ಬ್ಯಾಡಗಿ ಅಪಘಾತ: ಅಂಧರ ಪುಟ್ಬಾಲ್ ಟೀಂ ನಾಯಕಿ ಬಲಿ..!
ಮಾನಸ ಹುಟ್ಟಿನಿಂದ ಅಂಧತ್ವ ಹೊಂದಿದ್ದ ಯುವತಿ. ಆದರೆ ತನ್ನ ನ್ಯೂನತೆಯನ್ನು ಮೆಟ್ಟಿನಿಂತು ಫುಟ್ಬಾಲ್ ಕ್ರೀಡೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದಾಕೆ. ರಾಜ್ಯ, ರಾಷ್ಟ್ರ ಮಟ್ಟದ ಅಂಧರ ಫುಟ್ಬಾಲ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾಳೆ. ಜತೆಗೆ ಭಾರತದ ಅಂಧರ ಫುಟ್ಬಾಲ್ ತಂಡದ ನಾಯಕಿಯೂ ಆಗಿದ್ದಾಕೆ.
ಶಿವಮೊಗ್ಗ(ಜೂ.29): ಅಂಧೆಯಾಗಿದ್ದರೂ ಫುಟ್ಬಾಲ್ ಕ್ರೀಡೆಯಲ್ಲಿ ಸಾಧನೆ ಮಾಡಿದ್ದ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿಯ ಗ್ರಾಮದ ಮಾನಸ ಕೂಡ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟವರಲ್ಲಿ ಒಬ್ಬರು.
ಮಾನಸ ಹುಟ್ಟಿನಿಂದ ಅಂಧತ್ವ ಹೊಂದಿದ್ದ ಯುವತಿ. ಆದರೆ ತನ್ನ ನ್ಯೂನತೆಯನ್ನು ಮೆಟ್ಟಿನಿಂತು ಫುಟ್ಬಾಲ್ ಕ್ರೀಡೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದಾಕೆ. ರಾಜ್ಯ, ರಾಷ್ಟ್ರ ಮಟ್ಟದ ಅಂಧರ ಫುಟ್ಬಾಲ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾಳೆ. ಜತೆಗೆ ಭಾರತದ ಅಂಧರ ಫುಟ್ಬಾಲ್ ತಂಡದ ನಾಯಕಿಯೂ ಆಗಿದ್ದಾಕೆ.
ಹಾವೇರಿ: ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸ, ದೇವರ ದರ್ಶನ ಪಡೆದು ಬಂದು ಮಸಣ ಸೇರಿದ 13 ಮಂದಿ..!
ಐಎಎಸ್ ತರಬೇತಿ:
ಕಲಿಕೆಯಲ್ಲೂ ಪ್ರತಿಭಾ ವಂತೆಯಾಗಿದ್ದ ಮಾನಸ ಬ್ರೇಲ್ ಲಿಪಿಯಲ್ಲಿ ಎಂಎಸ್ಸಿ ಮುಗಿಸಿದ ಬಳಿಕ ಐಎಎಸ್ ಪರೀಕ್ಷೆಗೆ ಬೆಂಗಳೂರಿನಲ್ಲಿ ತರಬೇತಿಯನ್ನೂ ಪಡೆಯು ತ್ತಿದ್ದಳು. ಈ ಮಧ್ಯೆ ಮಾವನ ಮಗನ ಹೊಸ ಟಿಟಿ ವಾಹನದ ಪೂಜೆಗೆಂದು ಬೆಂಗಳೂರಿ ನಿಂದ ಗ್ರಾಮಕ್ಕೆ ಬಂದಿದ್ದಳು. ಸಂಬಂಧಿಕರ ಜತೆಗೆ ಟಿಟಿಯಲ್ಲಿ ಮಾನಸ ಕೂಡ ದೇವರ ದರ್ಶನಕ್ಕೆ ತೆರಳಿದ್ದಳು. ಆದರೆ ವಿಧಿಯಾಟಕ್ಕೆ ಈ ಪ್ರತಿಭಾವಂತೆ ಬಲಿಯಾಗಿದ್ದಾಳೆ.