ಶಿಕಾರಿಪುರ ತಾಲೂಕಿನಲ್ಲಿ ಮೃತಿಕಾ ರೂಪದಲ್ಲಿ ನೆಲೆಸಿದ ಗುರು ರಾಯರ ಮಠ ಲೋಕಾರ್ಪಣೆ

* ಶಿಕಾರಿಪುರ ತಾಲೂಕಿನಲ್ಲಿ ಮೃತಿಕಾ ರೂಪದಲ್ಲಿ ನೆಲೆಸಿದ ಗುರು ರಾಯರ ಮಠ ಲೋಕಾರ್ಪಣೆ
* ಇದು ಕರ್ನಾಟಕದ ಎರಡನೇ ಮೃತಿಕಾ  ಮಠ
* ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಉಡುಗಣಿ ಗ್ರಾಮದಲ್ಲಿ ನೆಲೆ ನಿಂತಿರುವ ರಾಯ

BS Yediyurappa inaugurates raghavendra mutt at shikaripura Taluka rbj

ವರದಿ : ರಾಜೇಶ್ ಕಾಮತ್ ಏಷ್ಯಾನೆಟ್ ಸುವರ್ಣ ನ್ಯೂಸ್, ಶಿವಮೊಗ್ಗ

ಶಿವಮೊಗ್ಗ, (ಮೇ.01):
ಮಂತ್ರಾಲಯ ಹೊರತುಪಡಿಸಿ ಕರ್ನಾಟಕದ ಎರಡನೇ ಮೃತಿಕಾ ರೂಪದಲ್ಲಿ ನೆಲೆ ನಿಂತಿರುವ ಮಠವೆಂದೇ ಖ್ಯಾತವಾದ ಶಿಕಾರಿಪುರ ತಾಲೂಕಿನ ಉಡುಗಣಿ ಗ್ರಾಮದಲ್ಲಿ ರಾಘವೇಂದ್ರ ಸ್ವಾಮಿಗಳ ಮಠ ಉದ್ಘಾಟನೆಯನ್ನು ಮಾಜಿ ಸಿಎಂ ಯಡಿಯೂರಪ್ಪ ನೆರವೇರಿಸಿದರು. 

ಮಂತ್ರಾಲಯ ಕ್ಷೇತ್ರದ ಸುಬುದೇಂದ್ರ ತೀರ್ಥ  ಸ್ವಾಮೀಜಿ ಸಾನಿಧ್ಯದಲ್ಲಿ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ತಮ್ಮ ಮನದಾಳದ ಮಾತುಗಳನ್ನು ವೇದಿಕೆಯಲ್ಲಿ ಹಂಚಿ ಕೊಂಡರು. ಬಿಎಸ್ ವೈ ಸಿಎಂ ಆಗುವುದಾಗಿ 2006 ರಲ್ಲಿ  ಪ್ರಸಾದ ಅನುಗ್ರಹ ಉಡುಗಣಿ ಇದೇ  ರಾಯರ ಮಠದಲ್ಲಿ ಆಗಿತ್ತು. ಈ ಹಿನ್ನೆಲೆಯಲ್ಲಿ  2006 ರಲ್ಲಿ ಡಿಸಿಎಂ ಆಗುತ್ತಿದ್ದಂತೆ ತಕ್ಷಣವೇ 5 ಲಕ್ಷ ರೂಪಾಯಿ ಮಠದ ಅಭಿವೃದ್ಧಿ ಗೆ  ಬಿಡುಗಡೆ ಮಾಡಿದ್ದರು.

ಸಮಾಧಿಯಾದ 130 ವರ್ಷ ಬಳಿಕ ಮುನ್ರೋ ಜೊತೆ ಮಾತನಾಡಿದ ರಾಯರು! 

ನಂತರ ತಮ್ಮ ನಂಬುಗೆಯ ರಾಯರ ಮಠಕ್ಕೆ 2019 ರಲ್ಲಿ ಪುನಃ ಸಿಎಂ ಆಗಿದ್ದ ಬಿಎಸ್ ವೈ ಈ ಬಾರಿ ಉಡುಗಣಿ ರಾಯರ ಮಠದ ಸಂಪೂರ್ಣ ಪುನರುತ್ಥಾನದ ಕಾರ್ಯಕ್ಕೆ  ಸುಮಾರು 1 ಕೋಟಿ ರೂ. ಅನುದಾನವನ್ನು ನೀಡಿ ಮಠದ ಪುನರುತ್ಥಾನದ ಸಂಕಲ್ಪವನ್ನು ತೊಟ್ಡಿದ್ದರು.  ಅದರಂತೆ ಸರ್ಕಾರದ ಒಂದು ಕೋಟಿ ರೂಪಾಯಿ ಅನುದಾನ , ಮಳೂರು ಗ್ರಾಮದ ಪ್ರೇಮಲತಾ ಗುರುರಾಜ್ ಕುಟುಂಬ ಹಾವು ಕಚ್ಚಿದವರಿಗೆ ಕಳೆದ 30 ವರ್ಷಗಳ ಕಾಲ ನೀಡಿದ ಸೇವೆಗೆ ಪ್ರಯಿರೂಪವಾಗಿ  ಸಂಗ್ರಹಿಸಿದ ಸುಮಾರು 70 ಲಕ್ಷ ರೂಪಾಯಿಯನ್ನು ದೇಣಿಗೆಯಾಗಿ ನೀಡಿದರು. 

ಇದರೊಂದಿಗೆ ಸಾರ್ವಜನಿಕರು ನೀಡಿದ ದೇಣಿಗೆ ಹಣ  ಸೇರಿದಂತೆ ಒಟ್ಟು ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ರಾಯರ ಮಠದ ಕಟ್ಟಡ ನಿರ್ಮಾಣಗೊಂಡಿದೆ. ಇಂದು ಸುಸಜ್ಜಿತ ರೀತಿಯಲ್ಲಿ ಸಭಾಂಗಣ, ಸುತ್ತಲೂ ಪ್ರಾಂಗಣ ಸೇರಿದಂತೆ ರಾಯರ ಮಂತ್ರಾಲಯದ ಮಾದರಿಯ ನೂತನ ಮಠದ ಉದ್ಘಾಟನೆ ಯಲ್ಲಿ ಪಾಲ್ಗೊಂಡು ತಮ್ಮ ಮನದಾಳ ತೆರೆದಿಟ್ಟರು. ತಮಗೆ ಮೂವರು ಹೆಣ್ಣುಮಕ್ಕಳೇ ಆದಾಗ ಗಂಡು ಬೇಕೆಂಬ ಪ್ರಾರ್ಥನೆಯನ್ನು ರಾಯರ ಮಠದಲ್ಲಿ ಮಾಡಿದ್ದೆ.‌ ಅಂದೇ  ಕನಸಿನಲ್ಲಿ ಬಂದು  ಗುರು ರಾಘವೇಂದ್ರ ಸ್ವಾಮಿಗಳು ಗಂಡು ಮಗು ಜನಿಸುವುದಾಗಿ  ವರ ನೀಡಿದ್ದರು. ಅದರಂತೆ ಗುರುವಾರದಂದೇ  ಗುರುಗಳ ಅನುಗ್ರಹದಿಂದ ಗಂಡು ಮಗು ಜನಿಸಿದಾಗ ಅದಕ್ಕೆ ರಾಘವೇಂದ್ರ ಎಂದು ನಾಮಕರಣ ಮಾಡಿದ್ದನ್ನು ನೆನಪಿಸಿಕೊಂಡರು. 

ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿ ಆಶಿರ್ವಚನ ನೀಡಿದ ಮಂತ್ರಾಲಯದ ಗುರು ಗಳಾದ ಸುಬುದೇಂದ್ರ ಸ್ವಾಮಿಜಿ ಮಂತ್ರಾಲಯದ ಜಾಗವನ್ನು ಮುಸ್ಲಿಂ ದೊರೆಯೇ ನೀಡಿದ್ದ ಎಂದು ಸ್ಪಷ್ಟ ಪಡಿಸಿದರು. ಇದೇ ಸಮಯದಲ್ಲಿ ಮುಸ್ಲಿಂ ಸಮುದಾಯದ ಜನರು ಸ್ವಾಮೀಜಿ ಗಳಿಗೆ ಹಾರ ಹಾಕಿ ಸನ್ಮಾನಿಸಿದರು.

Latest Videos
Follow Us:
Download App:
  • android
  • ios