ಮಂಡ್ಯ(ಜ.12): ಕಾಡು ಪ್ರಾಣಿಗಳಾಗಲಿ ಸಾಕು ಪ್ರಾಣಿಗಳಾಗಲಿ ಅವುಗಳ ಸ್ವಭಾವ ನಡತೆಯನ್ನು ತಕ್ಷಣಕ್ಕೆ ಹೀಗೇ ಎಂದು ಹೇಳುವುದು ಕಷ್ಟದ ಕೆಲಸ. ಕೆಲವೊಮ್ಮೆ ಇದ್ದಕ್ಕಿದ್ದಂತೆ ವಯಲೆಂಟ್ ಆಗುತ್ತವೆ.

ಮನೆಯಲ್ಲಿಯೇ ಪ್ರೀತಿಯಿಂದ ಸಾಕಿದ್ದ ಎತ್ತು ಮನೆಯ ಬಾಲಕನನ್ನೇ ತಿವಿದು ಸಾಯಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಯತ್ತಂಬಾಡಿ ಗ್ರಾಮದಲ್ಲಿ ಘಟನೆ ನಡೆದಿದೆ.

ನಿರ್ಗತಿಕನ ಗುದ್ದಿ ಬೀಳಿಸಿ ಹಿಂದಿರುಗಿ ಬಂದು ಆಟೋ ಹತ್ತಿಸಿದ

ಮಾದೇಶ್ (13) ಮೃತ ದುರ್ದೈವಿ ಬಾಲಕ. ರಾತ್ರಿ ಹೊತ್ತಲ್ಲಿ ಎತ್ತಿಗೆ ಹುಲ್ಲು ಹಾಕಲೆಂದು ಬಾಲಕ ಹೋಗಿದ್ದ. ಇದೇ ಸಂದರ್ಭದಲ್ಲಿ ಬಾಲಕನಿಗೆ ಎತ್ತು ತಿವಿದು ದುರ್ಘಟನೆ ನಡೆದಿದೆ.

ಎತ್ತು ಕೊಂಬಿನಿಂದ ಬಾಲಕನನ್ನು ತಿವಿದು ಸಾಯಿಸಿದೆ. ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಇದೀಗ ಹಸು ಮತ್ತು ಬಾಲಕನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.