ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಪ್ರಾರಂಭ ಆಗ್ತಿರೋದು ಖುಷಿ ವಿಚಾರ. ಆದ್ರೆ ಇರುವ ಸರ್ಕಾರಿ ಬಿಎಸ್ಸಿ ನರ್ಸಿಂಗ್ ಕಾಲೇಜಿನ ಅವ್ಯವಸ್ಥೆ ವಿರುದ್ದ ವಿಧ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ. ಮೊದಲು ನಮಗೆ ಮೂಲಸೌಕರ್ಯ ಒದಗಿಸಿ ಎಂದು ಪ್ರತಿಭಟನೆ ಮಾಡ್ತಿದ್ದಾರೆ. ಅಷ್ಟಕ್ಕೂ ಇಷ್ಟೆಲ್ಲಾ ಹೈಡ್ರಾಮಾ ಆಗ್ತಿರೋದು ಎಲ್ಲಿ ಅನ್ನೋದ್ರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.....,


ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಸೆ.1) :  ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಪ್ರಾರಂಭ ಆಗ್ತಿರೋದು ಖುಷಿ ವಿಚಾರ. ಆದ್ರೆ ಇರುವ ಸರ್ಕಾರಿ ಬಿಎಸ್ಸಿ ನರ್ಸಿಂಗ್ ಕಾಲೇಜಿನ ಅವ್ಯವಸ್ಥೆ ವಿರುದ್ದ ವಿಧ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ. ಮೊದಲು ನಮಗೆ ಮೂಲಸೌಕರ್ಯ ಒದಗಿಸಿ ಎಂದು ಪ್ರತಿಭಟನೆ ಮಾಡ್ತಿದ್ದಾರೆ. ಅಷ್ಟಕ್ಕೂ ಇಷ್ಟೆಲ್ಲಾ ಹೈಡ್ರಾಮಾ ಆಗ್ತಿರೋದು ಎಲ್ಲಿ ಅನ್ನೋದ್ರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.....,

 ತರಗತಿ ಬಹಿಷ್ಕರಿಸಿ ಅನಿರ್ಧಿಷ್ಟಾವಧಿ ಧರಣಿ ನಡೆಸಲು ಮುಂದಾಗಿರೋ‌ ವಿಧ್ಯಾರ್ಥಿಗಳು.‌ ಪ್ರತಿಭಟನೆ ಕೈ ಬಿಡುವಂತೆ ಅವರನ್ನು ಮನವೊಲಿಸಲು ಹರಸಾಹಸ ಪಡ್ತಿರೋ ಆರೋಗ್ಯ ಇಲಾಖೆ ಅಧಿಕಾರಿಗಳು. ಈ ದೃಶ್ಯಗಳು ಕಂಡು ಬಂದಿದ್ದು, ಚಿತ್ರದುರ್ಗ ಜಿಲ್ಲಾಸ್ಪತ್ರೆ(Chitradurga district hospital) ಅವರಣದಲ್ಲಿ ಇರುವ ಬಿಎಸ್ಸಿ ನರ್ಸಿಂಗ್ ಕಾಲೇಜು ಮುಂಭಾಗ. ಹೌದು, ಕಳೆದ ಒಂದೂವರೆ ವರ್ಷದಿಂದಲೂ ಈ ಕಾಲೇಜಿನಲ್ಲಿ ಸೂಕ್ತ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಇಲ್ಲ. ಸೂಕ್ತ ಕಟ್ಟಡ, ಕೊಠಿಡಿ, ಶೌಚಾಲಯ, ಲ್ಯಾಬ್ ಯಾವುದೇ ವ್ಯವಸ್ಥೆ ಇಲ್ಲದ ಕಾರಣ ವಿಧ್ಯಾರ್ಥಿಗಳು ಇಂದು ಬೀದಿ ಬಂದು ಪ್ರತಿಭಟನೆ ಮಾಡುವ ಪರಿಸ್ಥಿತಿ ಒದಗಿದೆ.

ಚಿತ್ರದುರ್ಗದ ಹೊರವಲಯದಲ್ಲಿ ಮೆಡಿಕಲ್ ಕಾಲೇಜು ನಿರ್ಮಿಸಿ: IMA ಅಧ್ಯಕ್ಷರಿಂದ ಸರ್ಕಾರಕ್ಕೆ ಒತ್ತಾಯ!

 ಈ ಕುರಿತು ಅನೇಕ ಬಾರಿ ಆರೋಗ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರಿ ಕೋಡಾದಡಿ ನಾವು ಬಿಎಸ್ಸಿ ನರ್ಸಿಂಗ್ ಮಾಡಲು ಸರ್ಕಾರಿ ಕಾಲೇಜು ಆಯ್ಕೆ ಮಾಡ್ಕೊಂಡಿರ್ತೀವಿ. ಆದ್ರೆ ಇಲ್ಲಿ ಬಂದಾಗ ತಿಳಿಯಿತು ಇಲ್ಲಿ ಯಾವುದೇ ಸೌಕರ್ಯಗಳು ಇಲ್ಲ, ಇದ್ರಿಂದಾಗಿ ನಾವು ವಿಧ್ಯಾಭ್ಯಾಸ ಮಾಡಲಿಕ್ಕೆ ಅನಾನುಕೂಲವಾಗ್ತಿದೆ. ಮೆಡಿಕಲ್ ಕಾಲೇಜು ನಿರ್ಮಾಣ ಹಿನ್ನೆಲೆ, ವಿವಿಧ ಕಟ್ಟಡಗಳ ತೆರವು ಮಾಡಿರುವ ಕಾರಣ, ಒಂದೇ ಕಟ್ಟಡದಲ್ಲಿ ಕಾಲೇಜು ಮತ್ತು ಹಾಸ್ಟೆಲ್ ವ್ಯವಸ್ಥೆ ಮಾಡಿರೋದು ನಮಗೆ ಸಮಸ್ಯೆ ಆಗ್ತಿದೆ. ಆದ್ದರಿಂದ ಕೂಡಲೇ ಆರೋಗ್ಯ ಇಲಾಖೆ ಇಲ್ಲಿರುವ ಸಮಸ್ಯೆ ಬಗೆಹರಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಿದೆ ಎಂದು ವಿಧ್ಯಾರ್ಥಿಗಳು ಆಗ್ರಹಿಸಿದರು.

ಕಳೆದ ವಾರವಷ್ಟೇ ಜಿಲ್ಲೆಗೆ ಉನ್ನತ ಶಿಕ್ಷಣ ಸಚಿವರು, ಹಾಗೂ ಆರೋಗ್ಯ ಇಲಾಖೆ ಸಚಿವರು ಆಗಮಿಸಿದ್ದಾಗಲೂ ಈ ಬಗ್ಗೆ ಅನೇಕ ಮನವಿ ಸಲ್ಲಿಸಿದ್ದೆವು. ಆದರೂ ಜಿಲ್ಲಾ ಮಟ್ಟದ ಅಧಿಕಾರಿಗಳು ಜನಪ್ರತಿನಿಧಿಗಳು ಇದಕ್ಕೆ ಯಾವುದೇ ಮನ್ನಣೆ ನೀಡ್ತಿಲ್ಲ. ಹಾಗಾಗಿ ಇಂದು ನಾವು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ಮುಂದಾಗಿದ್ದೀವಿ. ಬಿಎಸ್ಸಿ ನರ್ಸಿಂಗ್ ಕಾಲೇಜಿಗೆ ಸೂಕ್ತ ಕೊಠಡಿಗಳ‌ ವ್ಯವಸ್ಥೆ ಇಲ್ಲದೇ ಇರುವುದು ವಿಧ್ಯಾರ್ಥಿಗಳಿಗೆ ಸಮಸ್ಯೆ ಆಗ್ತಿದೆ. ಸರ್ಕಾರಿ ಕಾಲೇಜು ಅಂದ್ರೆ ಇಷ್ಟರಮಟ್ಟಿಗೆ ಅನಾನುಕೂಲತೆ ಇರುತ್ತೆ ಎಂಬುದಕ್ಕೆ ಇದೇ ಸಾಕ್ಷಿ. ಅದ್ದರಿಂದ ಕೂಡಲೇ ಅಧಿಕಾರಿಗಳು ವಿಧ್ಯಾರ್ಥಿಗಳಿಗೆ ಆಗ್ತಿರುವ ಸಮಸ್ಯೆಗೆ ಸ್ಪಂದಿಸಬೇಕಿದೆ.

ಚಿತ್ರದುರ್ಗ ಮೆಡಿಕಲ್ ಕಾಲೇಜು ಆರಂಭಕ್ಕೆ ಕಾಂಗ್ರೆಸ್ ಸರ್ಕಾರವೇ ಬರಬೇಕಾಯಿತು!

ಒಟ್ಟಾರೆಯಾಗಿ ಸರ್ಕಾರಿ ಕಾಲೇಜಿಗೆ ಸರ್ಕಾರದಿಂದ ಸಾಕಷ್ಟು ಅನುದಾನ ಬಂದರೂ ಅಧಿಕಾರಿಗಳು ಯಾಕಿಷ್ಟು ಅಸಡ್ಡೆ ತೋರುತ್ತಾರೆ ಎಂಬುದೇ ಬೇಸರದ ಸಂಗತಿ. ಜನಪ್ರತಿನಿಧಿಗಳೇ ಇನ್ನಾದ್ರು ಈ ಮಕ್ಕಳ ಸಮಸ್ಯೆಗೆ ಸ್ಪಂದಿಸಬೇಕಿದೆ