ಹೋಂ ಕ್ವಾರೆಂಟೈನ್‌ನಲ್ಲಿದ್ದ 15ರ ಬಾಲಕ ಆತ್ಮಹತ್ಯೆ
ಹೋಂ ಕ್ವಾರಂಟೈನ್‌ನಲ್ಲಿದ್ದ 15 ವರ್ಷದ ಬಾಲಕ ಮನೆಯಿಂದ ಹೊರಗೆ ಹೋಗಲು ತಾಯಿ ಬಿಡಲಿಲ್ಲ ಎನ್ನುವ ಕಾರಣಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಸಾಲಿಗ್ರಾಮ ಗ್ರಾಮದ ಮಾಣಿಕಟ್ಟು ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ.
ಕೋಟ(ಜು.08): ಹೋಂ ಕ್ವಾರಂಟೈನ್‌ನಲ್ಲಿದ್ದ 15 ವರ್ಷದ ಬಾಲಕ ಮನೆಯಿಂದ ಹೊರಗೆ ಹೋಗಲು ತಾಯಿ ಬಿಡಲಿಲ್ಲ ಎನ್ನುವ ಕಾರಣಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಸಾಲಿಗ್ರಾಮ ಗ್ರಾಮದ ಮಾಣಿಕಟ್ಟು ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ.
ಮೃತ ಬಾಲಕ ಕಾರ್ತಿಕ್, ಕೋಟ ವಿವೇಕ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ. ಅವನ ತಾಯಿ ಕೆಲಸ ಮಾಡುತಿದ್ದ ಮನೆಯವರಿಗೆ ಕೊರೋನಾ ಸೋಂಕು ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ತಾಯಿ ಮತ್ತು ಕಾರ್ತಿಕ್ ಅವರಿಗೆ ಹೋಂ ಕ್ವಾರಂಟೈನ್ ವಿಧಿಸಲಾಗಿತ್ತು. ಆದರೆ ಕಾರ್ತಿಕ್ ಮನೆಯೊಳಗಿರಲಾರದೆ ಹೊರಗೆ ಹೋಗಿ ಆಡುವುದಕ್ಕೆ ಬಯಸುತ್ತಿದ್ದ, ಆದರೆ ಹೋಂ ಕ್ವಾರಂಟೈನ್‌ನಲ್ಲಿರುವುದರಿಂದ ಹೊರಗೆ ಹೋಗಲು ತಾಯಿ ಅವಕಾಶ ನೀಡಿರಲಿಲ್ಲ.
ಕೊರೋನಾಗೆ ಹೆದರಿ ಆತ್ಮಹತ್ಯೆ: ಟೆಸ್ಟ್ ನೆಗೆಟಿವ್..!
ಈ ಕಾರಣಕ್ಕೆ ಸಿಟ್ಟುಗೊಂಡ ಕಾರ್ತಿಕ್ ಸಂಜೆ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದ. ತಕ್ಷಣ ತಾಯಿ ಅದನ್ನು ನೋಡಿ ನೆರೆಯವರ ಸಹಾಯದಿಂದ ಕೆಳಗಿಳಿಸಿ ಬ್ರಹ್ಮಾವರದ ಮಹೇಶ ಆಸ್ಪತ್ರೆಗೆ ಕರೆದೊಯ್ದರೂ ಕಾರ್ತಿಕ್ ಅದಾಗಲೇ ಕೊನೆಯುಸಿರೆಳೆದಾಗಿತ್ತು. ನಂತರ ಆತನ ಗಂಟಲದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ.
[ಸಮಸ್ಯೆಗಳು ಜೀವನದ ಅವಿಭಾಜ್ಯ ಅಂಗ. ಸಮಸ್ಯೆಯಿಲ್ಲದ ಮನುಷ್ಯನಿಲ್ಲ. ಯಾವುದೇ ಸಮಸ್ಯೆ ಜೀವನದ ಅಂತ್ಯವಲ್ಲ. ಆತ್ಮಹತ್ಯೆ ಆಲೋಚನೆ ಹೊಳೆದರೆ ಸರ್ಕಾರದ ಸಹಾಯವಾಣಿಗೆ ಕರೆ ಮಾಡಿ: 080 25497777 ಅಥವಾ ಆರೋಗ್ಯ ಸಹಾಯವಾಣಿ 104 ಗೆ ಕರೆ ಮಾಡಿ]