ಮೈಸೂರು(ಜ.12): ನಿರ್ಗತಿಕನ ಮೇಲೆ ಆಟೋ ಡ್ರೈವರ್ ಅಟ್ಟಹಾಸ ತೋರಿಸಿದ್ದು, ಮೈಸೂರಿನಲ್ಲಿ ಆಟೋ ಡ್ರೈವರೊಬ್ಬನ ಅಮಾನವೀಯ ವರ್ತನೆ ಈಗ ಸುದ್ದಿಯಾಗಿದೆ. ರಸ್ತೆ ಬದಿ ನಿಂತಿದ್ದ ನಿರ್ಗತಿಕನ ಮೇಲೆ ದುಷ್ಟ ಆಟೋ ಚಾಲಕ ಆಟೋ ಹತ್ತಿಸಿದ್ದಾನೆ.

ಮೈಸೂರಿನ ಗಾಂಧಿ ನಗರದ 4 ಕ್ರಾಸ್ ನಲ್ಲಿ ಅಮಾನವೀಯ ಘಟನೆ ನಡೆದಿದ್ದು, ರಸ್ತೆ ಬದಿ ನಿಂತಿದ್ದ ನಿರ್ಗತಿಕನಿಗೆ ದುರುಳ ಏಕಾಏಕಿ ಆಟೋದಿಂದ ಗುದ್ದಿ ಕೆಳಗೆ ಬೀಳಿಸಿದ್ದಾನೆ.

ಗುಂಡು ಹಾರಿಸೋದು ತೋರಿಸುತ್ತೇನೆಂದು ಪತ್ನಿ ತಲೆಗೆ ಗುಂಡಿಟ್ಟ

ಗುದ್ದಿ ಕೆಳ ಬೀಳಿಸಿ ನಂತರ‌ ಮತ್ತೆ ಸ್ವಲ್ಪ ದೂರ ಹೋಗಿ ಆಟೋ ತಿರುಗಿಸಿ ಬಂದು ಬಿದ್ದಿದವರ ಮೇಲೆ ಮತ್ತೆ ಆಟೋ ಹತ್ತಿಸಿ ದರ್ಪ ತೋರಿಸಿದ್ದಾನೆ. ಆಟೋ ಡ್ರೈವರ್ ನ ಕೃತ್ಯ ಸಿಸಿಟಿವಿಯಲ್ಲಿ ಸೆರೆಸಿಕ್ಕಿದೆ. ನಿರ್ಗತಿಕ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಕೆ ಆರ್ ಆಸ್ಪತ್ರೆಯಲ್ಲಿ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಎನ್ ಆರ್ ಠಾಣೆ ‌ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.