ದಸರಾ ಹಬ್ಬದ ಅಂಗವಾಗಿ ಕಾರ್ಮಿಕರಿಗೆ ಬೋನಸ್‌

ಮಾಲೀಕರು, ಆಡಳಿತ ಹಾಗೂ ಕಾರ್ಮಿಕ ವರ್ಗದವರು ಪ್ರಾಮಾಣಿಕ ಶ್ರಮ, ನಂಬಿಕೆ ಹಾಗೂ ಪರಸ್ಪರ ಒಗ್ಗಟ್ಟಿನ ಸಹಕಾರದಿಂದ ದುಡಿದಲ್ಲಿ ಮಾತ್ರ ಕೈಗಾರಿಕೆಗಳು ಮತ್ತು ಯಾವುದೇ ವ್ಯಾಪಾರ ವಹಿವಾಟುಗಳಲ್ಲಿ ಯಶಸ್ಸು ದೊರೆಯಲಿದೆ ಎಂದು ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷ ಗುರುಪರದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

 

Bonus Distributes For Labours In namrata Oi factory snr

ತಿಪಟೂರು (ಅ.06): ಮಾಲೀಕರು, ಆಡಳಿತ ಹಾಗೂ ಕಾರ್ಮಿಕ ವರ್ಗದವರು ಪ್ರಾಮಾಣಿಕ ಶ್ರಮ, ನಂಬಿಕೆ ಹಾಗೂ ಪರಸ್ಪರ ಒಗ್ಗಟ್ಟಿನ ಸಹಕಾರದಿಂದ ದುಡಿದಲ್ಲಿ ಮಾತ್ರ ಕೈಗಾರಿಕೆಗಳು ಮತ್ತು ಯಾವುದೇ ವ್ಯಾಪಾರ ವಹಿವಾಟುಗಳಲ್ಲಿ ಯಶಸ್ಸು ದೊರೆಯಲಿದೆ ಎಂದು ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷ ಗುರುಪರದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ನಗರದ ಹಾಸನ ರಸ್ತೆಯಲ್ಲಿರುವ ಬೃಹತ್‌ ನಮ್ರತಾ ಆಯಿಲ್‌ ರಿಫೈನರಿ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಆಯುಧಪೂಜಾ ಹಾಗೂ ಧಾರ್ಮಿಕ ಸಭೆಯಲ್ಲಿ ಕಾರ್ಮಿಕರಿಗೆ ಬೋನಸ್‌ ವಿತರಣೆ ಮಾಡಿ ಆಶೀರ್ವಚನ ನೀಡಿದರು. ಇಲ್ಲಿನ ನಮ್ರತಾ ಆಯಿಲ್‌ ಸಂಸ್ಥೆಯವರು ತೆಂಗು ಬೆಳೆಗಾರರ ಹಿತಕಾಯುವ ಕೆಲಸ ಮಾತ್ರ ಮಾಡುತ್ತಿರುವುದಲ್ಲದೆ, ಇಲ್ಲಿ ಕೆಲಸ ನಿರ್ವಹಿಸುತ್ತಿರುವ 400ಕ್ಕೂ ಹೆಚ್ಚು ಕಾರ್ಮಿಕರ ಕುಟುಂಬಗಳ ಹಿತ ಕಾಯುತ್ತಿರುವುದು ಹೆಮ್ಮೆಯ ವಿಷಯ. ಬೇರೆ ಕಾರ್ಖಾನೆಗಳಲ್ಲಿ ಕಾಣದಂತಹ ಕಾರ್ಮಿಕರು-ಮಾಲೀಕರುಗಳ ಪರಸ್ಪರ ನಂಬಿಕೆ, ಪ್ರೀತಿ, ವಿಶ್ವಾಸಗಳನ್ನು ಇಲ್ಲಿ ಕಾಣಬಹುದು. ಈ ಕಾರ್ಖಾನೆ ಮಾಲೀಕರು ತಾಲೂಕಿನ ರೈತರ ಜೀವನಾದಾರ ಬೆಳೆಯಾದ ತೆಂಗು ಬೆಳೆಗಾರರ ಹಿತಕಾಯುತ್ತಿರುವುದರ ಜೊತೆ ಕಾರ್ಮಿಕ ಕುಟುಂಬಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಿರುವ ಜೊತೆಗೆ ಕಾರ್ಮಿಕ ಕುಟುಂಬಗಳ ಆರೋಗ್ಯಕರ ಬದುಕಿಗೆ ಆಸರೆಯಾಗಿದ್ದಾರೆ. ಸಂಸ್ಥೆ ಅವರ ಕಷ್ಟಸುಖಗಳಿಗೆ ಸ್ಫಂದಿಸುತ್ತಿರುವುದಲ್ಲದೆ, ಧಾರ್ಮಿಕ, ಸಾಮಾಜಿಕ, ವಿಕಲಚೇತನರ ಕಾರ್ಯಕ್ರಮಗಳ ಯಶಸ್ಸಿಗೆ ಸದಾ ಸ್ಪಂದಿಸುವ ಸಂಸ್ಥೆಯ ರೂವಾರಿಗಳಾದ ಅರುಣ್‌ಕುಮಾರ್‌, ರವೀಂದ್ರ ಹಾಗೂ ಶಿವಪ್ರಸಾದ್‌ ನಿಜಕ್ಕೂ ಅಭಿನಂದನಾರ್ಹರು. ಇಲ್ಲಿನ ತೆಂಗು ಬೆಳೆಗಾರರ ಹಿತಕಾಯಲು ಮುಂದಿನ ದಿನಗಳಲ್ಲಿ ಮತ್ತಷ್ಟುಯೋಜನೆ ರೂಪಿಸಬೇಕು. ಈ ವರ್ಷ ಉತ್ತಮ ಮಳೆಯಾಗಿರುವುದರಿಂದ ಉತ್ತಮ ಬೆಳೆಯೂ ಸಿಗುವ ಎಲ್ಲಾ ಲಕ್ಷಣಗಳು ಕಾಣುತ್ತಿದ್ದು, ಈ ವಿಜಯದಶಮಿ, ಆಯುಧಪೂಜೆ ಸಂಭ್ರಮದಲ್ಲಿ ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಉತ್ತಮ ಆರೋಗ್ಯ ಹಾಗೂ ನೆಮ್ಮದಿ ನೀಡುವ ಮೂಲಕ ದೇಶದಲ್ಲಿ ಶಾಂತಿ ನೆಲೆಸುವಂತೆ ಆಶೀರ್ವದಿಸಲಿ ಎಂದು ತಿಳಿಸಿದರು.

ಕಾಂಗ್ರೆಸ್‌ ಮುಖಂಡ ಹಾಗೂ ನಿ.ಎಸಿಪಿ ಲೋಕೇಶ್ವರ ಮಾತನಾಡಿ, ನಮ್ರತಾ ಆಯಿಲ್‌ ಮಿಲ್‌ ಸಂಸ್ಥೆಯವರು ತಾಲೂಕಿನ, ಅಕ್ಕಪಕ್ಕದ ತಾಲೂಕಿನ ತೆಂಗು ಬೆಳೆಗಾರರ ಆರ್ಥಿಕತೆಗೆ ತಮ್ಮದೆ ಕೊಡುಗೆ ನೀಡುತ್ತಿದ್ದಾರೆ. ಅಲ್ಲದೆ ನೂರಾರು ಉದ್ಯೋಗಗಳನ್ನು ಸೃಷ್ಟಿಸಿ, ಉದ್ಯೋಗಿಗಳ ಕುಟುಂಬಗಳ ನೆಮ್ಮದಿ ಜೀವನಕ್ಕೆ ಶ್ರಮಿಸುತ್ತಿದ್ದಾರೆ ಎಂದರು.

ಮಾಜಿ ಶಾಸಕ ಕೆ.ಷಡಕ್ಷರಿ ಮಾತನಾಡಿ, ನಮ್ರತಾ ಸಂಸ್ಥೆಯವರು ತಾಲೂಕಿನ ತೆಂಗು ಬೆಳೆಗಾರರು ಬೆಳೆದಿರುವ ಕೊಬ್ಬರಿ ಹಾಗೂ ಕೌಟನ್ನು ಉತ್ತಮ ಬೆಲೆಗೆ ತೆಗೆದುಕೊಳ್ಳುವ ಮೂಲಕ ತಮ್ಮದೆ ಆದ ಕಾಣಿಕೆಯನ್ನು ರೈತರಿಗೆ ನೀಡುತ್ತಿರುವುದು ಹೆಮ್ಮಯ ವಿಷಯ ಎಂದರು.

ರಾಜ್ಯ ಆರ್ಯವೈಶ್ಯ ಮಂಡಳಿಯ ಉಪಾಧ್ಯಕ್ಷ ಬಾಗೇಪಲ್ಲಿ ನಟರಾಜು, ಮುಖಂಡರಾದ ದಿವಾಕರ್‌, ಮಧುಬೋರ್‌ವೆಲ್‌, ಸಂಸ್ಕಾರ ಭಾರತಿ ಆಯೋಜಕರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನಮ್ಮ ತಾಲೂಕಿನ ನೂರಾರು ಕುಟುಂಬಗಳಿಗೆ ಉದ್ಯೋಗ ನೀಡಿರುವ ಈ ಕಾರ್ಖಾನೆ ಆಡಳಿತ ವರ್ಗ ಮುಂದಿನ ದಿನಗಳಲ್ಲಿ ತೆಂಗು ಬೆಳೆಗಾರರ ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆಕಲ್ಪಿಸುವಲ್ಲಿ ಹಾಗೂ ನಿರುದ್ಯೋಗ ಯುವಕರಿಗೆ ಮತ್ತಷ್ಟುಉದ್ಯೋಗ ನೀಡುವಂತಾಗಲಿ.

ಬಿ.ಸಿ. ನಾಗೇಶ್‌ ಶಿಕ್ಷಣ ಸಚಿವ

 

ಒಗ್ಗಟ್ಟಾಗಿ ದುಡಿದಲ್ಲಿ ವ್ಯಾಪಾರ ವಹಿವಾಟು ಯಶಸ್ಸು

ದಸರಾ ಹಬ್ಬದ ಅಂಗವಾಗಿ ಕಾರ್ಮಿಕರಿಗೆ ಬೋನಸ್‌

  • ತೆಂಗು ಬೆಳೆಗಾರರ ಹಿತಕಾಯಲು ಮತ್ತಷ್ಟುಯೋಜನೆ ರೂಪಿಸಿ: ಶ್ರೀ
  • ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷ ಗುರುಪರದೇಶಿಕೇಂದ್ರ ಸ್ವಾಮೀಜಿ
  • ನಗರದ ಹಾಸನ ರಸ್ತೆಯಲ್ಲಿರುವ ಬೃಹತ್‌ ನಮ್ರತಾ ಆಯಿಲ್‌ ರಿಫೈನರಿ ಸಂಸ್ಥೆ
  • ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಆಯುಧಪೂಜಾ ಹಾಗೂ ಧಾರ್ಮಿಕ ಸಭೆ
  • ಸಭೆಯಲ್ಲಿ ಕಾರ್ಮಿಕರಿಗೆ ಬೋನಸ್‌ ವಿತರಣೆ ಮಾಡಿ ಆಶೀರ್ವಚನ
  • ನಮ್ರತಾ ಆಯಿಲ್‌ ಮಿಲ್‌ ಸಂಸ್ಥೆಯವರು ತಾಲೂಕಿನ, ಅಕ್ಕಪಕ್ಕದ ತಾಲೂಕಿನ ತೆಂಗು ಬೆಳೆಗಾರರ ಆರ್ಥಿಕತೆಗೆ ತಮ್ಮದೆ ಕೊಡುಗೆ

 

Latest Videos
Follow Us:
Download App:
  • android
  • ios