ತುಮಕೂರು, [ಜ.29]: ಇಂದು [ಮಂಗಳವಾರ] ಸಿದ್ಧಗಂಗಾ ಮಠಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಜಮೀರ್ ಅಹಮದ್  ಖಾನ್ ಭೇಟಿ‌ ನೀಡಿದರು.

ಸಿದ್ಧಲಿಂಗ ಸ್ವಾಮೀಜಿ ಜತೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್ ಜಮೀರ್ ಅಹ್ಮದ್ ಮಹತ್ವದ ಮಾಹಿತಿಯೊಂದನ್ನು ತಿಳಿಸಿದರು.

ಸಿದ್ಧಗಂಗಾ ಶ್ರೀಗೆ ಭಾರತರತ್ನ ಸಿಗದ್ದಕ್ಕೆ ಕಾಂಗ್ರೆಸ್‌ ಆಕ್ರೋಶ

'ಬಿಪಿಎಲ್ ಪಡಿತರ ಚೀಟಿ ಮೇಲೆ ಶಿವಕುಮಾರ ಶ್ರೀಗಳ ಫೋಟೋ ಮುದ್ರಿಸುವ ಯೋಚನೆಗಳನ್ನು ಮಾಡಲಾಗುತ್ತಿದ್ದು, ಈ ಬಗ್ಗೆ ಸರ್ಕಾರ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ' ಎಂದು ಹೇಳಿದರು.

31ರಂದು ನಡೆಯಲಿರುವ ಸಿದ್ಧಗಂಗಾ ಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಇಂದೇ ಮಠಕ್ಕೆ ಭೇಟಿ ಕೊಟ್ಟಿದ್ದೇನೆ ಎಂದರು.

ನಡೆದಾಡುವ ದೇವರು, ಅನ್ನ ದಾಸೋಹಿ ಎಂದೇ ಡಾ. ಶಿವಕುಮಾರ ಸ್ವಾಮೀಜಿ  ಅವರ ಫೋಟೋವನ್ನು ಬಿಪಿಎಲ್ ಪಡಿತರ ಕಾರ್ಡ್ ಮೇಲೆ ಹಾಕುವುದು ಒಂದು ಇಳ್ಳೆ ನಿರ್ಧಾರವಾಗಿದ್ದು, ಇದನ್ನು ಆದಷ್ಟೂ ಶೀಘ್ರವೇ ಜಾರಿಗೆ ತರಲಿ ಎನ್ನುವುದು ಸಾರ್ವಜನಿಕರ ಮಾತಾಗಿದೆ.