ಮದರಂಗಿ ಶಾಸ್ತ್ರ ಮುಗಿಸಿ ಮಲಗಿದ್ದ ವಧು ಮದುವೆ ದಿನ ನಾಪತ್ತೆ
ವಿವಾಹ ಮದರಂಗಿ ಶಾಸ್ತ್ರ ಮುಗಿಸಿಕೊಂಡು ವಿವಾಹಕ್ಕೆ ಸಿದ್ಧಳಾಗಿದ್ದ ಮದುಮಗಳು ವಿವಾಹದ ದಿನವೇ ಬೆಳ್ಳಂಬೆಳಗ್ಗೆ ಮನೆಯಿಂದ ನಾಪತ್ತೆಯಾದ ಘಟನೆ ಮಂಗಳವಾರ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪುಲ್ಲಾಜೆ ಎಂಬಲ್ಲಿ ನಡೆದಿದೆ.
ಮಂಗಳೂರು(ಫೆ.27): ವಿವಾಹ ಮದರಂಗಿ ಶಾಸ್ತ್ರ ಮುಗಿಸಿಕೊಂಡು ವಿವಾಹಕ್ಕೆ ಸಿದ್ಧಳಾಗಿದ್ದ ಮದುಮಗಳು ವಿವಾಹದ ದಿನವೇ ಬೆಳ್ಳಂಬೆಳಗ್ಗೆ ಮನೆಯಿಂದ ನಾಪತ್ತೆಯಾದ ಘಟನೆ ಮಂಗಳವಾರ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪುಲ್ಲಾಜೆ ಎಂಬಲ್ಲಿ ನಡೆದಿದೆ.
ಪುಲ್ಲಾಜೆ ನಿವಾಸಿ ಲಕ್ಷ್ಮಣ ನಾಯ್ಕ ಎಂಬವರ ಪುತ್ರಿ ನವ್ಯಾ ನಾಪತ್ತೆಯಾದ ಯುವತಿ. ನವ್ಯಾ ಅವರ ವಿವಾಹ ಫೆ.26ರಂದು ಪುತ್ತೂರು ತಾಲೂಕಿನ ಕುಂಬ್ರ ಸಮೀಪದ ಪರ್ಪುಂಜದ ಶಿವಕೃಪಾ ಹಾಲ್‌ನಲ್ಲಿ ನಿಗದಿಯಾಗಿತ್ತು.
ಬಾಂಬರ್ ಆದಿತ್ಯ ಆಸ್ಪತ್ರೆಗೆ ದಾಖಲು
ವಿವಾಹದ ಹಿನ್ನಲೆಯಲ್ಲಿ ಮಂಗಳವಾರ ರಾತ್ರಿ ವಧುವಿನ ಮನೆಯಲ್ಲಿ ಮದುರಂಗಿ ಶಾಸ್ತ್ರ ಕಾರ್ಯಕ್ರಮ ನಡೆದಿತ್ತು. ಆದರೆ ಬೆಳಗ್ಗೆ ಸುಮಾರು 5 ಗಂಟೆಯ ವೇಳೆಗೆ ವಧು ನಾಪತ್ತೆಯಾಗಿರುವುದು ಮನೆ ಮಂದಿಗೆ ತಿಳಿದು ಬಂದಿತ್ತು.
ಬಳಿಕ ಅವರು ಮದುವೆ ನಡೆಯಬೇಕಾಗಿದ್ದ ಹಾಲ್‌ಗೆ ಕರೆ ಮಾಡಿ ಮದುವೆಯನ್ನು ರದ್ದು ಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ನವ್ಯಾ ಅವರ ತಂದೆ ಲಕ್ಷ್ಮಣ ನಾಯ್ಕ ಅವರು ಬೆಳ್ಳಾರೆ ಠಾಣೆಗೆ ದೂರು ನೀಡಿದ್ದು, ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ನೋಡಿ | ಇಂದಿನ ಚಿನ್ನ-ಬೆಳ್ಳಿ ದರ, ಪೆಟ್ರೋಲ್-ಡೀಸೆಲ್ ಬೆಲೆ:
"