Asianet Suvarna News Asianet Suvarna News

ಮೆಜೆಸ್ಟಿಕ್‌ ರೈಲು ನಿಲ್ದಾಣದಿಂದ ಬಸ್‌ ಸೇವೆ

ಇಂದಿನಿಂದ ಬೆಂಗಳೂರು ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಬಸ್ ಸೇವೆ ಆರಂಭವಾಗುತ್ತಿದೆ. ಇದರಿಂದ ರೈಲು ಪ್ರಯಾಣಿಕರಿಗೆ ಅನುಕೂಲ ಒದಗಲಿದೆ.

BMTC Bus Service Will Start From Majestic Railway Station
Author
Bengaluru, First Published Dec 16, 2019, 8:22 AM IST

ಬೆಂಗಳೂರು [ಡಿ.16]:  ಬೆಂಗಳೂರು ಮಹಾನಗರ ಸಾರಿಗೆ ನಿಗಮ(ಬಿಎಂಟಿಸಿ) ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ(ಕೆಎಸ್‌ಆರ್‌) ರೈಲು ನಿಲ್ದಾಣದ ಮೂರನೇ ಪ್ರವೇಶ ದ್ವಾರದಿಂದ ನಗರದ ವಿವಿಧ ಭಾಗಗಳಿಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಇಂದಿನಿಂದ ಬಸ್‌ ಸೇವೆ ಆರಂಭಿಸುತ್ತಿದೆ.

ಮೊದಲ ಹಂತದಲ್ಲಿ ರೈಲು ನಿಲ್ದಾಣದಿಂದ ನಗರದ ಕಾಡುಗೋಡಿ, ಹೊಸಕೋಟೆ, ಅತ್ತಿಬೆಲೆ, ಸರ್ಜಾಪುರ, ಯಲಹಂಕ ಹಾಗೂ ನಾಗವಾರಕ್ಕೆ ತಲಾ 9 ಬಸ್‌ಗಳಂತೆ ಒಟ್ಟು 54 ಬಸ್‌ಗಳ ಕಾರ್ಯಾಚರಣೆ ಮಾಡಲಿದೆ. 

ಈ ಬಸ್‌ಗಳು ಬೆಳಗ್ಗೆ 6ರಿಂದ ರಾತ್ರಿ 10.30ರವರೆಗೆ ಕಾರ್ಯಾಚರಿಸಲಿವೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ದಟ್ಟಣೆ ಹಾಗೂ ಅವಶ್ಯಕತೆಗೆ ಅನುಗುಣವಾಗಿ ನಗರದ ವಿವಿಧ ಕಡೆ ಬಸ್‌ ಸೇವೆ ಆರಂಭಿಸುವುದಾಗಿ ಬಿಎಂಟಿಸಿ ತಿಳಿಸಿದೆ.

1 ವರ್ಷದಲ್ಲಿ 70 ಬಾರಿ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದ : ಬಿದ್ದ ದಂಡದ ಮೊತ್ತವೆಷ್ಟು.?...

ಅನೇಕ ದಿನಗಳ ಹಿಂದೆಯೇ ಸರ್ಕಾರವು ಈ ಬಗ್ಗೆ ಯೋಜನೆ ರೂಪಿಸಿದ್ದು, ಇದೀಗ ಕಾರ್ಯರೂಪಕ್ಕೆ ಬರಲು ಸಜ್ಜಾಗಿದೆ. ಇದರಿಂದ ಹಲವು ಪ್ರದೇಶಗಳಿಂದ ಬೆಂಗಳೂರಿಗೆ ಆಗಮಿಸುವ ರೈಲು ಪ್ರಯಾಣಿಕರು ಅನೂಕೂಲ ಪಡೆದುಕೊಳ್ಳಬಹುದಾಗಿದೆ. 

Follow Us:
Download App:
  • android
  • ios