ಬಿಎಂಟಿಸಿ ಬಸ್ ಪಾಸ್ ದರ ಏರಿಕೆ; ಪರಿಷ್ಕೃತ ದರಪಟ್ಟಿ ನಾಳೆಯಿಂದ ಜಾರಿ!
ರಾಜ್ಯ ಸರ್ಕಾರದ ಬಸ್ ದರ ಹೆಚ್ಚಳದ ಬೆನ್ನಲ್ಲೇ, ಬಿಎಂಟಿಸಿ ಬಸ್ ಪಾಸ್ ದರವನ್ನು ಹೆಚ್ಚಿಸಿ, ನಾಳೆಯಿಂದ ಜಾರಿಗೆ ತರುವ ಆದೇಶ ಹೊರಡಿಸಿದೆ. ದೈನಂದಿನ, ಸಾಪ್ತಾಹಿಕ ಮತ್ತು ಮಾಸಿಕ ಪಾಸ್ ದರಗಳು ಏರಿಕೆಯಾಗಿವೆ.
ಬೆಂಗಳೂರು (ಜ.08): ರಾಜ್ಯದಲ್ಲಿ ರಸ್ತೆ ಸಾರಿಗೆ ನಿಗಮದ ಬಿಎಂಟಿಸಿ ಸೇರಿದಂತೆ ನಾಲ್ಕು ವಿಭಾಗಗಳ ಬದ್ ಪ್ರಯಾಣದ ದರವನ್ನು ಶೇ.15ರಷ್ಟು ಹೆಚ್ಚಳ ಮಾಡ ಭಾನುವಾರದಿಂದ ಜಾರಿಗೆ ತರಲಾಗಿದೆ. ಇದರ ಬೆನ್ನಲ್ಲಿಯೇ ಬಿಎಂಟಿಸಿ ಬಸ್ ಪಾಸಿನ ದರವನ್ನು ಹೆಚ್ಚಳ ಮಾಡಿ ನಾಳೆ ಗುರುವಾರದಿಂದ (ಜ.09) ಜಾರಿಗೆ ತರುವುದಾಗಿ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರದಿಂದ ಸಾರಿಗೆ ನಿಗಮದ ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್ ದರಗಳನ್ನು ಪರಿಷ್ಕರಣೆ ಮಾಡಿ ಶೇ.15 ಪರ್ಸೆಂಟ್ ಟಿಕೆಟ್ ದರವನ್ನು ಹೆಚ್ಚಳ ಮಾಡಿತ್ತು. ಕಳೆದ ಮೂರು ದಿನಗಳ ಹಿಂದೆ ಭಾನುವಾರದಿಂದ (ಜ.5ರಿಂದ) ಈ ಹೊಸ ದರವನ್ನು ಜಾರಿಗೆ ತರಲಾಗಿದೆ. ಆದರೆ, ಸರ್ಕಾರ ಟಿಕೆಟ್ ದರ ಪರಿಷ್ಕರಣೆ ಮಾಡಿ, ಬಸ್ ಪಾಸ್ ದರ ಪರಿಷ್ಕರಣೆ ಮಾಡುವುದನ್ನು ಮರೆತಿತ್ತು. ಹೀಗಾಗಿ, ಪ್ರಯಾಣಿಕರು ದೈನಂದಿನ ಬಸ್ ಪಾಸ್ ದರಗಳನ್ನು ತೆಗೆದುಕೊಂಡು ಓಡಾಡಲು ಮುಂದಾಗಿದ್ದರು. ಇದೀಗ ಬಸ್ ಪಾಸ್ ದರಗಳನ್ನು ಕೂಡ ಪರಿಷ್ಕರಣೆ ಮಾಡಿ ಬಿಎಂಟಿಸಿ ಆದೇಶ ಹೊರಡಿಸಿದೆ.
ಬಿಎಂಟಿಸಿಯಿಂದ ದೈನಂದಿನ ಪಾಸ್, ಸಾಪ್ತಾಹಿಕ ಮತ್ತು ಮಾಸಿಕ ಪಾಸ್ ದರ ಏರಿಕೆ ಮಾಡಲಾಗಿದ್ದು, ನಾಳೆಯಿಂದಲೇ ಈ ಪರಿಷ್ಕೃತ ದರಗಳು ಅನ್ವಯ ಆಗಲಿವೆ ಎಂದು ಅದೇಶದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Bengaluru: ಪರಿಷ್ಕೃತ ದರ ಪಟ್ಟಿ ಬಿಡುಗಡೆ ಮಾಡಿದ ಬಿಎಂಟಿಸಿ, ಬಸ್ ಹತ್ತೋ ಮುನ್ನ ಚಿಲ್ಲರೆ ಕೈಯಲ್ಲಿರಲಿ!
ಸಾಮಾನ್ಯ ಬಸ್‌ಗಳ ಪಾಸ್ ದರ ಪರಿಷ್ಕರಣೆ ಪಟ್ಟಿ
ಪಾಸುಗಳ ವಿಧ | ಹಳೆಯ ದರ | ಹೊಸ ದರಗಳು |
ದಿನದ ಪಾಸು | 70 ರೂ. | 80 ರೂ. |
ವಾರದ ಪಾಸು | 300 ರೂ. | 350 ರೂ. |
ಮಾಸಿಕ ಪಾಸು | 1,050 ರೂ. | 1,200 ರೂ. |
ನೈಸ್ ರಸ್ತೆಯ ಮಾಸಿಕ ಪಾಸು (ಟೋಲ್ ಶುಲ್ಕ ಸೇರಿ) |
2,200 ರೂ. | 2,350 ರೂ. |
ವಜ್ರ ಮತ್ತು ವಾಯು ವಜ್ರ ಬಸ್ ಪಾಸ್ ಪರಿಷ್ಕರಣೆ ವಿವರ
ಪಾಸುಗಳ ವಿಧ | ಹಳೆಯ ದರ | ಹೊಸ ದರಗಳು |
ವಜ್ರ ಬಸ್ ದಿನದ ಪಾಸು | 120 ರೂ. | 140 ರೂ. |
ವಜ್ರ ಬಸ್ ಮಾಸಿಕ ಪಾಸು | 1,800 ರೂ. | 2,000 ರೂ. |
ವಾಯುವಜ್ರ ಬಸ್ ಮಾಸಿಕ ಪಾಸು | 3,755 ರೂ. | 4,000 ರೂ. |
ವಿದ್ಯಾರ್ಥಿ ವಜ್ರ ಬಸ್ ಮಾಸಿಕ ಪಾಸು | 1,200 ರೂ. | 1,400 ರೂ. |
ಇದನ್ನೂ ಓದಿ: ಬೆಂಗಳೂರು ನಮ್ಮ ಮೆಟ್ರೋ ದರ ಶೇ.20ರಷ್ಟು ಏರಿಕೆ; ಸರ್ಕಾರದಿಂದ ಶೀಘ್ರವೇ ಆದೇಶ!