* ಗುಂಡುಕಲ್ಲಿನಂತಿದ್ದ ಸೋದರರನ್ನು ಬಲಿ ಪಡೆದ ಕೊರೋನಾ* ಮನೆಯ ಹಿರಿಜೀವಗಳನ್ನು ಕಿತ್ತುಕೊಂಡ ಕ್ರೂರಿ* ಹಿರಿಯ ಜೀವಗಳನ್ನು ಕಳೆದುಕೊಂಡ ಕುಟುಂಬಸ್ಥರು ಕಂಗಾಲು
ಧಾರವಾಡ, (ಜೂನ್.02): ಕೊರೋನಾ ಎರಡನೇ ಕೊಂಚ ಕಡಿಮೆಯಾಗಿದೆ. ಆದ್ರೆ, ಕ್ರೂರಿ ಕೊರೋನಾ ಬಲಿ ಪಡೆಯುತ್ತಿರುವವ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೌದು....ಗುಂಡುಕಲ್ಲಿನಂತೆ ದಷ್ಟಪುಷ್ಟವಾಗಿದ್ದ ಸಹೋದರರನ್ನು ಕೊರೋನಾ ಮಹಾಮಾರಿ ಬಲಿಪಡೆದಿದೆ. ಈ ಘಟನೆ ತಾಲೂಕಿನ ಮುಗದ ಗ್ರಾಮದಲ್ಲಿ ನಡೆದಿದೆ.
ಚಾಮರಾಜನಗರ : ಒಂದೇ ಕುಟುಂಬದ ನಾಲ್ವರೂ ಅತ್ಮಹತ್ಯೆಗೆ ಶರಣು
ದೈತ್ಯ ಕಾಯ ಮತ್ತು ಶ್ರಮಿಕ ವರ್ಗದ ಸಹೋದರರು ಗ್ರಾಮದಲ್ಲಿ ಎಲ್ಲರಿಗೂ ಬೇಕಾದವರು. ಮೊದಲು ಗ್ರಾಮದ ಸುಬ್ಬಪ್ಪ ಭೋವಿ ಅವರಲ್ಲಿ ಸೋಂಕು ಪತ್ತೆಯಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ನೀಡಿದ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.
ಇದಾದ ಬಳಿಕ ಅವರ ಸಹೋದರ ಭರಮಪ್ಪ ಅವರಿಗೂ ಸೋಂಕು ಪತ್ತೆಯಾಗಿದ್ದು, ಅವರೂ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಈ ಹಿರಿಯ ಜೀವಗಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
