ಆಕ್ಸಿಸ್‌ ಆಸ್ಪತ್ರೆಯಲ್ಲಿ ಬೆಡ್‌ ಅಲಾಟ್‌ ಮಾಡಿದ ಬಿಬಿಎಂಪಿ| ಕುಟುಂಬದವರು ಸೋಂಕಿತೆಯನ್ನು ಆಕ್ಸಿಸ್‌ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಬೆಡ್‌ ಇಲ್ಲ ಎಂದು ಹೇಳಿದ ಆಸ್ಪತ್ರೆ| ಎಷ್ಟೇ ಅಂಗಲಾಚಿದರೂ ದೊರೆಯದ ಬೆಡ್‌| ಸಕಾಲಕ್ಕೆ ಐಸಿಯು ಬೆಡ್‌ ಹಾಗೂ ಚಿಕಿತ್ಸೆ ಸಿಗದೇ ಮೃತಪಟ್ಟ ವೃದ್ಧೆ| 

ಬೆಂಗಳೂರು(ಏ.29): ಸಕಾಲಕ್ಕೆ ಆಸ್ಪತೆಯಲ್ಲಿ ಐಸಿಯು ಬೆಡ್‌ ಸಿಗದೇ 82 ವರ್ಷದ ವೃದ್ಧೆಯೊಬ್ಬರು ಮೃತಪಟ್ಟಿರುವ ಮನಕಲಕುವ ಘಟನೆ ನಗರದಲ್ಲಿ ಜರುಗಿದೆ.

ಕೆ.ಪಿ.ಅಗ್ರಹಾರದ ಟೆಲಿಕಾಂ ಲೇಔಟ್‌ನ ನಿವಾಸಿಯಾದ ವೃದ್ಧೆಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಪಾಲಿಕೆ ಆಕ್ಸಿಸ್‌ ಆಸ್ಪತ್ರೆಯಲ್ಲಿ ಬೆಡ್‌ ಅಲಾಟ್‌ ಮಾಡಿದೆ. ಹೀಗಾಗಿ ಕುಟುಂಬದವರು ಸೋಂಕಿತೆಯನ್ನು ಆಕ್ಸಿಸ್‌ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಆಸ್ಪತ್ರೆಯವರು ಬೆಡ್‌ಇಲ್ಲ ಎಂದು ಹೇಳಿದ್ದಾರೆ. ಬಿಬಿಎಂಪಿಯೇ ಬೆಡ್‌ ಅಲಾಟ್‌ ಮಾಡಿದೆ ಎಂದು ಹೇಳಿದರೂ ಬೆಡ್‌ಖಾಲಿ ಇಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ಎಷ್ಟೇ ಅಂಗಲಾಚಿದರೂ ಬೆಡ್‌ದೊರೆತ್ತಿಲ್ಲ.

ಡೆಡ್ಲಿ ಸೋಂಕಿಗೆ ತಾಯಿ ಬಲಿ, ಪ್ರಜ್ಞೆ ತಪ್ಪಿದ್ದ ತಂದೆ, ಮಕ್ಕಳ ಗೋಳು

ಇಡೀ ರಾತ್ರಿ ಆಸ್ಪತ್ರೆಯ ಎದುರು ಆ್ಯಂಬುಲೆನ್ಸ್‌ನಲ್ಲಿ ಸೋಂಕಿತೆ ನರಳಾಡಿದ್ದಾರೆ. ಸಮಯ ಕಳೆದಂತೆ ಸೋಂಕಿತೆಯ ಆಕ್ಸಿಜನ್‌ ಸ್ಯಾಚುರೇಶನ್‌ ಪ್ರಮಾಣ ಕಡಿಮೆಯಾಗಿದೆ. ಕಡೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೆಡ್‌ಸಿಕ್ಕಿದ್ದು, ದಾಖಲಾಗಿದೆ. ಆದರೆ, ಆಕ್ಸಿಜನ್‌ ಸ್ಯಾಚುರೇಶನ್‌ ಪ್ರಮಾಣ ತೀರ ಕಡಿಮೆಯಾಗಿದ್ದು, ಚಿಕಿತ್ಸೆ ಫಲಿಸದೇ ಸೋಂಕಿತೆ ಮೃತಪಟ್ಟಿದ್ದಾರೆ. ಪಾಲಿಕೆ ಬೆಡ್‌ ಅಲಾಟ್‌ ಮಾಡಿದರೂ ಆಕ್ಸಿಸ್‌ ಆಸ್ಪತ್ರೆಯವರು ಬೆಡ್‌ ಇಲ್ಲವೇ ಇಲ್ಲ ಎಂದರು. ತಾಯಿಗೆ ಸಕಾಲಕ್ಕೆ ಐಸಿಯು ಬೆಡ್‌ ಹಾಗೂ ಚಿಕಿತ್ಸೆ ಸಿಗದೇ ಮೃತಪಟ್ಟಿದ್ದಾರೆ ಎಂದು ಸೋಂಕಿತೆಯ ಪುತ್ರ ಕಣ್ಣೀರಿಟ್ಟರು.