ಬಳ್ಳಾರಿ: ಬಿಟಿಪಿಎಸ್‌ನಲ್ಲಿ ನಿತ್ಯ 500 ಮೆ.ವ್ಯಾಟ್‌ಷ್ಟೇ ವಿದ್ಯುತ್ ಉತ್ಪಾದನೆ
* ಈ ವಾರದಲ್ಲಿ ಮತ್ತೆರೆಡು ಘಟಕಗಳು ವಿದ್ಯುತ್ ಉತ್ಪಾದನೆ ಕಾರ್ಯ ಆರಂಭಿಸುವ ಸಾಧ್ಯತೆ
* ನಿತ್ಯ 1700 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆಯ ಸಾಮರ್ಥ್ಯ ಹೊಂದಿದ ಬಿಟಿಪಿಎಸ್
* ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಉತ್ಪಾದನೆಯಲ್ಲಿ ಹಿನ್ನಡೆ
ಬಳ್ಳಾರಿ(ಅ.13): ತಾಲೂಕಿನ ಕುಡಿತಿನಿ(Kudatini) ಬಳಿಯ ‘ಬಳ್ಳಾರಿ(Ballari) ಶಾಖೋತ್ಪನ್ನ ವಿದ್ಯುತ್ ಕೇಂದ್ರ(BTPS)’ದ ಒಂದು ಘಟಕದಿಂದ 500 ಮೆ.ವ್ಯಾಟ್ ವಿದ್ಯುತ್(Electricity) ಉತ್ಪಾದನೆ ಮುಂದುವರಿದಿದ್ದು, ಈ ವಾರದಲ್ಲಿ ಮತ್ತೆರೆಡು ಘಟಕಗಳು ವಿದ್ಯುತ್ ಉತ್ಪಾದನೆ ಕಾರ್ಯ ಆರಂಭಿಸುವ ಸಾಧ್ಯತೆಗಳಿವೆ.
ಸೋಮವಾರ ರಾತ್ರಿ ಬಿಟಿಪಿಎಸ್‌ಗೆ 20 ಸಾವಿರ ಮೆ.ಟನ್ ಕಲ್ಲಿದ್ದಲು(Coal) ಪೂರೈಕೆಯಾಗಿದ್ದು, ಮಂಗಳವಾರ ಮತ್ತೆ ಎರಡು ರೇಕ್‌ಕಲ್ಲಿದ್ದಲು ಬರುವುದರಿಂದ ಸದ್ಯಕ್ಕೆ ಒಂದು ಘಟಕದಿಂದ(Plant) ವಿದ್ಯುತ್ ಉತ್ಪಾದನೆಗೆ ಯಾವುದೇ ಅಡ್ಡಿಯಿಲ್ಲ. ಈ ವಾರದಲ್ಲಿ ಎರಡು ಯುನಿಟ್‌ಗಳು(Unit) ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ ಎಂದು ಬಿಟಿಪಿಎಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಲ್ಲಿದ್ದಲು ಕೊರತೆ: ಕರ್ನಾಟಕಕ್ಕೆ 'ಕರೆಂಟ್' ಶಾಕ್..!
ಬಿಟಿಪಿಎಸ್ ನಿತ್ಯ 1700 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆಯ ಸಾಮರ್ಥ್ಯ ಹೊಂದಿದೆ. ಕಳೆದ 10 ದಿನಗಳಿಂದ ಕಲ್ಲಿದ್ದಲು ಕೊರತೆಯಾಗಿದ್ದರಿಂದ ವಿದ್ಯುತ್ ಉತ್ಪಾದನೆಯಲ್ಲಿ(Power Generation) ಹಿನ್ನಡೆಯಾಗಿದೆ. ಸದ್ಯಕ್ಕೆ 500 ಮೆ.ವ್ಯಾಟ್‌ನ ಘಟಕ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಈ ಕುರಿತು ಸ್ಪಷ್ಟ ಮಾಹಿತಿ ನೀಡಲು ನಿರಾಕರಿಸುತ್ತಿರುವ ಬಿಟಿಪಿಎಸ್‌ಎಂಡಿ ಶಶಿಕಾಂತ್ ಅವರು ಮಾಧ್ಯಮಗಳಿಗೆ ಯಾವುದೇ ಮಾಹಿತಿ ನೀಡದಂತೆ ಮೇಲಿಂದ ನಮಗೆ ಒತ್ತಡವಿದೆ ಎಂದರು.
ಸದ್ಯಕ್ಕೆ ಕಲ್ಲಿದ್ದಲು ಕೊರತೆಯಿಲ್ಲ. ಒಂದು ಯುನಿಟ್ ಕಾರ್ಯ ನಿರ್ವಹಿಸಲು ಬೇಕಾದ ಕಲ್ಲಿದ್ದಲು ಇದೆ. ನಿತ್ಯ ಕಲ್ಲಿದ್ದಲು ಬರುತ್ತಿದ್ದು, ವಿದ್ಯುತ್ ಉತ್ಪಾದನೆಗೆ ಹಿನ್ನಡೆಯಾಗಿಲ್ಲ ಎಂದು ಹೇಳಿದರು.