ಮೈಸೂರು(ಜ.13): ಯಡಿಯೂರಪ್ಪ ಮನೆಯಲ್ಲಿ ಕುಟುಂಬ ರಾಜಕಾರಣ ನಡೆಯುತ್ತಿದೆ. ಯೋಗೇಶ್ವರ್ ಮಂತ್ರಿ ಆಗೋಕೆ ವಿಜಯೇಂದ್ರ ಕಾರಣ. ಅದೆ ರೀತಿ ಯಡ್ಯೂರಪ್ಪರ ಪ್ರತಿಷ್ಠೆ ಡೆಮಾಲೀಷ್ ಆಗೋಕು ವಿಜಯೇಂದ್ರರೆ ಕಾರಣ ಎಂದು ಎಚ್. ವಿಶ್ವನಾಥ್ ಹೇಳಿದ್ದಾರೆ.

ಮೈಸೂರಿನಲ್ಲಿ ಗಂಭೀರ ಆರೋಪ ಮಾಡಿದ ಹೆಚ್.ವಿಶ್ವನಾಥ್, ಇಡೀ ವಿಧಾನಸೌಧದಲ್ಲಿ ಅವರ ಅಣ್ಣ ತಮ್ಮಂದಿರೇ ಕುಳಿತಿದ್ದಾರೆ. ಯಡಿಯೂರಪ್ಪ ಸಂಪಾದಿಸಿದ್ದ ಹೆಸರು ಹಾಳಾಗುತ್ತಿದೆ. ಎಲ್ಲದಕ್ಕು ಸುಮ್ಮನೆ ಹೈಕಮಾಂಡ್ ಹೆಸರು ಬಳಸಬೇಡಿ ಎಂದಿದ್ದಾರೆ.

ದನದ ಮಾಂಸ ತಿನ್ನೋ ಶ್ಲೋಕ ಇದೆ, ಸದ್ಯ ನೆನಪಾಗ್ತಿಲ್ಲ ಎಂದ ಸಿದ್ದು

ಕರ್ನಾಟಕಕ್ಕೆ ಯಡ್ಯೂರಪ್ಪರೇ ಹೈಕಮಾಂಡ್. ಯೋಗೇಶ್ವರ್‌ದು ಬ್ಲಾಕ್ ಮೇಲ್ ತಂತ್ರ. ಅವರ ಬ್ಲಾಕ್ ಮೇಲ್ ಏನಂತ ಯಾವತ್ತಾದರೂ ಒಂದು ದಿನ ಹೊರಗೆ ಬರುತ್ತೆ. ರಾಜ್ಯದಲ್ಲಿ ಸಚಿವರಾಗೋಕೆ ನಮ್ಮ ಹಿಂದೆ ಬ್ಯಾಗ್ ಹಿಡಿದು ಕೊಂಡು ಓಡಾಡಿದ್ದೆ ಮಾನದಂಡವೇ.? ಎಂದು ಪ್ರಶ್ನಿಸಿದ್ದಾರೆ.

ಯೋಗೇಶ್ವರ್‌ಗೆ ಬರಿ ಬಾಂಬೆಯಲ್ಲಿ ಬ್ಯಾಗ್ ಹಿಡಿದ್ದಿದ್ದು ಬಿಟ್ಟರೆ ಮತ್ತೇನು ಮಾಡಿಲ್ಲ. ಈ ಎಲ್ಲ ಬೆಳವಣಿಗೆಯಿಂದ ನೋವಾಗಿದೆ. ನಾವು ಮನುಷ್ಯರು ನಮಗು ಹೃದಯ ಇದೆ ನಮಗು ನೋವಾಗುತ್ತೆ ಎಂದಿದ್ದಾರೆ.