Asianet Suvarna News Asianet Suvarna News

ಹುಬ್ಬಳ್ಳಿ: ಮಹಾರಾಷ್ಟ್ರದ ವಲಸೆ ಕಾರ್ಮಿಕರಿಗೆ ಬಸ್‌ ವ್ಯವಸ್ಥೆ

ಲಾರಿಗಳಲ್ಲಿ ಅಕ್ರಮವಾಗಿ ಹೋಗುತ್ತಿದ್ದ 184 ಮಂದಿ ಮಹಾರಾಷ್ಟ್ರ ಕಾರ್ಮಿಕರಿಗೆ ಬಸ್‌ ವ್ಯವಸ್ಥೆ| ಹುಬ್ಬಳ್ಳಿಯ ವರೂರು- ಅಗಡಿ ಚೆಕ್‌ಪೋಸ್ಟ್‌ ಬಳಿ ಲಾರಿ ತಡೆದು ಪೊಲೀಸರು ಪರಿಶೀಲಿಸಿದಾಗ ಕಾರ್ಮಿಕರಿರುವುದು ಪತ್ತೆ| ಲಾರಿ ಚಾಲಕರ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು|

Bus Fecility to Maharashtra Based Migrant Workers in  Hubballi
Author
Bengaluru, First Published May 29, 2020, 9:51 AM IST | Last Updated May 29, 2020, 9:51 AM IST

ಹುಬ್ಬಳ್ಳಿ(ಮೇ.29): ಚಿತ್ರದುರ್ಗದಿಂದ ಮಹಾರಾಷ್ಟ್ರದತ್ತ ಅಕ್ರಮವಾಗಿ ಲಾರಿಯಲ್ಲಿ ವಲಸೆ ಕಾರ್ಮಿಕರನ್ನು ಸಾಗಿಸುತ್ತಿದ್ದುದನ್ನು ಪತ್ತೆ ಹಚ್ಚಿರುವ ಜಿಲ್ಲಾಡಳಿತ ಅವರನ್ನು ಬಸ್‌ ಮೂಲಕ ಅವರ ಊರುಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಿದೆ.

ಚಿತ್ರದುರ್ಗ ಜಿಲ್ಲೆಯಿಂದ ಮಹಾರಾಷ್ಟ್ರದ 184 ಕಾರ್ಮಿಕರು 2 ಲಾರಿಗಳಲ್ಲಿ ಯಾವುದೇ ಸಾಮಾಜಿಕ ಅಂತರ ಇಲ್ಲದೇ, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಪ್ರಯಾಣಿಸುತ್ತಿದ್ದರು. ಈ ವೇಳೆ ಹುಬ್ಬಳ್ಳಿಯ ವರೂರು- ಅಗಡಿ ಚೆಕ್‌ಪೋಸ್ಟ್‌ ಬಳಿ ಲಾರಿ ತಡೆದು ಪೊಲೀಸರು ಪರಿಶೀಲಿಸಿದಾಗ ಕಾರ್ಮಿಕರಿರುವುದು ಪತ್ತೆಯಾಗಿದ್ದು, ಬಳಿಕ ಅವರನ್ನು ತಪಾಸಣೆಗೊಳಿಸಲಾಯಿತು.

ಲಾಕ್‌ಡೌನ್‌ ಎಫೆಕ್ಟ್‌: ಮದುವೆ ಮುಂದೂಡಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ 

ನಂತರ ಮಹಾರಾಷ್ಟ್ರ ಅಧಿಕಾರಿಗಳ ಭರವಸೆ ಮೇರೆಗೆ ಬಸ್‌ ವ್ಯವಸ್ಥೆ ಮಾಡಿ 6 ಬಸ್‌ಗಳಲ್ಲಿ ಬೆಳಗಾವಿಯ ನಿಪ್ಪಾಣಿ ಗಡಿವರೆಗೆ ಕಾರ್ಮಿಕರನ್ನು ತಲುಪಿಸಲಾಯಿತು. ಅಲ್ಲಿಂದ ಮಹಾರಾಷ್ಟ್ರದ ಬಸ್‌ಗಳು ತಮ್ಮ ಕಾರ್ಮಿಕರನ್ನು ಕರೆದ್ಯೊಯಲಿವೆ. ಲಾರಿ ಚಾಲಕರ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Latest Videos
Follow Us:
Download App:
  • android
  • ios