30 ವರ್ಷಗಳಿಂದ ಅಲೆಯುತ್ತಿದ್ದ ಅಂಧ ದಂಪತಿಗೆ ಕೊನೆಗೂ ಸಿಕ್ತು ಸೂರು!

ಪಾವಗಡ ಪಟ್ಟಣದ 8ನೇ ವಾರ್ಡ್‌ ಕೋಟೆಗೆ ಅಂಟಿಕೊಂಡ ಪುರಸಭೆಯ ಶಿಥಿಲಗೊಂಡಿದ್ದ ಹಳೇ ಕಟ್ಟಡವೊಂದರಲ್ಲಿ ಸುರೇಶ್‌ ಹಾಗೂ ಇವರ ಪತ್ನಿ ಗಿರಿಜಮ್ಮ ಹಲವಾರು ವರ್ಷಗಳಿಂದ ವಿಷಪೂರಿತ ಜುಂತುಗಳ ಒಡಾಟದ ಮಧ್ಯೆ ವಾಸವಾಗಿದ್ದರು. ಇದೀಗ ಕೊನೆಗೂ ಅವರಿಗೆ ಸೂರು ಸಿಕ್ಕಿದೆ.

Blind couple got own house after 30 years in tumakur

ತುಮಕೂರು(ಜ.31): ವಸತಿಗಾಗಿ 30 ವರ್ಷಗಳಿಂದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಅಂಗಲಾಚಿ ಬೇಡುತ್ತಿದ್ದರೂ ಯಾವುದೇ ಸೌಲಭ್ಯ ನೀಡದೇ ಬೇಜವಾಬ್ದಾರಿ ತೋರಿದ್ದ ತಾಲೂಕು ಆಡಳಿತ ಹಾಗೂ ಪುರಸಭೆ ಅಧಿಕಾರಿಗಳು ‘ಕನ್ನಡಪ್ರಭ' ವರದಿಗೆ ಎಚ್ಚೆತ್ತು ಕೊನೆಗೂ ಅತಂತ್ರ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದ ಅಂಧ ವೃದ್ಧ ದಂಪತಿಗೆ ಸೂರು ಕಲ್ಪಿಸಲು ಮುಂದಾಗಿದ್ದಾರೆ.

ಪಾವಗಡ ಪಟ್ಟಣದ 8ನೇ ವಾರ್ಡ್‌ ಕೋಟೆಗೆ ಅಂಟಿಕೊಂಡ ಪುರಸಭೆಯ ಶಿಥಿಲಗೊಂಡಿದ್ದ ಹಳೇ ಕಟ್ಟಡವೊಂದರಲ್ಲಿ ಸುರೇಶ್‌ ಹಾಗೂ ಇವರ ಪತ್ನಿ ಗಿರಿಜಮ್ಮ ಹಲವಾರು ವರ್ಷಗಳಿಂದ ವಿಷಪೂರಿತ ಜುಂತುಗಳ ಒಡಾಟದ ಮಧ್ಯೆ ವಾಸವಾಗಿದ್ದರು.

ಅಧಿಕಾರ ಸಿಕ್ಕಿತೆಂದು ದರ್ಬಾರ್‌ ಮಾಡ್ಬೇಡಿ: ಮಹಿಳಾ ಮೇಯರ್‌ಗೆ ಸಂಸದ ಕಿವಿಮಾತು

ವಿದ್ಯುತ್‌ ಬೆಳಕಿಲ್ಲದೇ ಕತ್ತಲೆ ಮನೆಯಲ್ಲಿ ವಾಸವಿದ್ದ ಈ ದಂಪತಿ ಸ್ವಂತ ಸೂರಿಗಾಗಿ 30 ವರ್ಷಗಳಿಂದ ಅಲೆದಾಟ ನಡೆಸುತ್ತಿದ್ದರೂ ಇವರ ಬಗ್ಗೆ ಸಹನೂಭೂತಿ ಬಿಟ್ಟರೆ ಸ್ವಂತ ಸೂರು ಕಲ್ಪಿಸುವ ಇಚ್ಛೆ ಯಾರು ಹೊಂದಿರಲಿಲ್ಲ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಬಗ್ಗೆ ನಿರಾಸಕ್ತಿ ಹೊಂದಿದ್ದ ಈ ದಂಪತಿ ಸ್ವಂತ ಮನೆ ಆಸೆ ಬಿಟ್ಟು ಇದ್ದ ಹಳೇ ಕಾಲದ ಶಿಥಿಲ ಮನೆಯಲ್ಲಿಯೇ ವಾಸವಾಗಿ ಜೀವನ ಸಾಗಿಸುತ್ತಿದ್ದರು.

ಪಾಳು ಬಿದ್ದ ಕಟ್ಟಡದಲ್ಲಿ ವೃದ್ಧ ಅಂಧ ದಂಪತಿಯ ಜೀವನ

ಸ್ಥಳಕ್ಕೆ ತಹಸೀಲ್ದಾರ್‌, ಪುರಸಭೆ ಅಧಿಕಾರಿ ದೌಡು:

ಈ ಕುರಿತು ಜ.25ರಂದು ‘ಅತಂತ್ರ ಸ್ಥಿತಿಯಲ್ಲಿ ಆಂಧ ವೃದ್ಧ ದಂಪತಿ ವಾಸ’ ಎಂಬ ಶಿರ್ಷಿಕೆಯಡಿ ಕನ್ನಡಪ್ರಭ ಪತ್ರಿಕೆ ವಿಸ್ತೃತವಾಗಿ ವರದಿ ಪ್ರಕಟ ಮಾಡಿತ್ತು. ಈ ವರದಿಯಿಂದ ಎಚ್ಚೆತ್ತು ಕಾರ್ಯಪ್ರವೃತ್ತರಾದ ತಹಸೀಲ್ದಾರ್‌ ವರದರಾಜು ಹಾಗೂ ಪುರಸಭೆ ಮುಖ್ಯಾಧಿಕಾರಿ ನವೀನ್‌ ಚಂದ್ರ ವೃದ್ಧ ದಂಪತಿಯ ವಾಸಸ್ಥಳಕ್ಕೆ ತೆರಳಿ ಅವರ ಸ್ಥಿತಿಗತಿ ಅವಲೋಕಿಸಿ ವರದಿ ಪಡದ ನಂತರ ಕೂಡಲೇ ಸ್ಥಳ ನಿಗದಿಪಡಿಸಿ ಪಟ್ಟಣದ ಬ್ರಾಹ್ಮಣರ ಬೀದಿ ನಾಗರಕಟ್ಟೆಬಳಿ ಪುರಸಭೆ ವ್ಯಾಪ್ತಿಗೆ ಸೇರಿದ್ದ ಹಳೇ ಕಟ್ಟಡ ನವೀಕರಣಗೊಳಿಸುವ ಮೂಲಕ ಸ್ವಂತ ಸೂರು ಕಲ್ಪಿಸಲು ಮುಂದಾಗಿದ್ದಾರೆ.

EMI ಸಾಲ ವಸೂಲಿ ಗಲಾಟೆ ವೇಳೆ ಬಿತ್ತು ಗುಂಡೇಟು!

ಈಗಾಗಲೇ ಮನೆ ದುರಸ್ತಿ, ಶೌಚಾಲಯ ಮತ್ತು ಕಾಂಪೌಂಡು ಮತ್ತು ಕುಡಿವ ನೀರು ಕೂಳಾಯಿ ಕಾಮಗಾರಿ ಭರದಿಂದ ಸಾಗುತ್ತಿದ್ದು, ಆಂಧ ವೃದ್ಧರಿಗೆ ವಾಸಕ್ಕೆ ಅಶ್ರಯ ಕಲ್ಪಿಸಲು ತ್ವರಿತ ಕಾರ್ಯಕ್ಕೆ ಮುಂದಾದ ಅಧಿಕಾರಿಗಳ ಬಗ್ಗೆ ಸಾರ್ವಜನಿಕ ವಲಯಗಳಲ್ಲಿ ಅಪಾರ ಮೆಚ್ಚಿಗೆ ವ್ಯಕ್ತವಾಗಿದೆ.

ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರಕ್ಕೆ ವ್ಯವಸ್ಥೆ ಮಾಡಿ:

ಇತ್ತೀಚೆಗೆ ರೈಲ್ವೆ ಅಪಘಾತದಲ್ಲಿ ಇದ್ದ ಒಬ್ಬ ಪುತ್ರನನ್ನು ಕಳೆದುಕೊಂಡಿದ್ದ ಈ ವೃದ್ಧ ದಂಪತಿ ಜೀವನ ಸಂಕಷ್ಟಕ್ಕೀಡಾಗಿದ್ದು, ಅಡುಗೆ ಮಾಡಿಕೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪುರಸಭೆಯ ಇಂದಿರಾ ಕ್ಯಾಂಟೀನ್‌ನಿಂದ ನಿತ್ಯ ಉಚಿತ ತಿಂಡಿ, ಊಟ ನೀಡಿ ಸಹಕರಿಸುವುದು ಉತ್ತಮವೆಂದು ಇಲ್ಲಿನ ಹಲವಾರು ಮಂದಿ ನಾಗರಿಕರು ಪುರಸಭೆ ಮುಖ್ಯಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

Latest Videos
Follow Us:
Download App:
  • android
  • ios