ಕಾರವಾರ(ಡಿ.06): ತಾಲೂಕಿನ ಗೋಯರ್‌ ಅರಣ್ಯ ಪ್ರದೇಶದಲ್ಲಿ ಉರುವಲು ಕಟ್ಟಿಗೆ ಆಯುತ್ತಿದ್ದ ಮಹಿಳೆಗೆ ಬೇಟೆಗಾರರು ಹಾರಿಸಿದ ಗುಂಡು ತಗುಲಿದ್ದು, ತೀವ್ರ ಗಾಯಗೊಂಡ ಘಟನೆ ಶನಿವಾರ ಸಂಭವಿಸಿದೆ.

ರಸಿಕಾ ರಮೇಶ ದೇಸಾಯಿ ಗಾಯಗೊಂಡ ಮಹಿಳೆ. ಶುಕ್ರವಾರ ಬೆಳಗ್ಗೆ 7 ಗಂಟೆಯ ವೇಳೆಗೆ ಪತಿಯೊಂದಿಗೆ ಕಟ್ಟಿಗೆ ಆಯಲು ಅರಣ್ಯಕ್ಕೆ ತೆರಳಿದಾಗ ಬಂದೂಕಿನಿಂದ ಬಂದ ಗುಂಡು ರಸಿಕಾ ಅವರ ಎಡಭುಜಕ್ಕೆ ತಗುಲಿದೆ. ತೀವ್ರ ರಕ್ತಸ್ರಾವವಾಗಿ ಎಚ್ಚರ ತಪ್ಪಿ ಬಿದ್ದಿದ್ದ ಅವರನ್ನು ಪತಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸುತ್ತಿದ್ದಾರೆ.

ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನ: ಸುಲಿಗೆಕೋರನ ಮೇಲೆ ಗುಂಡಿನ ದಾಳಿ

ಈ ಕುರಿತಂತೆ ಕದ್ರಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬೇಟೆಯಾಡಲು ಬಂದವರು ಪ್ರಾಣಿ ಎಂದು ಭಾವಿಸಿ ಮಹಿಳೆಗೆ ಗುಂಡು ಹೊಡೆದಿರುವ ಬಗ್ಗೆ ಅನುಮಾನವಿದ್ದು, ಆರೋಪಿತರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.