Asianet Suvarna News Asianet Suvarna News

Mangaluru: ಬಿಜೆಪಿ ಸದಸ್ಯತ್ವ ಪಡೆದ ಕಾರಣಕ್ಕೆ ಸೌದಿಯಲ್ಲಿ ದೇವದಾಸ್‌ ಕಾಪಿಕಾಡ್‌ ಕಾರ್ಯಕ್ರಮ ಬಹಿಷ್ಕಾರ?

ಪ್ರಸಿದ್ಧ ತುಳು ಚಿತ್ರನಟ ದೇವದಾಸ್ ಕಾಪಿಕಾಡ್ ಅವರು ಬಿಜೆಪಿ ಸದಸ್ಯತ್ವ ಪಡೆದ ನಂತರ, ಸೌದಿ ಅರೇಬಿಯಾದಲ್ಲಿ ನಡೆಯಬೇಕಿದ್ದ ಅವರ ಕಾರ್ಯಕ್ರಮವನ್ನು ಬಹಿಷ್ಕರಿಸುವಂತೆ ಬೆದರಿಕೆ ಹಾಕಲಾಗಿದೆ. ಈ ಬೆದರಿಕೆಯಿಂದ ಕಂಗೆಟ್ಟಿರುವ ನಟ, ತಾವು ಬಿಜೆಪಿ ಸದಸ್ಯತ್ವ ಪಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Boycott Voice Rise for Devadas Kapikad show in Saudi for attaining bjp membership san
Author
First Published Sep 6, 2024, 9:46 AM IST | Last Updated Sep 6, 2024, 10:05 AM IST

ಬೆಂಗಳೂರು (ಸೆ.6): ಬಿಜೆಪಿ ಸದಸ್ಯತ್ವ ಪಡೆದ ಕಾರಣಕ್ಕೆ ಸೌದಿ ಅರೇಬಿಯಾದಲ್ಲಿ ಪ್ರಸಿದ್ದ ನಟನ ಕಾರ್ಯಕ್ರಮ ಬಹಿಷ್ಕಾರ ಹಾಕಲಾಗಿದೆ. ಬಿಜೆಪಿ 'ಸದಸ್ಯತ್ವ' ವಿವಾದಕ್ಕೆ ಕರಾವಳಿಯ ಪ್ರಸಿದ್ದ ತುಳು ಚಿತ್ರನಟನ ಕಾರ್ಯಕ್ರಮ ಬಲಿಯಾಗಿದೆ. ಬಿಜೆಪಿ 'ಸದಸ್ಯತ್ವ' ಪಡೆದ ಬೆನ್ನಲ್ಲಿಯೇ ತುಳು ನಟನ ಕಾರ್ಯಕ್ರಮಕ್ಕೆ ಬಹಿಷ್ಕಾರದ ಬಿಸಿ ತಟ್ಟಿದೆ. ಸೌದಿ ಅರೇಬಿಯಾದಲ್ಲಿ ತುಳು ನಟನ ಕಾಮಿಡಿ ಶೋಗೆ ದೊಡ್ಡ ಮಟ್ಟದ ಬಹಿಷ್ಕಾರದ ಬೆದರಿಕೆ ಹಾಕಲಾಗಿದೆ. ದೇವದಾಸ್‌ ಕಾಪಿಕಾಡ್‌ ಅವರ ಕಾಮಿಡಿ ಶೋ ಕಾರ್ಯಕ್ರಮಕ್ಕೆ ಬಹಿಷ್ಕಾರ ಮಾಡುವ ಪೋಸ್ಟರ್‌ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇನ್ನು ಬಹಿಷ್ಕಾರ ಬೆದರಿಕೆ ಬೆನ್ನಲ್ಲಿಯೇ ನಟ ದೇವದಾಸ್‌ ಕಾಪಿಕಾಡ್‌ ಉಲ್ಟಾ ಹೊಡೆದಿದ್ದಾರೆ. ಬುಧವಾರ ಮಾಜಿ ಕೇಂದ್ರ ಸಚಿವ ಡಿ.ವಿ‌.ಸದಾನಂದ ಗೌಡ ಸಮ್ಮುಖದಲ್ಲಿ ದೇವದಾಸ್ ಕಾಪಿಕಾಡ್ ಬಿಜೆಪಿ ಸದಸ್ಯತ್ವ ಪಡೆದುಕೊಂಡಿದ್ದರು. ಇದರ ಬೆನ್ನಲ್ಲಿಯೇ ಅವರ ಕಾರ್ಯಕ್ರಮವನ್ನು ಬಹಿಷ್ಕಾರ ಮಾಡುವ ಬಿಸಿ ತಟ್ಟಿದೆ.

ಬಿಜೆಪಿ ಸದಸ್ಯತ್ವ ಅಭಿಯಾನದ ಅಂಗವಾಗಿ ದೇವಸಾದ್‌ ಕಾಪಿಕಾಡ್‌ ಆನ್‌ಲೈನ್‌ ಸದಸ್ಯತ್ವ ಪಡೆದಿದ್ದರು. ದೇವದಾಸ್ ಕಾಪಿಕಾಡ್ ಬಿಜೆಪಿ ಸದಸ್ಯತ್ವ ಪಡೆದ ಬಗ್ಗೆ ಬಿಜೆಪಿಯಿಂದ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಕೂಡ ಹಾಕಲಾಗಿತ್ತು. ಡಿ.ವಿ.ಸದಾನಂದ ಗೌಡ ಅಧಿಕೃತ ಫೇಸ್ಬುಕ್ ಖಾತೆ, ರಾಜ್ಯ ಮತ್ತು ದ.ಕ ಜಿಲ್ಲಾ ಬಿಜೆಪಿ ಫೇಸ್ಬುಕ್ ನಲ್ಲಿ ಇದರ ಪೋಸ್ಟ್‌ಗಳು ಬಂದಿದ್ದವು. ಫೋಸ್ಟ್ ವೈರಲ್ ಬೆನ್ನಲ್ಲೇ ದೇವದಾಸ್ ಕಾಪಿಕಾಡ್ ಗೆ ತಟ್ಟಿದ ಬಹಿಷ್ಕಾರದ ಬಿಸಿ ತಟ್ಟಿದೆ. ಸೆ.13 ಹಾಗೂ 14 ರಂದು ಸೌದಿ ಅರೇಬಿಯಾದಲ್ಲಿ ಕಾಪಿಕಾಡ್ ಶೋ ಕಾರ್ಯಕ್ರಮ ಆಯೋಜನೆಯಾಗಿತ್ತು.

ಸೌದಿಯ ಜುಬೈಲ್ ನ ಪುಲಿ ರೆಸ್ಟೋರೆಂಟ್ ನಲ್ಲಿ ಕಾರ್ಯಕ್ರಮ ಆಯೋಜನೆಯಾಗಿತ್ತು. ಆದರೆ, ಕಾಪಿಕಾಡ್‌ ಬಿಜೆಪಿ ಸದಸ್ಯತ್ವ ಪಡೆದ ಹಿನ್ನೆಲೆ ಕಾರ್ಯಕ್ರಮ ಬಹಿಷ್ಕರಿಸಿ ಅಂತ ಪೋಸ್ಟ್ ವೈರಲ್ ಆಗಿದೆ. ಈ ಬೆದರಿಕೆಯ ಬೆನ್ನಲ್ಲಿಯೇ ಸ್ಪಷ್ಟೀಕರಣ ನೀಡಿರುವ ದೇವದಾಸ್‌ ಕಾಪಿಕಾಡ್‌, 'ಬಿಜೆಪಿ ನಾಯಕರ ಜೊತೆ ಕೇವಲ ಸೌಹಾರ್ದ ಭೇಟಿ ನಡೆದಿದೆ. ನಾನು ಯಾವುದೇ ಪಕ್ಷಕ್ಕೂ ಸೇರಿದವನಲ್ಲ, ಯಾವುದೇ ಪಕ್ಷಕ್ಕೆ ನಾನು ಸೇರ್ಪಡೆಯಾಗಿಲ್ಲ, ಎಲ್ಲಾ ಪಕ್ಷಗಳ ಮುಖಂಡರ ಜೊತೆ ನನಗೆ ಉತ್ತಮ ಸಂಬಂಧ ಇದೆ. ನಾನೊಬ್ಬ ಕಲಾವಿದ, ಎಲ್ಲಾ ಜಾತಿ ಮತ ಧರ್ಮಗಳ ಜನರು ನನ್ನ ಅಭಿಮಾನಿಗಳಾಗಿದ್ದು, ನನ್ನನ್ನು ಪ್ರೀತಿ ಮಾಡುತ್ತಾರೆ. ನನಗೆ ಯಾವ ಪಕ್ಷವೂ ಬೇಕಿಲ್ಲ. ಎಲ್ಲಾ ಪಕ್ಷಗಳ ನಾಯಕರ ಜೊತೆಗೂ ನನಗೆ ಭಾಂದವ್ಯ ಇದೆ. ರಮಾನಾಥ ರೈ, ಯು.ಟಿ ಖಾದರ್, ನಳಿನ್ ಕುಮಾರ್ ಕಟೀಲ್ ನನಗೆ ಒಳ್ಳೆಯ ಸ್ನೇಹಿತರು ಎಂದಿದ್ದಾರೆ. ನನ್ನ ಮನೆಗೆ ಯಾವ ಪಕ್ಷದ ನಾಯಕರು ಬಂದರೂ ಸ್ವಾಗತಿಸಿ ಆತಿಥ್ಯ ನೀಡಿ ಫೋಟೋ ತೆಗಿಸಿಕೊಳ್ಳುತ್ತೇನೆ. ಬಿಜೆಪಿ ನಾಯಕರು ಕರೆಮಾಡಿ ನಿಮ್ಮ ಮನೆಗೆ ಬರುತ್ತೇವೆ ಎಂದಾಗ ಬನ್ನಿ ಎಂದು ಹೇಳಿದ್ದೆ. ಕೇವಲ ಸೌಹಾರ್ದ ಭೇಟಿಗಾಗಿ ಮಾತ್ರ ಬನ್ನಿ. ಬೇರೆ ಯಾವುದೇ ತಪ್ಪು ಸಂದೇಶ ಹೋಗಬಾರದು ಅಂತ ನಾನು ಮೊದಲೇ ಬಿಜೆಪಿ ನಾಯಕರಿಗೆ ತಿಳಿಸಿದ್ದೆ. ಅದರಂತೆ ಕೆಲ ಬಿಜೆಪಿ ಮುಖಂಡರು ಮನೆಗೆ ಬಂದು ಭೇಟಿ ಮಾಡಿ ಹೋಗಿದ್ದಾರೆ. ಆದರೆ ಬಂದು ಹೋದ ಮೇಲೆ ಬಿಜೆಪಿ ಸದಸ್ಯತ್ವ ಪಡೆದಿದ್ದೇನೆ ಎಂದು ಅದರಲ್ಲಿದ್ದ ಯಾರೋ ತಪ್ಪು ಸಂದೇಶ ನೀಡಿದ್ದಾರೆ. ಆದರೆ ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹೇಳಿದ್ದಾರೆ.

ಆ್ಯಂಕರ್ ಅನುಶ್ರೀ ಪಕ್ಕದಲ್ಲಿ ಕುಳಿತ ಮಂಗಳೂರು ಹುಡುಗ ಯಾರು?; ಮದ್ವೆ ಬಗ್ಗೆ ಕೇಳಬೇಡಿ ಅಂದಿದ್ಯಾಕೆ?

ಆದರೆ, ಅನ್ ಲೈನ್ ನಲ್ಲಿ ಫೋಟೋ ಸಹಿತ ಅಪ್‌ಲೋಡ್ ಮಾಡಿ ಕಾಪಿಕಾಡ್‌ ಸದಸ್ಯತ್ವ  ಪಡೆದುಕೊಂಡಿದ್ದಾರೆ. ಸೌದಿ ಕಾರ್ಯಕ್ರಮ ಬಹಿಷ್ಕಾರದ ಬೆದರಿಕೆಗೆ ಪ್ರಸಿದ್ಧ ನಟ ತತ್ತರಿಸಿಹೋಗಿದ್ದಾರೆ. ತುಳು ಹಾಗೂ ಕನ್ನಡ ಸಿನಿಮಾಗಳಲ್ಲಿ ದೇವದಾಸ್‌ ಕಾಪಿಕಾಡ್‌ ನಟಿಸಿದ್ದು.  ಸರ್ವ ಧರ್ಮದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ತುಳು ರಂಗಭೂಮಿಯಲ್ಲಿಯೂ ಕಾಪಿಕಾಡ್‌ ಪ್ರಖ್ಯಾತ ನಟರಾಗಿದ್ದಾರೆ.

ದೇವದಾಸ್ ಕಾಪಿಕಾಡ್ 'ಪುರುಷೋತ್ತಮನ ಪ್ರಸಂಗ' ಬಿಡುಗಡೆಗೆ ಕ್ಷಣಗಣನೆ; ಮೋಡಿ ಮಾಡುತ್ತಾ ಹೊಸಬರ ಟೀಮ್?

Boycott Voice Rise for Devadas Kapikad show in Saudi for attaining bjp membership san

Latest Videos
Follow Us:
Download App:
  • android
  • ios