ಸರ್ಕಾರದ ನಿಯಮ ಪಾಲಿಸಿ : ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಮ್ಮ ಹುಟ್ಟೂರಿನಲ್ಲಿ ಗಣೇಶ ಚತುರ್ಥಿಯಂದು ತಮ್ಮ ಪೂರ್ವಜರಿಗೆ ಪೂಜೆ ಸಲ್ಲಿಸಿದರು.

Kpcc President DK Shivakumar Pooja At His Native

 ಕನ​ಕ​ಪುರ (ಆ.24): ತಾಲೂಕಿನ ದೊಡ್ಡಾಲಹಳ್ಳಿ ಗ್ರಾಮದಲ್ಲಿ ತಂದೆ ಡಿ.ಕೆ. ಕೆಂಪೇಗೌಡರು ಮತ್ತು ಪೂರ್ವಜರ ಸಮಾ​ಧಿಗಳಿಗೆ ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಕುಟುಂಬ ಸಮೇ​ತ​ರಾಗಿ ಗಣೇ​ಶನ ಹಬ್ಬದ ದಿನ​ದಂದು ಪೂಜೆ ಸಲ್ಲಿಸಿದರು.

ಬೆಂಗ​ಳೂ​ರಿ​ನಿಂದ ಆಗ​ಮಿ​ಸಿದ ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ತಾಯಿ ಗೌರಮ್ಮ, ಪತ್ನಿ ಉಷಾ ಶಿವಕುಮಾರ್‌ ಅವ​ರೊಂದಿಗೆ ಸೇರಿ ಹಿರಿಯರ ಸಮಾಧಿಗೆ ಪೂಜೆ ಸಲ್ಲಿಸಿ ಎಡೆ ಇಟ್ಟರು.

ಈ ವೇಳೆ ಮಾತ​ನಾ​ಡಿದ ಡಿ.ಕೆ.​ಶಿ​ವ​ಕು​ಮಾರ್‌, ಪ್ರತಿವರ್ಷ ಗಣೇಶನ ಹಬ್ಬದ ದಿನ ನಮ್ಮ ತಂದೆ ಮತ್ತು ಪೂರ್ವಜರಿಗೆ ಪೂಜೆ ಸಲ್ಲಿಸುತ್ತಾ ಬಂದಿ​ದ್ದೇವೆ. ಇದು ಹಿಂದಿನಿಂದಲೂ ನಡೆದು ಬಂದಿರುವ ಪದ್ಧತಿ ಹಾಗಾಗಿ ಇವತ್ತು ಕುಟುಂಬದವರ ಜೊತೆಗೆ ಬಂದು ಪೂಜೆ ಸಲ್ಲಿಸಿದ್ದೇನೆ. ಹಿರಿ​ಯ​ರಿಗೆ ಎಡೆ ಇಟ್ಟು ಆತ್ಮಕ್ಕೆ ಶಾಂತಿ ಕೋರಿ ಅವರ ಆಶೀ​ರ್ವಾದ ಬೇಡಿದ್ದೇವೆ ಎಂದ​ರು.

ಕಾಂಗ್ರೆಸ್‌ನಲ್ಲಿ ಆಂತರಿಕ ಬೆಳವಣಿಗೆ: ಸೋನಿಯಾಗೆ ಪತ್ರ ಬರೆದ ಡಿಕೆಶಿ...

ಈ ಬಾರಿ ಕೊರೋನಾ ಇರುವ ಹಿನ್ನೆಲೆ ಜನರು ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವಾಗ ಎಚ್ಚರಿಕೆ ವಹಿ​ಸ​ಬೇಕು. ಸರ್ಕಾರದ ನಿಯಮಗಳನ್ನು ಕಡ್ಡಾ​ಯ​ವಾಗಿ ಪಾಲನೆ ಮಾಡಬೇಕು. ನಮ್ಮ ಸಂಪ್ರದಾಯಗಳು ಮುಖ್ಯ, ಆದರೆ, ಕೊರೋನಾ ಬಗ್ಗೆಯೂ ನಿಗಾ ಇರಲಿ ಎಂದು ಹೇಳಿ​ದರು.

ಫೋನ್‌ ಟ್ಯಾಪಿಂಗ್‌ ನಡೆದಿಲ್ಲ ಎಂಬ ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ನನಗೆ ನನ್ನ ಫೋನ್‌ ಟ್ಯಾಪ್‌ ಆಗುತ್ತಿದೆ ಎಂದು ಅನುಮಾನವಿದೆ. ಹಾಗಾಗಿ ದೂರು ಕೊಟ್ಟಿದ್ದೇನೆ. ಈ ಬಗ್ಗೆ ತನಿಖೆ ನಡೆಯಲಿ, ಆಮೇಲೆ ಮಾತನಾ​ಡು​ತ್ತೇನೆ ಎಂದು ಡಿ.ಕೆ.​ಶಿ​ವ​ಕು​ಮಾರ್‌ ಪ್ರಶ್ನೆ​ಯೊಂದಕ್ಕೆ ಉತ್ತ​ರಿ​ಸಿ​ದರು.

Latest Videos
Follow Us:
Download App:
  • android
  • ios