ಪಿಕೆಪಿಎಸ್ ಕಟ್ಟಡದ ಛಾವಣಿಯ ಮುಂಭಾಗ ಕುಸಿದು ಓರ್ವ ಬಾಲಕ ಸಾವು| ಬೀದರ್‌ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದಲ್ಲಿ ನಡೆದ ಘಟನೆ| ಸುಮಾರು 40 ವರ್ಷಗಳಷ್ಟು ಹಳೆಯ ಕಟ್ಟಡವಾಗಿರುವ ಕಾರಣ ಮಳೆಯಿಂದ ನೆನೆದು ಛಾವಣಿ ಕುಸಿದಿರಬಹುದು ಎಂಬ ಶಂಕೆ|

ಬೀದ​ರ್‌(ಆ.10): ಇಲ್ಲಿನ ಮಂಠಾಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪಿಕೆಪಿಎಸ್‌) ಕಟ್ಟಡದ ಛಾವಣಿಯ ಮುಂಭಾಗ ಕುಸಿದು ಓರ್ವ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರಜ್ವಲ ಶ್ರೀನಾಥ್‌ ಜಾಧವ (11) ಮೃತಪಟ್ಟಿದ್ದು, ದಿನೇಶ್‌ ಭೀಮಣ್ಣ, ಆಕಾಶ ಭೀಮಣ್ಣ, ಚರಣ ತಾನಾಜಿ ಎಂಬ ಮೂವರು ಮಕ್ಕಳು ಗಾಯಗೊಂಡಿದ್ದು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ವರು ಮಕ್ಕಳು ಇಲ್ಲಿ ಆಟವಾಡುತ್ತಿದ್ದರು. ಸುಮಾರು 40 ವರ್ಷಗಳಷ್ಟು ಹಳೆಯ ಕಟ್ಟಡವಾಗಿರುವ ಕಾರಣ ಮಳೆಯಿಂದ ನೆನೆದು ಛಾವಣಿ ಕುಸಿದಿರಬಹುದು ಎಂದು ಶಂಕಿಸಲಾಗಿದೆ. 

ಬೀದರ್‌: ಹಸಿವು ತಾಳದೇ ಅಪರಿಚಿತ ಮಹಿಳೆ ಸಾವು

ಘಟನಾ ಸ್ಥಳಕ್ಕೆ ಸಿಪಿಐ ಮಹೇಶಗೌಡ ಪಾಟೀಲ್‌, ಪಿಎಸ್‌ಐ ಜಯಶ್ರೀ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ವೇಳೆ ಇಂತಹ ದುರಂತಗಳು ಮರುಕಳಿಸದಿರಲಿ ಎಂದು ಸಾರ್ವಜನಿಕರು ಆಗ್ರಹಿಸಿದರು.