ಮೈಸೂರು(ಫೆ.09): ಇನ್ನೂ 6 ಸ್ಥಾನಗಳು ಬಾಕಿ ಇದ್ದು ಸಿಎಂ ಬಿ. ಎಸ್‌. ಯಡಿಯೂರಪ್ಪ ಅವರು ಕೊಟ್ಟ ಮಾತನ್ನು ತಪ್ಪುವುದಿಲ್ಲ ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು ಸೋತವರಿಗೂ ಸಚಿವ ಸ್ಥಾನ ನೀಡೋ ಹಿಂಟ್ ಕೊಟ್ಟಿದ್ದಾರೆ.

ಇತ್ತೀಚೆಗಷ್ಟೇ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಸಚಿವ ಸ್ಥಾನ ವಂಚಿತರು ಈಗಾಗಲೇ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಬಿ.ವೈ.ವಿಜಯೇಂದ್ರ ವಿಶ್ವನಾಥ್ ಹಾಗೂ ಎಂಟಿಬಿಗೆ ಯಡಿಯೂರಪ್ಪ ಕೊಟ್ಟ ಮಾತು ಉಳಿಸಿಕೊಳ್ತಾರೆ. ಯಡಿಯೂರಪ್ಪ ಯಾರಿಗೂ ಕೊಟ್ಟ ಮಾತು ತಪ್ಲಿಲ್ಲ ಎಂದು ಹೇಳಿದ್ದಾರೆ.

'ವಿಶ್ವನಾಥ್, ಎಂಟಿಬಿ ಬಿಟ್ರೇ ಎಚ್‌ಡಿಕೆ ಗತಿಯೇ ಯಡ್ಯೂರಪ್ಪಗೂ ಬರುತ್ತೆ'

ವಿಶ್ವನಾಥ್ ಹಾಗೂ ಎಂಟಿಬಿಗೂ ಕೊಟ್ಟ ಮಾತು ಉಳಿಸಿಕೊಳ್ತಾರೆ. ಇನ್ನು 6 ಸ್ಥಾನ ಬಾಕಿ ಇದೆ. ಅದರಲ್ಲಿ ಮೈಸೂರು ಭಾಗಕ್ಕೆ ಅವಕಾಶ ನೀಡಲಾಗುತ್ತದೆ. ಮುಂದಿನ ದಿನದಲ್ಲಿ ಎಂಟಿಬಿ ಹಾಗೂ ವಿಶ್ವನಾಥ್ ಅವರಿಗೆ ಅವಕಾಶ ಸಿಗಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.