ಮೈಸೂರು(ಜ.13): ದನದ ಮಾಂಸ ತಿನ್ನುವ ಬಗ್ಗೆ ಶ್ಲೋಕವೇ ಇದೆ. ಅದು ನನಗೆ ನೆನಪಾಗುತ್ತಿಲ್ಲ ಆಮೇಲೆ ನೆನಪು ಮಾಡ್ಕೊಂಡು ಹೇಳ್ತಿನಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ ಗೋಮಾಂಸ ಬಗ್ಗೆ ಶ್ಲೋಕದ ಉಲ್ಲೇಖ ಮಾಡಿದ್ದಾರೆ. ದನದ ಮಾಂಸದ ಬಗ್ಗೆ ಶ್ಲೋಕ ಬರೆಯಲಾಗಿದೆ. ಶ್ಲೋಕ ಬರೆದಿರೋದು ಯಾರಪ್ಪ..? ಸಂಸ್ಕೃತ ಗೊತ್ತಿರೋರೆ ತಾನೆ ಬರೆಯೋದು ಎಂದಿದ್ದಾರೆ.

ಇಲ್ಲಿ ತನ್ಕ ಗೋಮಾಂಸ ತಿಂದಿಲ್ಲ, ತಿನ್ಬೇಕನ್ಸಿದ್ರೆ ತಿಂತೀನಿ: ಸಿದ್ದು

ಹಾಗಾದ್ರೆ ಶ್ಲೋಕದಲ್ಲಿ ತಪ್ಪು ಇದ್ಯಾ? ಒಳ್ಳೆಯ ದನದ ಮಾಂಸ ತಿಂದರೆ ಆರೋಗ್ಯ ಚೆನ್ನಾಗಿರುತ್ತೆ ಅಂತ ಆ ಶ್ಲೋಕದಲ್ಲಿ ಹೇಳಿದ್ದಾರೆ. ಸದ್ಯಕ್ಕೆ ಆ ಶ್ಲೋಕ ನೆನಪಾಗುತ್ತಿಲ್ಲ.
ಮತ್ತೆ ಮೈಸೂರಿಗೆ ಬಂದಾಗ ಆ ಶ್ಲೋಕ ಹೇಳ್ತಿನಿ ಎಂದಿದ್ದಾರೆ.

ಈಗ ಹೇಳಿದ್ರೆ ಅದನ್ನ ಕಾಂಟರ್ವಸಿ ಮಾಡಿಬಿಡುತ್ತಾರೆ. ನಾನು ಹೇಳಿದ್ದು ಬಿಟ್ಟು ಬೇರೆ ಅರ್ಥದಲ್ಲಿ ಅದನ್ನ ಹೇಳಿಬಿಡುತ್ತಾರೆ. ಅದಕ್ಕೆ ಶ್ಲೋಕವನ್ನ ಸರಿಯಾಗಿಯೇ ಹೇಳ್ತಿನಿ ಎಂದು ಹೇಳಿದ್ದಾರೆ.