ಸ್ವಂತ ದುಡ್ಡಲ್ಲಿ ಶಾಲೆ ಕಟ್ಟಿ ಕೇಸರಿ ಬಣ್ಣ ಹಾಕ್ಕೊಳಿ: ಶಾಸಕ ನರೇಂದ್ರ
ಹನೂರು: ಸ್ವಂತ ದುಡ್ಡಲ್ಲಿ ಶಾಲೆ ಕಟ್ಟಿಕೇಸರಿ ಬಣ್ಣ ಹಾಕ್ಕೊಳಿ, ಸರ್ಕಾರದ ದುಡ್ಡಲ್ಲಲ್ಲ ಎಂದು ಶಾಸಕ ಆರ್.ನರೇಂದ್ರ ಅಭಿಪ್ರಾಯಪಟ್ಟಿದ್ದಾರೆ.
ಹನೂರು (ನ.17) : ಸ್ವಂತ ದುಡ್ಡಲ್ಲಿ ಶಾಲೆ ಕಟ್ಟಿಕೇಸರಿ ಬಣ್ಣ ಹಾಕ್ಕೊಳಿ, ಸರ್ಕಾರದ ದುಡ್ಡಲ್ಲಲ್ಲ ಎಂದು ಶಾಸಕ ಆರ್.ನರೇಂದ್ರ ಅಭಿಪ್ರಾಯಪಟ್ಟಿದ್ದಾರೆ. ಜಿ. ವಿ.ಗೌಡ ಪದವಿಪೂರ್ವ ಕಾಲೇಜು ಆವರಣದಲ್ಲಿ ನೂತನ ಕೊಠಡಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಯಾವುದೇ ಒಂದು ಪಕ್ಷ ಚುನಾವಣೆಯಲ್ಲಿ ಅಧಿಕಾರ ಪಡೆಯಲು ಚಿನ್ಹೆ ಬಳಸಬೇಕು. ಅದನ್ನು ಹೊರತುಪಡಿಸಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ಚಿಹ್ನೆ, ಜಾ.ದಳ ಅಧಿಕಾರಕ್ಕೆ ಬಂದರೆ ಅದರ ಚಿಹ್ನೆ, ಬಿಜೆಪಿ ಬಂದರೆ ಕಮಲದ ಚಿಹ್ನೆ ಬಣ್ಣ ಬಳಿಸುವುದು ತಪುತ್ರ್ಪ ಎಂದರು.
ಸರ್ಕಾರ ನಡೆಸುವುದು ಜನರ ಆದಾಯದಿಂದ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಶಾಲೆ ಚೆನ್ನಾಗಿ ಕಾಣಲು ಯಾವ ಬಣ್ಣ ಬಳಸಬೇಕು ಅದನ್ನು ಬಳಸಬೇಕು. ಇದುವರೆಗೂ ಯಾವುದೇ ಒಂದು ಸರ್ಕಾರ ತಮ್ಮ ಪಕ್ಷಗಳ ಚಿಹ್ನೆಯ ಬಣ್ಣವನ್ನು ಬಳಿಸಿಲ್ಲ. ಈಗಿನ ಬಿಜೆಪಿ ಸರ್ಕಾರ ಕಮಲದ ಚಿಹ್ನೆ ಕೇಸರಿ ಎಂದು ಬಣ್ಣ ಬಳಿಯುವ ಯೋಚನೆ ಮಾಡಿರುವುದು ತಪುತ್ರ್ಪ. ಬಿಜೆಪಿಯವರು ಬೇಕಿದ್ದರೆ ತಮ್ಮ ಸ್ವಂತ ಹಣದಿಂದ ಶಾಲೆಗಳನ್ನು ಅಭಿವೃದ್ಧಿಪಡಿಸಿ ಯಾವ ಬಣ್ಣ ಬೇಕಾದರು ಬಳಸಿಕೊಳ್ಳಲಿ. ಇದನ್ನು ಹೊರತುಪಡಿಸಿ ಯಾವುದೇ ಕಾರಣಕ್ಕೂ ಉದ್ದೇಶಪೂರ್ವಕವಾಗಿ ಕೇಸರಿ ಬಣ್ಣ ಬಳೆಯುವುದಕ್ಕೆ ನನ್ನ ಆಕ್ಷೇಪವಿದೆ ಎಂದರು.
Viveka Scheme: ವಿವಾದ ನಡುವೆಯೇ ಶಿಕ್ಷಣ ಇಲಾಖೆಯ "ವಿವೇಕ" ಯೋಜನೆಗೆ ಸಿಎಂ ಚಾಲನೆ
ಎಲ್ಲೇಮಾಳ ಆಸ್ಪತ್ರೆಗೆ ಜಮೀನು ದಾನ ಮಾಡಿದ ರೈತ
ಚಾಮರಾಜನಗರ : ಒಂದಡಿ ಜಾಗಕ್ಕೂ ಕೋರ್ಚ್ ಮೆಟ್ಟಿಲೇರುವ ಈ ಕಾಲಘಟ್ಟದಲ್ಲಿ ರೈತನೋರ್ವ ಆರೋಗ್ಯಕೇಂದ್ರಕ್ಕೆ ಜಮೀನು ದಾನ ಮಾಡಿರುವ ಘಟನೆ ಹನೂರಿನ ಎಲ್ಲೆಮಾಳ ಗ್ರಾಮದಲ್ಲಿ ನಡೆದಿದೆ. ಹನೂರು ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಎಲ್ಲೇಮಾಳ ಗ್ರಾಮದಲ್ಲಿ ಆರೋಗ್ಯಉಪಕೇಂದ್ರಕ್ಕೆ ಸ್ವಂತ ಕಟ್ಟಡವಿಲ್ಲದಿದ್ದರಿಂದ ಸರ್ಕಾರ ಏನು ಮಾಡಲಾರದ ಸ್ಥಿತಿಯಲ್ಲಿತ್ತು.
ಆ ವೇಳೆ, ಆಸ್ಪತ್ರೆಯ ಜರೂರತ್ತು ಅರಿತ ಕೆಂಚಯ್ಯನದೊಡ್ಡಿ ಗ್ರಾಮದ ಕೆ.ವಿ.ಸಿದ್ದಪ್ಪ ಎಂಬ ರೈತ ಎಲ್ಲೇಮಾಳ ಗ್ರಾಮದಲ್ಲಿದ್ದ ತನ್ನ ಜಾಗವನ್ನು ಸರ್ಕಾರಕ್ಕೆ ದಾನವಾಗಿ ನೀಡಿದ್ದಾರೆ. ಜಮೀನಿನ 60 ಬೈ 40 ಜಾಗವನ್ನು ಆರೋಗ್ಯ ಉಪಕೇಂದ್ರಕ್ಕೆ ಕೊಟ್ಟಿದ್ದು ನಿರ್ಮಾಣವಾಗಲಿರುವ ಕಟ್ಟಡಕ್ಕೆ ತನ್ನ ಹಾಗೂ ಪತ್ನಿ ಹೆಸರನ್ನು ಇಡುವಂತೆ ಕೋರಿದ್ದಾರೆ. ಹೆಸರಿಡಲು ಅವಕಾಶವಿರುವುದರಿಂದ ಆರೋಗ್ಯ ಇಲಾಖೆಯು ಜಮೀನನ್ನು ದಾನವಾಗಿ ಪಡೆದು ಉಪಕೇಂದ್ರ ನಿರ್ಮಿಸಲು ಆದೇಶ ಹೊರಡಿಸಿದೆ. ಉಪ ಕೇಂದ್ರಕ್ಕೆ ಜಯಮ್ಮ ಸಿದ್ದಪ್ಪ ಉಪ ಆರೋಗ್ಯಕೇಂದ್ರ ಎಂದು ಹೆಸರಿಡಲು ಸೂಚಿಸಲಾಗಿದೆ. ರಾಜ್ಯಾದ್ಯಂತ ಶಾಲೆಗಳ ಕೊಠಡಿಯಲ್ಲಿ ಏಕರೂಪದ ವಿವೇಕ ಬಣ್ಣ: ಮತ್ತೆ ಕೇಸರಿ ವಾಗ್ವಾದ ಶುರುವಾಗುವ ಸಾಧ್ಯತೆ