ಇತ್ತೀಚೆಗೆ ಬಿಎಂಟಿಸಿ ಬಸ್‌ನಲ್ಲಿ ಸಂಚರಿಸುವವರು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಮತ್ತೆ ಮತ್ತೆ ಬಿಎಂಟಿಸಿ ಬಸ್‌ಗಳು ಇದ್ದಕ್ಕಿದ್ದಂತೆ ಹೊತ್ತಿ ಉರಿಯುತ್ತಿರುವುದು. 

ವರದಿ: ಮಾರುತೇಶ್ ಹುಣಸನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಬೆಂಗಳೂರು (ಏ.10): ಇತ್ತೀಚೆಗೆ ಬಿಎಂಟಿಸಿ ಬಸ್‌ನಲ್ಲಿ (BMTC Bus) ಸಂಚರಿಸುವವರು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಮತ್ತೆ ಮತ್ತೆ ಬಿಎಂಟಿಸಿ ಬಸ್‌ಗಳು ಇದ್ದಕ್ಕಿದ್ದಂತೆ ಹೊತ್ತಿ ಉರಿಯುತ್ತಿರುವುದು. ದಿನನಿತ್ಯ ಲಕ್ಷಾಂತರ ಪ್ರಯಾಣಿಕರು ಬಿಎಂಟಿಸಿ ಬಸ್‌ಗಳು ಸೇಫ್ ಇಲ್ಲವಾ ಎಂಬ ಅನುಮಾನ ಮೂಡುತ್ತಿದೆ. ಯಾಕಂದರೆ ಚಲಿಸುತ್ತಿದ್ದ ಬಿಎಂಟಿಸಿ ಬಸ್‌ನಲ್ಲಿ ಮತ್ತೆ ಆಕಸ್ಮಿಕ ಬೆಂಕಿ (Fire) ಕಾಣಿಸಿಕೊಂಡಿದೆ. ಬೆಂಗಳೂರಿನ ಶೇಷಾದ್ರಿ ಅಯ್ಯರ್ ರಸ್ತೆಯ SJP ಕಾಲೇಜಿನ ಮುಂದೆ ಈ ಘಟನೆ ನಡೆದಿದ್ದು, ಅದೃಷ್ಟವಶಾತ್​ ಯಾವುದೇ ಪ್ರಾಣಪಾಯವಾಗಿಲ್ಲ. ಶಾರ್ಟ್​ ಸರ್ಕ್ಯೂಟ್​​ನಿಂದಾಗಿ ಬಸ್​ನಲ್ಲಿ ಈ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. 

ಘಟನೆಯಲ್ಲಿ ಬಸ್​ ಮುಂಭಾಗ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದರು. ಬೆಂಕಿಗೆ ಆಹುತಿಯಾದ ಬಸ್​ ಬನಶಂಕರಿ ಡಿಪೋಗೆ ಸೇರಿದೆ. KA 57F‌ 1447 ನಂಬರಿನ ಬಿಎಂಟಿಸಿ ಬಸ್​​​​ ಮೆಜೆಸ್ಟಿಕ್​ನಿಂದ ಹೊಸಕೆರೆ ಹಳ್ಳಿ ವಿದ್ಯಾನಗರದ ಕಡೆ ಹೋಗುತ್ತಿತ್ತು. ಈ ವೇಳೆ ಬಸ್​ನ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಡೋರ್ ಗಳು ಕ್ಲೋಸ್ ಆಗಿದೆ ತಕ್ಷಣಕ್ಕೆ ಚಾಲಕ, ನಿರ್ವಾಹಕ ಡೋರ್ ಅನ್ನು ಒಡೆದು ಪ್ರಯಾಣಿಕರನ್ನು ಬಸ್​ನಿಂದ ಕೆಳಗೆ ಇಳಿಸಿದ್ದಾರೆ. ನಂತರ ಸ್ಥಳದಲ್ಲೇ ಇದ್ದ ಪ್ರಯಾಣಿಕರು SJP ಕಾಲೇಜು ಕ್ಯಾಂಟೀನ್ ನಿಂದ ನೀರು ತಂದು ಬೆಂಕಿ ನಂದಿಸಲು ಮುಂದಾಗಿದ್ದಾರೆ ಆದರೆ ಸಾಧ್ಯವಾಗಿಲ್ಲ. 

ಬಿಎಂಟಿಸಿ ‘ಡಿಜಿಟಲ್‌ ಪಾಸ್‌’ ಲೋಕಾರ್ಪಣೆ: ಕ್ಯುಆರ್‌ ಕೋಡ್‌ ತೋರಿಸಿ ಪ್ರಯಾಣ

ನಂತರ ಡ್ರೈವರ್ ಬಸ್‌ನಲ್ಲಿದ್ದ Fire Extinguisher ನಿಂದ ಬೆಂಕಿ ನಂದಿಸಲು ಮಂದಾದ್ರು ಆಗಿಲ್ಲ. ಸ್ಥಳೀಯರು ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ವಿಷ್ಯ ತಿಳಿಸಿದ್ರು ನಂತರ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದ್ರು. ಬಿಎಂಟಿಸಿ 2016 ರಲ್ಲಿ ಅಶೋಕ್ ಲೇಲ್ಯಾಂಡ್ ಕಂಪನಿ ಯಿಂದ 186, ಮಿಡಿ 9 ಮೀಟರ್ ನ ಬಸ್ ಗಳನ್ನು ಖರೀದಿ ಮಾಡಿತ್ತು. ಈ ಹಿಂದೆ ಎರಡು ಮಿಡಿ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈಗ ಮತ್ತೊಂದು ಮಿಡಿ ಅಶೋಕ್ ಲೇಲ್ಯಾಂಡ್ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸುದ್ದಿ ತಿಳಿದು ತಕ್ಷಣಕ್ಕೆ ಬಿಎಂಟಿಸಿ ಅಧಿಕಾರಿಗಳು ಆಗಮಿಸಿದ್ದು, ಘಟನೆಗೆ ಕಾರಣ ಏನು ಎಂಬುದರ ಪರಿಶೀಲನೆ ನಡೆಸಿದ್ದಾರೆ. 

ಇನ್ನು ಸಾಲು ಸಾಲು ಬಸ್​ಗಳು ಈ ರೀತಿ ಬೆಂಕಿಗೆ ಆಹುತಿಯಾಗಲು ವಿನ್ಯಾಸ ದೋಷ ಕೂಡ ಕಾರಣವಾಗಿದೆ ಎಂದು ಈ ಹಿಂದೆ ನಡೆದ ಘಟನೆ ತನಿಖೆಯಲ್ಲಿ ತಿಳಿದು ಬಂದಿತ್ತು. ಆಗ ಅಶೋಕ್ ಲೇಲ್ಯಾಂಡ್‌ನ ಇಂಜಿನಿಯರ್ ಗಳು ಎಲ್ಲಾ ಬಸ್ ಗಳಲ್ಲಿದ್ದ ತಾಂತ್ರಿಕ ದೋಷವನ್ನು ಪರಿಹರಿಸಿದ್ರು ನಂತರವೇ ನಾವು ಬಸ್ ಗಳನ್ನು ರೋಡಿಗಿಳಿಸಿದ್ವಿ ಈಗಾಗಲೇ ನಾನು ನಮ್ಮ ಅಧಿಕಾರಿಗಳ ಜೊತೆಗೆ ಮಾತಾಡ್ತಿನಿ ಮತ್ತೆ ಅಶೋಕ್ ಲೇಲ್ಯಾಂಡ್ ನ ಇಂಜಿನಿಯರ್ ಗಳು ಬಂದು ಮತ್ತೊಮ್ಮೆ ಚೆಕ್ ಮಾಡುವವರೆಗೂ ಬಸ್‌ಗಳನ್ನು ರೋಡಿಗಳಿಸದಿರಲು ಸೂಚನೆ ನೀಡಿದ್ದಿನಿ ಎಂದು ಬಿಎಂಟಿಸಿ ಉಪಾಧ್ಯಕ್ಷ ಎಂಆರ್ ವೆಂಕಟೇಶ್ ಮಾಹಿತಿ ನೀಡಿದ್ದಾರೆ.

Bengaluru: ಬಿಎಂಟಿಸಿಗೂ ಬಂತು ‘ಸ್ಮಾರ್ಟ್‌ ಆ್ಯಪ್‌’ ಪಾಸ್‌..!

ಮೂರು ತಿಂಗಳಲ್ಲಿ ಮೂರು ಬಸ್ ಬೆಂಕಿಗಾಹುತಿ..!: ಜನವರಿ 21ರಂದು ಚಾಮರಾಜಪೇಟೆಯ ಮಕ್ಕಳ ಕೂಟದ ಬಳಿ, ಫೆಬ್ರವರಿ 1ರಂದು ಜಯನಗರ ಸೌತ್ ಎಂಡ್ ಸರ್ಕಲ್ ಮೆಟ್ರೋ ಸ್ಟೇಷನ್ ರಸ್ತೆಯಲ್ಲಿ ಎರಡು ಬಿಎಂಟಿಸಿ ಬಸ್​​ ಗಳು ಪ್ರಯಾಣಿಕರನ್ನ ಹೊತ್ತು ಸಾಗುತ್ತಿರುವಾಗಲೇ ಧಗಧಗ ಹೊತ್ತಿ ಉರಿದಿದ್ದವು. ಈಗ ಮತ್ತೊಂದು ಬಸ್ ಹೊತ್ತು ಉರಿದು ಬಿಎಂಟಿಸಿ ಇಲಾಖೆಯನ್ನು ಪದೇ ಪದೇ ಎಚ್ಚರಿಸುತ್ತಿದೆ. ಆದರೆ ಅಧಿಕಾರಿಗಳು ಮಾತ್ರ ಶಾಶ್ವತ ಪರಿಹಾರ ಕಂಡುಕೊಳ್ಳುವುದರಲ್ಲಿ ವಿಫಲರಾಗಿದ್ದಾರೆ.