ಕಳಪೆ ಕಾಮಗಾರಿಯಿಂದಾಗಿ ಕುಸಿದು ಬಿದ್ದಿದ್ದ ಸೇತುವೆಯ ಮರು ನಿರ್ಮಾಣ ಕಾರ್ಯಕ್ಕೆ ಮತ್ತೆ ಚಾಲನೆ ನೀಡಲಾಗಿದೆ. ತಾಲೂಕು ಆಡಳಿತ ಕಾಮಗಾರಿ ಆರಂಭಿಸಿದೆ.

ಕುದೂರು (ಆ.24): ಕುದೂರು ಹೋಬಳಿ ಕಣನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಈರೇಕೆರೆ ಬಳಿ ಕಳಪೆ ಕಾಮ​ಗಾ​ರಿ​ಯಿಂದ ಬಿರುಕು ಬಿಟ್ಟು ಕುಸಿ​ದಿದ್ದ ಸೇತು​ವೆ​ಯ ಮರು ನಿರ್ಮಾಣ ಕಾರ್ಯ ನಡೆ​ಯು​ತ್ತಿ​ದೆ.

ಈರೇ​ಕೆರೆ ಬಳಿ ನಿರ್ಮಾಣಗೊಂಡ ಕೇವಲ ಎರಡು ತಿಂಗಳುಗಳಲ್ಲೇ ಸೇತುವೆಯು ಕಳಪೆ ಕಾಮ​ಗಾರಿ ಕಾರಣ ಬಿರುಕು ಬಿಟ್ಟು ಕುಸಿ​ಯು​ತ್ತಿತ್ತು. ಇದರಿಂದ ಎಚ್ಚೆತ್ತುಕೊಂಡ ತಾಲೂಕು ಆಡಳಿತ ಗುತ್ತಿಗೆದಾರರಿಗೆ ನೋಟಿಸ್‌ ಜಾರಿ ಮಾಡಿತು. ಈ ಹಿನ್ನೆ​ಲೆ​ಯಲೆಯಲ್ಲಿ ಕಳಪೆಯಾಗಿದ್ದ ಸೇತುವೆ ಕೆಡವಿ ಹೊಸ ಸೇತುವೆಯನ್ನು ವ್ಯವಸ್ಥಿತವಾಗಿ ಕಟ್ಟಲಾಗುತ್ತಿ​ದೆ.

ಸುಗ್ಗನಹಳ್ಳಿ ಗ್ರಾಮದಿಂದ ಹಿರೇಕೆರೆಗೆ ಕೆಂಕೆರೆ ಮಾರ್ಗವಾಗಿ ನೀರು ಹರಿದು ಬರಲು ನಾಲೆ ನಿರ್ಮಾಣ ಮಾಡಲು ಎಂಟು ಲಕ್ಷ ರು.ಗಳನ್ನು ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕಾಲುವೆ ನಿರ್ಮಾಣ ಮಾಡಲಾಗಿತ್ತು.

ಸರ್ಕಾರದ ನಿಯಮ ಪಾಲಿಸಿ : ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್...

ಆದರೆ, ಗುತ್ತಿಗೆದಾರರು ಪೈಪುಗಳನ್ನು ಒಂದರ ಪಕ್ಕ ಒಂದಿರಿಸಿ ಒಂದೆರೆಡು ಲೋಡು ಮಣ್ಣನ್ನು ಅದರ ಮೇಲೆ ಸುರಿದು ಕೈತೊಳೆದುಕೊಂಡಿದ್ದರು. ಸೇತುವೆ ಲೋಕಾರ್ಪಣೆಗೊಂಡ ಒಂದು ತಿಂಗಳ ನಂತರ ಸಾಧಾರಣ ಮಳೆಯಾಯಿತು. ಆಗ ಸೇತುವೆಯ ಪೈಪುಗಳು, ಹೊರಗೆ ಕಾಣಿಸಿಕೊಂಡು ಸೇತುವೆ ಬಿರುಕು ಬಿಟ್ಟು ಕುಸಿಯುವ ಹಂತ ತಲುಪಿರುವುದರ ಬಗ್ಗೆ ಕನ್ನಡಪ್ರಭ ಸುದ್ದಿ ಪ್ರಕಟಿಸಿ ಗಮನ ಸೆಳೆ​ದಿತ್ತು.

ಕಳಪೆ ಕಾಮಗಾರಿಯ ಕುರಿತು ಕನ್ನಡಪ್ರಭದ ವರದಿ ನಮ್ಮ ಗಮನಕ್ಕೆ ತಂದಿತು. ಸರ್ಕಾರದ ಹಣ ಪೋಲು ಆಗಬಾರದು. ಅವರೆಷ್ಟೇ ಪ್ರಭಾವಿತರಾದರು ನೀತಿ ನಿಯಮಗಳ ಮುಂದೆ ತಲೆಬಾಗಲೇಬೇಕು. ಅಧಿಕಾರಿಗಳಾಗಲಿ, ಗುತ್ತಿಗೆದಾರರಾಗಲಿ ಆತ್ಮವಂಚನೆಯಿಂದ ಕೆಲಸ ಮಾಡಬಾರದು ಎಂದು ನಂಬಿರುವ ನಾನು ಪತ್ರಿಕೆ ನೋಡಿದ ಕೂಡಲೇ ಸಂಬಂಧಪಟ್ಟವರಿಗೆ ನೋಟೀಸ್‌ ಜಾರಿ ಮಾಡಿ ಮರುದಿವನೇ ಕೆಲಸ ಆರಂಭಿಸಿದೆವು. ಈಗ ಸುಸಜ್ಜಿತ ಸೇತುವೆ ನಿರ್ಮಾಣ ಆಗಿರುವುದು ನನಗೆ ಸಂತಸ ಮೂಡಿಸಿದೆ.

- ಪ್ರದೀಪ್‌, ತಾಪಂ ಇಒ 

(ಸಾಂದರ್ಭಿಕ ಚಿತ್ರ)