ಚೀನಾಕ್ಕೆ ಮತ್ತೊಂದು ಮರ್ಮಾಘಾತ; ಪಬ್‌ಜಿ ಸೇರಿ 118 ಅಪ್ಲಿಕೇಶನ್ ಬ್ಯಾನ್
ಕೊನೆಗೂ ಪಬ್ ಜಿ ಬ್ಯಾನ್/ ಭಾರತದಿಂದ ಹುಚ್ಚಾಟ ಹೊರಕ್ಕೆ/ ಚೀನಾ ಮೇಲೆ ಮತ್ತೊಂದು ಸುತ್ತಿನ ಡಿಜಿಟಲ್ ಸಮರ/ ಕೇಂದ್ರ ಸರ್ಕಾರದಿಂದ ಮತ್ತೊಂದು ದಿಟ್ಟ ನಿರ್ಧಾರ
ನವದೆಹಲಿ(ಸೆ. 02) ಕೇಂದ್ರ ಸರ್ಕಾರ ತನ್ನ ಡಿಜಿಟಲ್ ಸಮರವನ್ನು ಮುಂದುವರಿಸಿದ್ದು ಕೊನೆಗೂ ಪ್ ಜಿಗೆ ಮುಕ್ತಿ ಕಾಣಿಸಿದೆ. ಮೊಬೈಲ್ ಗೇಮ್ ಪಬ್ ಜಿ ಸೇರಿದಂತೆ ನೂರು ವಿವಿಧ ಅಪ್ಲಿಕೇಶನ್ ಗಳನ್ನು ಬ್ಯಾನ್ ಮಾಡಲಾಗಿದೆ.
ಒಟ್ಟು 118 ಮೊಬೈಲ್ ಅಪ್ಲಿಕೇಶನ್ ಗಳಿಗೆ ಕೇಂದ್ರ ಸರ್ಕಾರ ಮುಕ್ತಿ ನೀಡಿದೆ. ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಬ್ಯಾನ್ ಆದೇಶ ನೀಡಿದೆ. ಭಾರತ ಮತ್ತು ಚೀನಾ ಗಡಿಯಲ್ಲಿ ಬೂದಿ ಮುಚ್ಚಿದ ವಾತಾರಣ ಇರುವ ಕಾರಣ ಕೇಂದ್ರ ಮತ್ತೊಂದು ಗಟ್ಟಿ ನಿರ್ಧಾರ ತೆಗೆದುಕೊಂಡಿದೆ. ಸುಮಾರು ಮೂರು ಕೋಟಿ ಜನರು ಪಬ್ ಜಿ ಗೇಮ್ ಬಳಕೆದಾರರಾಗಿದ್ದರು ಎಂಬ ಮಾಹಿತಿ ಇದೆ.
ಟಿಕ್ ಟಾಕ್ , ಯುಸಿ ಬ್ರೌಸರ್, ವಿ ಚಾಟ್ ಸೇರಿದಂತೆ 59 ಚೀನಾ ಅಪ್ಲಿಕೇಶನ್ ಗಳನ್ನು ಜೂನ್ ದಲ್ಲಿ ಬ್ಯಾನ್ ಮಾಡಲಾಗಿತ್ತು. ಪಬ್ ಜಿ ಮಾತ್ರ ಬ್ಯಾನ್ ಆಗದೆ ಉಳಿದುಕೊಂಡಿದ್ದು ಅದಕ್ಕೂ ಮುಕ್ತಿ ಕಾಣಿಸಲಾಗಿದೆ.
ಗೇಮ್ ಆಫ್ ಸುಲ್ತಾನ್ಸ್, ಡಾರ್ಕ್ ಟ್ಯಾಂಕ್ಸ್, ಕಿಟ್ಟಿ ಲೈವ್, ವಿಪಿಎನ್ ಫಾರ್ ಟಿಕ್ ಟಾಕ್, ಮಾಫಿಯಾ ಸಿಟಿ, ರೂಲ್ಸ್ ಆಫ್ ಸರ್ ವೈವಲ್ ಗಳನ್ನು ಬ್ಯಾನ್ ಮಾಡಲಾಗಿದೆ.