಬಂದಿಗೆ ಗೇಟ್ ಪಾಸ್.. ಎಲ್ಲರಿಗೂ ನೋಟಿಸ್

ಕೆಎಸ್‌ಆರ್‌ಟಿಸಿಯಿಂದ ದಿಟ್ಟ ಕ್ರಮ/ ಮುಷ್ಕರ ನಿರತರಿಗೆ ಎಚ್ಚರಿಕೆ ನೀಡಿದ್ದ ಸರ್ಕಾರದಿಂದ ಮೊದಲ ಅಸ್ತ್ರ ಪ್ರಯೋಗ/ ಕೆಎಸ್ ಆರ್ ಟಿಸಿಯ 32 ತರಬೇತಿ ನೌಕರರು ವಜಾ/ ಸೇವೆಗೆ ಹಾಜರಾಗಲು ನೋಟಿಸ್

Bus Strike 32 KSRTC trainee employees dismissed from duty mah

ಬೆಂಗಳೂರು(ಏ. 08) ಮುಷ್ಕರ ನಿರತರಿಗೆ ಎಚ್ಚರಿಕೆ ನೀಡಿದ್ದ ಸರ್ಕಾರ ಮೊದಲ ಅಸ್ತ್ರ ಪ್ರಯೋಗ ಮಾಡಿದೆ. ಕೆಎಸ್ ಆರ್ ಟಿಸಿಯ 32 ತರಬೇತಿ ನೌಕರರನ್ನು ವಜಾ  ಮಾಡಲಾಗಿದೆ.

32 ತರಬೇತಿ ನೌಕರರನ್ನು ವಜಾಗೊಳಿಸಿ ಆದೇಶ ಹೊರಡಿಸಲಾಗಿದೆ. ಸಾರಿಗೆ ನೌಕರರ ಮುಷ್ಕರ ಬೆಂಬಲಿಸಿ ಕೆಲಸಕ್ಕೆ ಗೈರಾದ 32 ನೌಕರರು ಕೆಲಸದಿಂದ ವಜಾ ಆಗಿದ್ದಾರೆ. ಕೋಲಾರ -3, ದಾವಣಗೆರೆ 1, ಶಿವಮೊಗ್ಗ 2, ಹಾಸನ 1 ಮೈಸೂರು 3, ಚಿಕ್ಕಬಳ್ಳಾಪುರ 2, ಮಂಡ್ಯ 2, ಚಾಮರಾಜನಗರ 4, ರಾಮನಗರ 1, ಚಿಕ್ಕಮಗಳೂರಿನ  2, ಮಂಗಳೂರು 9 ನೌಕರರು ಹಾಗೂ ಪುತ್ತೂರು ಘಟಕದ 2 ನೌಕರರು ಸೇರಿ ಒಟ್ಟು 32 ಜನ ತರಬೇತಿ‌ ನೌಕರರು ಕೆಲಸದಿಂದ ವಜಾ ಆಗಿದ್ದಾರೆ.

ನಿವೃತ್ತ ಸಿಬ್ಬಂದಿಯಿಂದ ಬಸ್ ಓಡಿಸಲು ನಿರ್ಧಾರ

ಬಸ್ಸಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸತ್ಯಪ್ಪ ಅವರನ್ನು ಮಾರ್ಗ ಮಧ್ಯದಲ್ಲಿ ಅಡ್ಡಗಟ್ಟಿ, ಪೆಟ್ರೋಲ್ ಎರಚಿ ಬೆದರಿಕೆ ಒಡ್ಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆ ಕೆ.ಶ್ರೀನಿವಾಸ (ಚಾಲಕ ಶ್ರೀನಿವಾಸಪುರ ಘಟಕ ) ಸೇವೆಯಿಂದ ಅಮಾನತು ಮಾಡಲಾಗಿದೆ

ಇನ್ನು ಪ್ರೊಬೆಷನರಿ ನೌಕರರಿಗೂ ಬಿಎಂಟಿಸಿ ನಿಗಮದಿಂದ‌ ನೋಟೀಸ್  ನೀಡಲಾಗಿದೆ. ಕರ್ತವ್ಯಕ್ಕೆ ಹಾಜರಾಗುವಂತೆ ನೋಟಿಸ್  ನೀಡಲಾಗಿದ್ದು  ನಾಳೆ ಕರ್ತವ್ಯಕ್ಕೆ ಹಾಜರಾಗುವಾಗ ಲಿಖಿತ ರೂಪದ ಸಮಜಾಯಿಸಿ ತರುವಂತೆ ಸೂಚಿಸಲಾಗಿದೆ. ಪರೀಕ್ಷಣಾರ್ಥ ಸೇವೆಯಲ್ಲಿರುವವರಿಗೆ ವಜಾಗೊಳಿಸುವ ಎಚ್ಚರಿಕೆ ನೀಡಲಾಗಿದೆ. 

 

Latest Videos
Follow Us:
Download App:
  • android
  • ios