ಮೃತ ಕೋವಿಡ್ ವ್ಯಕ್ತಿಯ ತಲೆಯಲ್ಲಿ ರಕ್ತ ಸೋರಿಕೆ: ವಿಡಿಯೋ ವೈರಲ್
ಕೊರೋನಾ ಇದ್ದರೆ ತಲೆಯಿಂದ ಹೇಗೆ ರಕ್ತ ಬರ್ತಿದೆ?| ವಿಡಿಯೋದಲ್ಲಿ ಇರುವವರು ಮಾತನಾಡುವ 3 ನಿಮಿಷ 29 ಸೆಕೆಂಡ್‌ಗಳ ವಿಡಿಯೋ ವೈರಲ್| ವೈದ್ಯರ ಬಗ್ಗೆ ಸಂಶಯ ವ್ಯಕ್ತಪಡಿಸಿತ್ತಿರುವ ಸಾರ್ವಜನಿಕರು| ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದಲ್ಲಿ ನಡೆದ ಘಟನೆ|
ಶಿರಸಿ(ಏ.29): ಕೋವಿಡ್‌ನಿಂದಾಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ವ್ಯಕ್ತಿಯ ತಲೆಯಿಂದ ರಕ್ತ ಸೋರಿ, ಮೃತನ ಸಂಬಂಧಿಕರು ಆಸ್ಪತ್ರೆಯ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ವಿಡಿಯೋ ಈಗ ವೈರಲ್ ಆಗಿದೆ.
ಪಿಪಿಇ ಕಿಟ್‌ನಲ್ಲಿ ಇಡಲಾದ ಮೃತ ವ್ಯಕ್ತಿಗೆ ಕೋವಿಡ್ ಸೋಂಕಿದೆ, ತಕ್ಷಣವೇ ಅಂತ್ಯಕ್ರಿಯೆ ನಡೆಸಿ ಎಂದು ವೈದ್ಯರು ಹೇಳಿದ್ದಾರೆ. ಆದರೆ, ರಕ್ತ ಹೇಗೆ ಸೋರುತ್ತಿದೆ ಎಂದು ವಿಡಿಯೋದಲ್ಲಿ ಇರುವವರು ಮಾತನಾಡಿಕೊಳ್ಳುತ್ತಿದ್ದಾರೆ. ಮೃತ ವ್ಯಕ್ತಿಯ ಪಿಪಿಇ ಕಿಟ್ ಸಹ ತೆರೆದು ಮೃತ ವ್ಯಕ್ತಿಯ ತಲೆಯಿಂದ ರಕ್ತ ಸೋರುತ್ತಿರುವುದನ್ನು ವೀಕ್ಷಿಸುತ್ತಿದ್ದಾರೆ. ಸ್ಥಳೀಯ ಆಸ್ಪತ್ರೆಯಿಂದ ಕರೆ ತಂದಿದ್ದೇವೆ. ಕೊರೋನಾ ಇದ್ದರೆ ತಲೆಯಿಂದ ಹೇಗೆ ರಕ್ತ ಬರ್ತಿದೆ? ಎಂದು ವಿಡಿಯೋದಲ್ಲಿ ಇರುವವರು ಮಾತನಾಡುವ 3 ನಿಮಿಷ 29 ಸೆಕೆಂಡ್‌ಗಳ ಈ ಎಲ್ಲಡೆ ವೈರಲ್ ಆಗಿದ್ದು, ಈಗ ಸಾರ್ವಜನಿಕರು ವೈದ್ಯರ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.
ಬೆಡ್ ಸಿಗದೆ ಆ್ಯಂಬುಲೆನ್ಸ್‌ನಲ್ಲಿ ನರಳಾಡಿ ಜೀವ ಬಿಟ್ಟ ವೃದ್ಧೆ
ಶಿರಸಿಯ ಆಸ್ಪತ್ರೆಯೊಂದರಲ್ಲಿ ತಾಲೂಕಿನ ಅಮ್ಮಿನಳ್ಳಿ ಬಳಿಯ ಬೆಳೆನಳ್ಳಿಯ ವೃದ್ಧರೊಬ್ಬರು ಸಾವಿಗೀಡಾಗಿದ್ದರು. ಅವರೇ ಇವರಾಗಿರಬಹುದೇ ಎಂಬ ಬಗ್ಗೆ ಸಹ ವಾಟ್ಸ್‌ಆ್ಯಪ್ ಗ್ರೂಪ್ ಗಳಲ್ಲಿ ಚರ್ಚೆ ನಡೆಯುತ್ತಿದೆ. ಈ ಕುರಿತು ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಅವರನ್ನು ಪ್ರಶ್ನಿಸಿದಾಗ, ಈ ಕುರಿತು ಹೆಚ್ಚಿನ ಮಾಹಿತಿ ಪಡೆದು ಪರಿಶೀಲಿಸುವುದಾಗಿ ತಿಳಿಸಿದ್ದಾರೆ.
ಕೋವಿಡ್ ವಾರ್ಡ್‌ನಲ್ಲಿ ರೋಗಿ ಒಬ್ಬರೇ ಇರಬೇಕಾಗುತ್ತದೆ. ಅವರು ಶೌಚಕ್ಕೆ ತೆರಳಿದ ವೇಳೆ ಬಿದ್ದಿದ್ದರು. ಆದರೆ, ಕೋವಿಡ್ ರೋಗಿಗಳಿಗೆ ರಕ್ತ ಹೆಪ್ಪುಗಟ್ಟದಂತೆ ಔಷಧ ನೀಡಿರುತ್ತಾರೆ. ಹೀಗಾಗಿ, ಅವರು ನಿಧನರಾದ ಬಳಿಕ ಅಂಬುಲಸ್ಸ್‌ನಲ್ಲಿ ಸಾಗಿಸುವ ವೇಳೆ ರಕ್ತ ಬಂದಿರುವ ಸಾಧ್ಯತೆ ಇದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದು ಶಿರಸಿ ತಾಲೂಕು ವೈದ್ಯಾಧಿಕಾರಿ ಡಾ. ವಿನಾಯಕ ಭಟ್ ತಿಳಿಸಿದ್ದಾರೆ.