ಪಬ್‌ಜಿ ಆಡಲು ಇಂಟರ್ನೆಟ್ ಹಾಕಿಸದ್ದಕ್ಕೆ ಬಾಲಕ ಆತ್ಮ​ಹ​ತ್ಯೆ

ಪಬ್ ಜಿ ಆಡಲು ಇಂಟರ್ನೆಟ್ ಹಾಕಿಸಲಿಲ್ಲ ಎಂದು ಬಾಲಕನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಪಬ್ ಜಿ ಹುಚ್ಚು ಆತನ ಪ್ರಾಣವನ್ನೇ ಬಲಿ ಪಡೆದಿದೆ. 

Boy Commits Suicide After Parents Told Stop Pubg Game

ಹಾವೇರಿ (ಸೆ.11): ಪಬ್ಜಿ ವಿಡಿಯೋ ಗೇಮ್‌ ಆಡಬೇಡ ಎಂದಿದ್ದಕ್ಕೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಬಾಲಕನೊಬ್ಬ ಚಿಕಿತ್ಸೆ ಫಲಿಸದೆ ಮೃತಪಟ್ಟಘಟನೆ ತಾಲೂಕಿನ ಸಂಗೂರು ಗ್ರಾಮದಲ್ಲಿ ನಡೆದಿದೆ. 

ತೇಜಸ್‌ ಶಿಡ್ಲಾಪುರ (17) ಆತ್ಮಹತ್ಯೆ ಮಾಡಿಕೊಂಡ ಬಾಲಕ. ಅತಿಯಾಗಿ ಪಬ್ಜಿ ಆಡುತ್ತಿದ್ದ ಈತನಿಗೆ ಪೋಷಕರು ಬುದ್ಧಿವಾದ ಹೇಳಿದ್ದಾರೆ. ಆಗಲೂ ಕೇಳದ್ದಕ್ಕೆ ಮೊಬೈಲ್‌ ಇಂಟರ್‌ನೆಟ್‌ ಸಂಪರ್ಕ ಕಡಿತಗೊಳಿಸಿದ್ದರು. 

ಇದರಿಂದ ಬೇಸತ್ತ ತೇಜಸ್‌ ಆ.31ರಂದು ತೋಟಕ್ಕೆ ಹೋಗಿ ಅಲ್ಲಿ ಬೆಳೆಗಳಿಗೆ ಸಿಂಪಡಿಸಲು ಇಟ್ಟಿದ್ದ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಪೋಷಕರು ಆತನನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

ಚೀನಾಕ್ಕೆ ಮತ್ತೊಂದು ಮರ್ಮಾಘಾತ; ಪಬ್‌ಜಿ ಸೇರಿ 118 ಅಪ್ಲಿಕೇಶನ್ ಬ್ಯಾನ್

ಈಗಾಗಲೇ ಪಬ್ ಜಿ ಬ್ಯಾನ್ ಮಾಡಲಾಗಿದ್ದು, ಬಾಲಕ ಪಬ್‌ಜಿ ಹುಚ್ಚಿಗೆ ಬಿದ್ದಿದ್ದ. ಈತನ ಈ ಆಟದ ಹುಚ್ಚೆ ಈತನ ಪ್ರಾಣವನ್ನು ಬಲಿ ಪಡೆದುಕೊಂಡಿದೆ. 

ಈ ಹಿಂದೆಯೂ ಕೂಡ ಅನೇಕ ಮಂದಿ ಪಬ್‌ಜಿ ಹುಚ್ಚಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದರು. ಇದೀಗ ಮತ್ತೆ ಪಬ್ ಜಿ ಹುಚ್ಚಿಗೆ ಬಿದ್ದ ಬಾಲಕನೋರ್ವ ಪ್ರಾಣ ಕಳೆದುಕೊಂಡಿದ್ದಾನೆ.

Latest Videos
Follow Us:
Download App:
  • android
  • ios