Bengaluru: ಬಿಎಂಟಿಸಿಗೂ ಬಂತು ‘ಸ್ಮಾರ್ಟ್‌ ಆ್ಯಪ್‌’ ಪಾಸ್‌..!

*  ಆ್ಯಪ್‌ ಡೌನ್‌ಲೋಡ್‌ ಮಾಡಿ, ಪಾಸ್‌ ಖರೀದಿಸಿ
*  ಕ್ಯೂಆರ್‌ ಕೋಡ್‌ ತೋರಿಸಿದರೆ ಆಯ್ತು
*  ಆರಂಭಿಕ ಹಂತದಲ್ಲಿ ವೋಲ್ವೋ, 200 ಸಾಮಾನ್ಯ ಬಸ್‌ಗಳಿಗೆ ಲಭ್ಯ
 

BMTC Smart Bus Pass Service Will Be Start on April 6th in Bengaluru grg

ಬೆಂಗಳೂರು(ಏ.02):  ನಗರದ ಜನತೆಗಾಗಿ ಬಿಎಂಟಿಸಿ(BMTC) ಪರಿಚಯಿಸಿರುವ ‘ಸ್ಮಾರ್ಟ್‌ ಬಸ್‌ ಪಾಸ್‌’(Smart Bus Pass) ಬುಧವಾರ (ಏ.6) ಲೋಕಾರ್ಪಣೆಗೊಳ್ಳಲಿದೆ. ಟುಮೊಕ್‌ ಸಂಸ್ಥೆಯ ಸಹಭಾಗಿತ್ವದಲ್ಲಿ ಪರಿಚಯಿಸುತ್ತಿರುವ ಈ ಪಾಸನ್ನು ಬುಧವಾರ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಿಎಂಟಿಸಿ ಅಧ್ಯಕ್ಷ ಅಧ್ಯಕ್ಷ ನಂದೀಶ್‌ ರೆಡ್ಡಿ ಪ್ರಯಾಣಿಕರಿಗೆ ಅರ್ಪಿಸಲಿದ್ದಾರೆ.

ಈ ಆ್ಯಪ್‌ನಿಂದಾಗಿ(App) ಇನ್ನು ಮುಂದೆ ಪ್ರಯಾಣಿಕರು(Passengers) ಪಾಸು ಪಡೆಯಲು ಟಿಟಿಎಂಸಿ(TTMC) ಅಥವಾ ಬಸ್‌ ನಿಲ್ದಾಣಗಳವರೆಗೆ ಹೋಗಬೇಕಿಲ್ಲ. ಬದಲಾಗಿ, ತಮ್ಮ ಮೊಬೈಲ್‌ನಲ್ಲೇ ಪ್ಲೇ ಸ್ಟೋರ್‌ನಿಂದ ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಅನಂತರ ಆ್ಯಪ್‌ ಮೂಲಕವೇ ಪಾಸ್‌ ಖರೀದಿ ಮಾಡಬಹುದು. ಪ್ರಯಾಣಿಸುವಾಗ ನಿರ್ವಾಹಕರಿಗೆ ಆ್ಯಪ್‌ನಲ್ಲಿನ ಕ್ಯುಆರ್‌ ಕೋಡ್‌(QR Code) ತೋರಿಸಿದರೆ ಸಾಕು, ನಿರ್ವಾಹಕರು ಅದನ್ನು ದೃಢೀಕರಿಸುತ್ತಾರೆ.

ಸಾರಿಗೆ ಸಿಬ್ಬಂದಿ ಸಂಬಳಕ್ಕಾಗಿ ಕಾಯಬಾರದು, ಹೀಗಾಗಿ ಸಂಸ್ಥೆ ಆಸ್ತಿ ಅಡ ತೀರ್ಮಾನ: ಸಚಿವ ಬಿ. ಶ್ರೀರಾಮುಲು!

ಪ್ರಾರಂಭಿಕ ಹಂತದಲ್ಲಿ ಎಲ್ಲ ವೋಲ್ವೋ ಬಸ್‌ಗಳು ಹಾಗೂ ಸುಮಾರು 200 ಸಾಮಾನ್ಯ ಬಸ್‌ಗಳಲ್ಲಿ ಪರಿಚಯಿಸಲು ಉದ್ದೇಶಿಸಿದ್ದು, ಸಾಮಾನ್ಯ ಬಸ್‌ಗಳಲ್ಲಿ ನಿರ್ವಾಹಕರಿಗೇ ಕ್ಯುಆರ್‌ ಕೋಡ್‌ ನೀಡಲಾಗಿರುತ್ತದೆ. ಪಾಸುಗಳನ್ನು ಹೊಂದಿದ ಪ್ರಯಾಣಿಕರು ಸ್ಕ್ಯಾನ್‌ ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವ್ಯವಸ್ಥೆಯಿಂದ ಮುಖ್ಯವಾಗಿ ಪ್ರಯಾಣಿಕರಿಗೆ ಸಾಕಷ್ಟು ಸಮಯ ಉಳಿತಾಯ ಆಗಲಿದೆ. ಪ್ರತಿ ತಿಂಗಳು ಸರದಿಯಲ್ಲಿ ನಿಂತು ಪಾಸು ಪಡೆಯುವ ಗೋಜು ತಪ್ಪಲಿದೆ. ನಗದು ವಹಿವಾಟು ಇರುವುದಿಲ್ಲ. ಬಸ್‌ಗಳಲ್ಲಿ ಚಿಲ್ಲರೆ ಸಮಸ್ಯೆ ಇರುವುದಿಲ್ಲ. ಭವಿಷ್ಯದಲ್ಲಿ ಟಿಕೆಟ್‌ ವಿತರಣಾ ವ್ಯವಸ್ಥೆಗೂ ಇದು ವಿಸ್ತರಣೆಯಾದರೆ, ಆದಾಯ ಸೋರಿಕೆಗೆ ಬ್ರೇಕ್‌ ಬೀಳಲಿದೆ ಎಂದು ಬಿಎಂಟಿಸಿ ಅಧಿಕಾರಿಗಳು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕ್ಯುಆರ್‌ ಕೋಡ್‌ ಆಧಾರಿತ ಪಾಸುಗಳ ವಿತರಣಾ ವ್ಯವಸ್ಥೆಗೆ ಪೂರಕವಾಗಿ ನಿರ್ವಾಹಕರಿಗೆ(Conductor) ಅಪ್‌ಡೇಟೆಡ್‌ ಇಟಿಎಂ (Electric Ticket Vending Machine)ಗಳನ್ನು ನೀಡಲಾಗುತ್ತಿದೆ. ಇದರಲ್ಲಿ ಕ್ಯುಆರ್‌ ಕೋಡ್‌ ಸ್ಕಾ್ಯನಿಂಗ್‌ ವ್ಯವಸ್ಥೆ ಇರಲಿದೆ. ಅದರ ಮೂಲಕವೇ ಪಾಸುಗಳನ್ನು ದೃಢೀಕರಿಸಲಿದ್ದಾರೆ. ಇದಕ್ಕಾಗಿ ಪ್ರಯಾಣಿಕರು ಮಾಡಬೇಕಾದ್ದಿಷ್ಟೇ- ಟುಮೊಕ್‌ ಸಂಸ್ಥೆ ಪರಿಚಯಿಸುವ ಮೊಬೈಲ್‌ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಅದರಲ್ಲಿ ಪಾಸಿನ ಮಾದರಿಯನ್ನು ಆಯ್ಕೆ ಮಾಡಿಕೊಂಡು, ಅದಕ್ಕೆ ತಗಲುವ ಮೊತ್ತವನ್ನು ಆನ್‌ಲೈನ್‌ ಮೂಲಕವೇ ಪಾವತಿಸಬೇಕು. ತಕ್ಷಣವೇ ಕ್ಯುಆರ್‌ ಕೋಡ್‌ ಜನರೇಟ್‌ ಆಗುತ್ತದೆ. ಇದನ್ನು ಪ್ರಯಾಣಿಕರು ವೋಲ್ವೋ ಬಸ್‌ನಲ್ಲಿ ಪ್ರಯಾಣಿಸುವಾಗ ನಿರ್ವಾಹಕರಿಗೆ ತೋರಿಸಿದರೆ, ಇಟಿಎಂ ಮೂಲಕ ಅದನ್ನು ಸ್ಕ್ಯಾನ್‌  ಮಾಡಿ ದೃಢೀಕರಿಸಲಾಗುತ್ತದೆ.

ಎಲೆಕ್ಟ್ರಿಕ್‌ ಬಸ್‌ಗಳ ಗುತ್ತಿಗೆಯಲ್ಲಿ ಅವ್ಯವಹಾರ ನಡೆದಿಲ್ಲ:

ಬೆಂಗಳೂರು ನಗರದಲ್ಲಿ ಸಂಚರಿಸುತ್ತಿರುವ ವಿದ್ಯುತ್‌ ಬಸ್‌ಗಳ ಗುತ್ತಿಗೆಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು(B Sriramulu) ಸ್ಪಷ್ಟಪಡಿಸಿದ್ದರು. 

BMTC: ಬಸ್ ಸ್ಲೋ ಓಡಿಸಿದ್ರೂ ನೋಟಿಸ್, ಸ್ಪೀಡಾಗಿ ಹೋದ್ರೆ ಬ್ರೇಕ್ ಬೀಳಲ್ಲ: ಸಿಬ್ಬಂದಿ ಗೋಳು ಕೇಳೋರಿಲ್ಲ!

ಮಾ.19 ರಂದು ಕಾಂಗ್ರೆಸ್‌(Congress) ಸದಸ್ಯ ಕೆ.ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿದ್ದ ಅವರು, ಗುತ್ತಿಗೆ ಆಧಾರದ ಮೇಲೆ ನಿಯೋಜಿಸಲಾಗಿರುವ ಎಲೆಕ್ಟ್ರಿಕ್‌ ಬಸ್‌ 90 ಕಿ.ಮೀ. ಸಂಚರಿಸುತ್ತಿವೆ. 24 ಬಸ್‌ಗಳು ಸದ್ಯಕ್ಕೆ ಕಾರ್ಯಾಚರಣೆ ನಡೆಸುತ್ತಿವೆ. ಅವುಗಳಲ್ಲಿ ಕೆಲವು 190 ಕಿ.ಮೀ. ವರೆಗೂ ಸಂಚಾರ ಮಾಡುತ್ತಿವೆ. ಪ್ರತಿ ಕಿ.ಮೀ.ಗೆ .51.67 ರಂತೆ ಬಿಎಂಟಿಸಿಯಿಂದ ಪಾವತಿ ಮಾಡಲಾಗುತ್ತಿದೆ, ಎಲೆಕ್ಟ್ರಿಕ್‌ ಬಸ್‌ಗಳಿಂದ ಸದ್ಯಕ್ಕೆ ಲಾಭ-ನಷ್ಟದ ಬಗ್ಗೆ ಲೆಕ್ಕಾಚಾರ ಮಾಡಲು ಸಾಧ್ಯವಿಲ್ಲ ಎಂದಿದ್ದರು. 

ವಿದ್ಯುತ್‌ ಚಾಲಿತ ಬಸ್ಸುಗಳನ್ನು ಖರೀದಿ ಮಾಡಿಲ್ಲ. ಬದಲಾಗಿ ಗುತ್ತಿಗೆ ಆಧಾರದ ಮೇಲೆ 90 ಹವಾನಿಯಂತ್ರಣ ರಹಿತ 9 ಮೀಟರ್‌ ಇರುವ ಎಲೆಕ್ಟ್ರಿಕ್‌ ಬಸ್ಸುಗಳನ್ನು ಕಾರ್ಯಾಚರಣೆ ಮಾಡಲು ಮೆ.ಎನ್‌.ವಿ.ಎನ್‌.ಸಂಸ್ಥೆಗೆ ಒಪ್ಪಿಗೆ ನೀಡಿದ್ದೇವೆ. ಬೆಂಗಳೂರು ಸ್ಮಾರ್ಟ್‌ಸಿಟಿ ವತಿಯಿಂದ ಬಿಎಂಟಿಸಿಗೆ ಒಟ್ಟಾರೆ .50 ಕೋಟಿ ಅನುದಾನವನ್ನು ನೀಡಲಿದ್ದು, ಸದರಿ ಅನುದಾನದಲ್ಲಿ ಪ್ರತಿ ಬಸ್ಸಿಗೆ .45 ಕೋಟಿ ಮೊತ್ತವನ್ನು ಮೆ.ಎನ್‌ಟಿಪಿಸಿ ವಿದ್ಯುತ್‌ ವ್ಯಾಪಾರ ನಿಗಮಕ್ಕೆ ಪಾವತಿಸಲಾಗುವುದು. ಉಳಿದ ಮೊತ್ತವನ್ನು ಬಿಎಂಟಿಸಿ ಸಂಸ್ಥೆಯು ಚಾರ್ಜಿಂಗ್‌ ಘಟಕ ಸ್ಥಾಪನೆಗೆ ಬಳಕೆ ಮಾಡಲಿದೆ ಎಂದು ಹೇಳಿದ್ದರು. 
 

Latest Videos
Follow Us:
Download App:
  • android
  • ios