Karnataka Election 2023: ಚಿಕ್ಕಮಗಳೂರಲ್ಲಿ ಮಧುಮಗಳ ಮತದಾನ, ಮಳೆ ಆತಂಕದ ಮಧ್ಯೆ ಚುರುಕುಕಾದ ವೋಟಿಂಗ್‌

ಇಂದು ಮಧ್ಯಾಹ್ನದ ನಂತರ ಮಳೆ ಬರಬಹುದೆಂದು ಆತಂಕ ಕಿಡಾಗಿರುವ ಮಲೆನಾಡಿಗರು ಬೆಳ್ಳಂ ಬೆಳಗ್ಗೆಯೇ ಮತಗಟ್ಟೆಗಳ ಮುಂದೆ ಸಾಲುಗಟ್ಟಿ ನಿಂತಿದ್ದಾರೆ. ನಿನ್ನೆ ಸಂಜೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಸುತ್ತಮುತ್ತ ಧಾರಾಕಾರ ಮಳೆ ಸುರಿದಿದೆ. ಹಾಗಾಗಿ, ಇಂದು ಕೊಟ್ಟಿಗೆಹಾರ ಪ್ರಾಥಮಿಕ ಶಾಲಾ ಮತಗಟ್ಟೆಯಲ್ಲಿ ಮಲೆನಾಡಿಗರು ಬೆಳ್ಳಂ ಬೆಳಗ್ಗೆ ಮತ ಕೇಂದ್ರದ ಮುಂದೆ ಸಾಲುಗಟ್ಟಿ ನಿಂತು ಮತದಾನಕ್ಕೆ ಮುಂದಾಗಿದ್ದಾರೆ.

Brisk Voting in Amid Rain Fear at Chikkamagaluru in  Karnataka Election 2023 grg

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಮೇ.10): ಚಿಕ್ಕಮಗಳೂರು  ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಆತಂಕದಿಂದ ಬೆಳ್ಳಂ ಬೆಳಗ್ಗೆಯೆ ಮತದಾರರು ಮತ ಕೇಂದ್ರಗಳ ಮುಂಭಾಗ ಮತದಾನಕ್ಕೆ ಸಾಲುಗಟ್ಟಿ ನಿಂತಿದ್ದಾರೆ. ನಿನ್ನೆ ಕೂಡ ಜಿಲ್ಲಾದ್ಯಂತ ಬೆಳಗ್ಗೆಯಿಂದಲೂ ಮೋಡ ಕವಿತ ವಾತಾವರಣವಿತ್ತು. ಸಂಜೆ ವೇಳೆಗೆ ನಗರ ಸೇರಿದಂತೆ ಮಲೆನಾಡಿನಾದ್ಯಂತ ಧಾರಾಕಾರ ಮಳೆ ಸುರಿದಿದೆ. 

ಮಲೆನಾಡು ಭಾಗದಲ್ಲಿ ಭಾರಿ ಮಳೆಯಿಂದ ಜನಜೀವನ ಕೂಡ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಮತದಾನ ಪ್ರಕ್ರಿಯೆಯಲ್ಲಿ ತೊಡಗಿದ್ದ ಚುನಾವಣಾ ಸಿಬ್ಬಂದಿಗಳಿಗೂ ಕೂಡ ಮಳೆ ಕಂಟಕವಾಗಿತ್ತು. ಮಳೆ-ಗಾಳಿಗೆ ವಿದ್ಯುತ್ ಸಂಪರ್ಕ ಕೂಡ ಕಡಿತಗೊಂಡು ಚುನಾವಣೆ ಕಾರ್ಯಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಸಿಬ್ಬಂದಿಗಳು ಕರೆಂಟ್ ಇಲ್ಲದೆ ಕಂಗಾಲಾಗಿದ್ದರು. 

ಮನೆಯಲ್ಲಿ ಉಳಿಯದೇ, ಪ್ರಜಾಪ್ರಭುತ್ವದ ಯಶಸ್ವಿಗೆ ಮತ ಹಾಕಿ: ಸಿದ್ದಗಂಗಾ ಶ್ರೀ ಕರೆ

ಇಂದು ಕೂಡ ಮಧ್ಯಾಹ್ನದ ನಂತರ ಮಳೆ ಬರಬಹುದೆಂದು ಆತಂಕ ಕಿಡಾಗಿರುವ ಮಲೆನಾಡಿಗರು ಬೆಳ್ಳಂ ಬೆಳಗ್ಗೆಯೇ ಮತಗಟ್ಟೆಗಳ ಮುಂದೆ ಸಾಲುಗಟ್ಟಿ ನಿಂತಿದ್ದಾರೆ. ನಿನ್ನೆ ಸಂಜೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಸುತ್ತಮುತ್ತ ಧಾರಾಕಾರ ಮಳೆ ಸುರಿದಿದೆ. ಹಾಗಾಗಿ, ಇಂದು ಕೊಟ್ಟಿಗೆಹಾರ ಪ್ರಾಥಮಿಕ ಶಾಲಾ ಮತಗಟ್ಟೆಯಲ್ಲಿ ಮಲೆನಾಡಿಗರು ಬೆಳ್ಳಂ ಬೆಳಗ್ಗೆ ಮತ ಕೇಂದ್ರದ ಮುಂದೆ ಸಾಲುಗಟ್ಟಿ ನಿಂತು ಮತದಾನಕ್ಕೆ ಮುಂದಾಗಿದ್ದಾರೆ.

ಯುವ ಮತದಾರರಲ್ಲಿ ಹರ್ಷ : 

ಜಿಲ್ಲೆಯಲ್ಲಿ ಮತದಾನದ ಪ್ರಕ್ರಿಯೆ ಚುರುಕುಗೊಂಡಿದ್ದು 18 ವರ್ಷ ಪೂರೈಸಿದ ಯುವ ಮತದಾರರು ಅತ್ಯಂತ ಉತ್ಸಾಹದದಿಂದ ಮತದಾನ ಮಾಡಿದರು. ಮೊದಲ ಬಾರಿಗೆ ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಯುವ ಮತದಾರರು  ಹರ್ಷ ವ್ಯಕ್ತಪಡಿಸಿದರು. ಬಾಸಾಪುರ ಮತಗಟ್ಟೆಯಲ್ಲಿ ಮತದಾನ ಮಾಡಿದ ಯುವತಿಯರು ಮೊದಲ ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಮತದಾನ ಮಾಡಿದ್ದು ಸಂತಸ ಮೂಡಿಸಿದ ಎಲ್ಲರೂ ಮತದಾನ ಮಾಡುವಂತೆ ಕರೆ ನೀಡಿದರು. ಕೊಟ್ಟಿಗೆಹಾರದ ಭಾವನ ನನ್ನ ಮೊದಲ ಮತದಾನ ಅತೀವ ಸಂತೋಷ ಉಂಟು ಮಾಡಿರುವ ಅಭಿಪ್ರಾಯವನ್ನು ಹೊರಹಾಕಿದ್ದಾರೆ. ನನ್ನ ತಂದೆ ತಾಯಿ ಮತದಾನ ಮಾಡುವಾಗ ನನಗೂ ಕುತೂಹಲ ಹಾಗು ಆಸೆ ಇತ್ತು , ಈಗ ಆ ಆಸೆ ಈಡೇರಿದೆ ಎಂದರು. 

ಎಲ್ಲರೂ ಮತದಾನ ಮಾಡಿ, ಮತದಾನದ ಬಳಿಕ ಸ್ವಾಮೀಜಿಗಳ ಕರೆ

ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಿ ಎಂದು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ರಂಭಾಪುರಿ ಮಠದ ಜಗದ್ಗುರು ವೀರಸೋಮೇಶ್ವರ ಮಹಾಸ್ವಾಮಿಜಿ ಹಾಗೂ ಕೊಪ್ಪ ತಾಲ್ಲೂಕಿನ ಶಂಕರಾಚಾರ್ಯ ಶಾರದಾ ಲಕ್ಷ್ಮೀ ನೃಸಿಂಹ ಮಠದ  ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮಿಗಳು ಕರೆ ನೀಡಿದ್ದಾರೆ. ಹರಿಹರಪುರದ ಸರ್ಕಾರಿ ಶಾಲೆಯಲ್ಲಿ ಶಾರದಾ ಲಕ್ಷ್ಮೀ ನೃಸಿಂಹ ಮಠದ  ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮಿಗಳು ಮತದಾನ ಮಾಡಿದ್ರೆ. ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ರಂಭಾಪುರಿ ಮಠದ ಆವರಣದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 209ರಲ್ಲಿ ರಂಭಾಪುರೀ ಶ್ರೀಗಳು ಮತದಾನ ಮಾಡಿದ್ದಾರೆ ಇಬ್ಬರು  ಶ್ರೀಗಳು ನಾಡಿನ ಜನತೆಗೆ ಸಂದೇಶ ಸಾರಿದ್ದಾರೆ. ನಾಡಿನ ಸಮಸ್ತ ಜನತೆ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಿ ಎಂದು ಮನವಿ ಮಾಡಿದ್ದಾರೆ.

Karnataka Election 2023: ಪತ್ನಿ ಜೊತೆ ಬಂದು ಮತ ಹಾಕಿದ ನವರಸ ನಾಯಕ ಜಗ್ಗೇಶ್‌

ಯಾಕೋ ಹಿಂದುತ್ವದ ಶಾಲು, ನಿಮ್ಮಪ್ಪನ ಮನೆದಾ...? ಮತಕೇಂದ್ರದ ಮುಂದೆ ಕೆಸರಿ ಕಲಹ

"ಯಾಕೋ, ಹಿಂದುತ್ವದ ಶಾಲು ಕಣೋ, ನಿಮ್ಮ ಅಪ್ಪನ ಮನೆದಾ" ಎಂದು ಮತ ಕೇಂದ್ರದ ಮುಂದೆ ಬಿಜೆಪಿ ಕಾಂಗ್ರೆಸ್ ಮಧ್ಯೆ ಕಲಹ ನಿರತ ಘಟನೆ ನಗರದ ಬಸವನಹಳ್ಳಿ ಮುಖ್ಯ ರಸ್ತೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆ ಆವರಣದಲ್ಲಿ ನಡೆದಿದೆ. ಬೆಳಗ್ಗೆಯಿಂದಲೂ ಕೂಡ ಬಿಜೆಪಿ ಕಾರ್ಯಕರ್ತರು ಕೇಸರಿ ಶಲ್ಯಧರಿಸಿ ಮತ ಕೇಂದ್ರದ ಮುಂದೆ ಓಡಾಡುತ್ತಿದ್ದರು. ಬೆಳಗ್ಗಿನಿಂದಲೂ ಕೂಡ ಕಾಂಗ್ರೆಸ್ ಕಾರ್ಯಕರ್ತರು ಕೇಸರಿ ಶಲ್ಯ ತೆಗೆಯುವಂತೆ ಬಿಜೆಪಿ ಕಾರ್ಯಕರ್ತರಿಗೆ ಸೂಚನೆ ನೀಡುತ್ತಿದ್ದರು. ಹಾಗಾಗಿ, ಸಣ್ಣಪುಟ್ಟ ಕಿರಿಕ್ ಕೂಡ ನಡೆಯುತ್ತಿತ್ತು. ಸ್ಥಳಕ್ಕೆ ಬಂದ ನಗರಸಭೆಯ ಬಿಜೆಪಿ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಶಲ್ಯ ತೆಗೆಯಿರಿ ಅಂದ ಕಾಂಗ್ರೆಸ್ಸಿಗರಿಗೆ ರಸ್ತೆ ಮಧ್ಯೆಯೇ "ಯಾಕೋ ಹಿಂದುತ್ವದ ಶಾಲು ಕಣೋ, ನಿಮ್ಮ ಅಪ್ಪನ ಮನೆದಾ...? ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾತಿನ ಚಕಮತಿ ಕೂಡ ನಡೆದಿದೆ. ಬಳಿಕ ಬಳಕೆ ಬಂದ ಪೊಲೀಸರು ಎಲ್ಲರನ್ನು ಮತಗಟ್ಟೆ ಕೇಂದ್ರದಿಂದ ದೂರ ಕಳಿಸಿದ್ದಾರೆ. ಕಿರಿಕ್ ಆದ ಬಳಿಕವು ಬಿಜೆಪಿ ಕಾರ್ಯಕರ್ತರು ಕೇಸರಿ ಶಲ್ಯ ಧರಿಸಿ ಓಡಾಡುತ್ತಿದ್ದಾರೆ.

ಮಲೆನಾಡಲ್ಲಿ ಮಧುಮಗಳ ಮತದಾನ 

ಮಲೆನಾಡಿನ ಭಾಗವಾದ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮುಹೂರ್ತಕ್ಕೂ ಮುನ್ನ ಮತದಾನ ಮಾಡಿ ಹಸೆಮಣೆಯನ್ನು ಮದುಮಗಳು ಏರಿದ್ದಾರೆ.ಮೂಡಿಗೆರೆ ತಾಲ್ಲೂಕಿನ ಮಾಕೋನಹಳ್ಳಿಯಲ್ಲಿ ಮತಗಟ್ಟೆ 169ರಲ್ಲಿ ಮತದಾನ  ಮಾಡಿ ಯುವಜನತೆಗೆ ಮಾದರಿಯಾಗಿದ್ದಾರೆ.ಚಿಕ್ಕಮಗಳೂರು ನಗರದಲ್ಲಿ  80 ವರ್ಷದ ವೃದ್ಧೆ ಕಣ್ಣಮ್ಮ ಮತದಾನ ಮಾಡಿದ್ದರು. ಚಿಕ್ಕಮಗಳೂರು ನಗರದಲ್ಲಿ ತರಕಾರಿ ಮಾರುವ ಅಜ್ಜಿಯ ಮತದಾನದ ಉತ್ಸವಕ್ಕೆ ಅಧಿಕಾರಿಗಳು ಫಿದಾಯಾದ್ರು.

Latest Videos
Follow Us:
Download App:
  • android
  • ios