ಬೆಂಗಳೂರು[ನ. 25]: ನ್ಯಾಯಾಲಯದ ತೀರ್ಪಿನಂತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದರೆ ಸಾಲದು, ದೇಶದಲ್ಲಿ ರಾಮರಾಜ್ಯ ನಿರ್ಮಾಣವಾಗಬೇಕು. ಇದಕ್ಕೆ ಯುವಕರು ಸಾಗಬೇಕಿದ್ದು, ಹಿರಿಯರು ಪೂರಕವಾಗಿ ನಿಲ್ಲಬೇಕು ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ತಿಳಿಸಿದ್ದಾರೆ.

ಭಾನುವಾರ ಮಹಾಲಕ್ಷ್ಮೇ ಪುರದಲ್ಲಿ ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್‌ ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ತೀರ್ಪು ನೀಡಿದೆ. ಆದರೆ ಅಲ್ಲಿ ಕೇವಲ ರಾಮಮಂದಿರ ನಿರ್ಮಿಸುವುದೊಂದೇ ನಮ್ಮ ಉದ್ದೇಶವಾಗಬಾರದು. ಅದರ ಜತೆಗೆ ದೇಶವನ್ನು ರಾಮರಾಜ್ಯ ಮಾಡುವ ನಿಟ್ಟಿನಲ್ಲಿ ಶ್ರಮಿಸಬೇಕು. ಇದಕ್ಕೆ ಹಿರಿಯರು ಕಿರಿಯರನ್ನು ಸರಿದಾರಿಯಲ್ಲಿ ನಡೆಸಬೇಕು ಎಂದರು.

ಚಕ್ರವರ್ತಿ ದೇಶದ್ರೋಹಿ ಅಂತ ಹೇಳಿಲ್ಲ: ಡಿವಿಎಸ್‌

ಪುರಾತನ ಯೋಗದ ಬಗ್ಗೆ ಭಾರತೀಯರಿಗೆ ಮಾತ್ರ ತಿಳಿದಿತ್ತು. ಅಂತಹ ಕಲೆಯನ್ನು ವಿಶ್ವಕ್ಕೆ ತಲುಪಿಸಲು ಪ್ರಧಾನಿ ನರೇಂದ್ರ ಮೋದಿ ‘ಅಂತಾರಾಷ್ಟ್ರೀಯ ಯೋಗ ದಿನ’ಕ್ಕೆ ಚಾಲನೆ ಕೊಟ್ಟರು. ಅದರಿಂದಲೇ ಇದೀಗ ಕೋಟ್ಯಂತರ ಜನ ಯೋಗ ಕಲಿತು ತಮ್ಮನ್ನು ತಾವು ಕಂಡುಕೊಂಡಿದ್ದಾರೆ. ಯೋಗ ಕಲಿಕೆಯಿಂದ ಉತ್ತಮ ಆರೋಗ್ಯ ಹಾಗೂ ನಮ್ಮನ್ನು ನಾವು ಕಂಡುಕೊಂಡು ಬದುಕಿನಲ್ಲಿ ಸದಾ ಆನಂದ ಹೊಂದಬಹುದಾಗಿದೆ ಎಂದು ಯೋಗದ ಮಹತ್ವ ತಿಳಿಸಿದರು.

ಇಂದು ‘ಯೋಗ ಥೆರಪಿ’ ಎಂಬ ವ್ಯಾಪಾರ ಕೇಂದ್ರಗಳು ತಲೆ ಎತ್ತುತ್ತಿದ್ದು, ಕೇವಲ ಥೆರಪಿಯ ಆಸನಗಳಿಂದಲೇ ನಮ್ಮೆಲ್ಲ ನೋವಿಗೆ ಉಪಶಮನ ಸಾಧ್ಯ. ಆದರೆ ಯೋಗದಲ್ಲಿ ಆಸನಕ್ಕಿಂತ ಇತರ ಸಾಕಷ್ಟುಅಂಶಗಳಿವೆ. ಅದರಲ್ಲಿ ಯಮ, ನಿಯಮ, ಪ್ರತ್ಯಾಹಾರ, ಧಾರಣ, ಧ್ಯಾನದಂತಹ ಅಂಶಗಳಿದ್ದು, ಹೆಚ್ಚು ಪರಿಣಾಮಕಾರಿ ಬೀರಬಲ್ಲವು ಎಂದು ಅವರು ಹೇಳಿದರು.

ಏನ್ರೀ ಅದು ಗಲಾಟೆ: ಶಾ ಕೈಯಲ್ಲಿರುವ ವರದಿಯಲ್ಲಿದೆ ಚಕ್ರವರ್ತಿ, ಗೌಡರ ಭರಾಟೆ!