Asianet Suvarna News Asianet Suvarna News

ಲಾಕ್‌ಡೌನ್‌ ಎಫೆಕ್ಟ್‌: ಸರಳ ವಿವಾಹಕ್ಕೆ ಆನ್‌ಲೈನ್‌ನಲ್ಲೇ ಸ್ವಾಮೀಜಿಯ ಆಶೀರ್ವಾದ..!

ಲಾಕ್‍ಡೌನ್ ಇರುವ ಪರಿಣಾಮ ಸರಳವಾಗಿ ನಡೆದ ಮದುವೆ| ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ನಡೆದ ವಿವಾಹ| ನವದಂಪತಿಗೆ ಆನ್‌ಲೈನ್‌ನಲ್ಲೇ ಆಶೀರ್ವದಿಸಿದ ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಸಮಾಜದ ಪೀಠಾಧ್ಯಕ್ಷ ಜಗದ್ಗುರು ಬಸವ ಮೃತ್ಯುಂಜಯ ಸ್ವಾಮೀಜಿ|

Blessings of Swamiji to Newly Married Couple on Online in Maski in Raichur
Author
Bengaluru, First Published May 25, 2020, 11:17 AM IST
  • Facebook
  • Twitter
  • Whatsapp

ರಾಯಚೂರು(ಮೇ.25): ಕೊರೋನಾ ವೈರಸ್ ಹರಡುವ ಭೀತಿಯಿಂದ ರಾಜ್ಯದಲ್ಲಿ ಲಾಕ್‍ಡೌನ್ ಇರುವ ಪರಿಣಾಮ ದುಂದು ವೆಚ್ಚದ ಮುದುವೆಗಳಿಗೆ ತಿಲಾಂಜಲಿ ಇಟ್ಟಿದೆ, ಅನಗತ್ಯವಾಗಿ ಸಾವಿರಾರು ಜನ ಸೇರುವುದಕ್ಕೆ ಕಡಿವಾಣ ಹಾಕಿ ಗಂಡು ಮತ್ತು ಹೆಣ್ಣಿನ ಕಡೆಯವರು ನಿಗದಿತ ಸಂಖ್ಯೆಕ್ಕಿಂತ ಹೆಚ್ಚು ಜನ ಸೇರದಂತೆ ದಿಗ್ಬಂಧನ ಹಾಕಿರುವದಕ್ಕೆ ಈ ಬಾರಿ ಸರಳ ವಿವಾಹಗಳು ಜರುಗುತ್ತಿವೆ.

ಜಿಲ್ಲೆಯ ಮಸ್ಕಿ ಪಟ್ಟಣದ ಜೆಸ್ಕಾಂ ಇಲಾಖೆಯ ನಿವೃತ್ತ ನೌಕರ ಮಲ್ಲಪ್ಪ ನಾಯಿಕೊಡಿ ಅವರ ಮೊಮ್ಮಗ ಸಂತೋಷ ಅವರ ಮದುವೆ ಭಾನುವಾರ ಲಾಕ್‍ಡೌನ್‍ನಲ್ಲಿ ಅತ್ಯಂತ ಸರಳವಾಗಿ ನಡೆಯಿತು. ಈ ಮದುವೆಯ ವಿಶೇಷತೆ ಎಂದರೆ ಮದುವೆಗೆ ಆಗಮಿಸಬೇಕಾಗಿದ್ದ ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಸಮಾಜದ ಪೀಠಾಧ್ಯಕ್ಷ ಜಗದ್ಗುರು ಬಸವ ಮೃತ್ಯುಂಜಯ ಸ್ವಾಮೀಜಿ ಲಾಕ್‍ಡೌನ್ ಹಿನ್ನಲೆಯಲ್ಲಿ ವಧುವರರನ್ನು ಆನ್ ಲೈನ್ ಮೂಲಕ ವಿಡಿಯೋ ಕಾಲ್ ಮಾಡಿ ಮೊಬೈಲ್‍ನಲ್ಲಿ ಕಾಣುವ ವರ ಸಂತೋಷ ಮತ್ತು ವಧು ಚೈತ್ರಾಳಿಗೆ ಮೊಬೈಲ್‍ನಲ್ಲಿ ಪುಷ್ಪಸೃಷ್ಟಿ ಮಾಡಿ ಆಶೀರ್ವದಿಸಿದ್ದಾರೆ. 

ರಾಯಚೂರು ಬಸ್‌ ನಿಲ್ದಾಣದಲ್ಲಿ ಜನವೋ ಜನ: ಮಕ್ಕಳ ಪ್ರಯಾಣಕ್ಕೆ ಅಧಿಕಾರಿಗಳ ತಡೆ

ಲಾಕ್‍ಡೌನ್ ಮುಗಿದ ಮೇಲೆ ಮನೆಗೆ ಬರುವುದಾಗಿ ಸ್ವಾಮೀಜಿ ತಿಳಿಸಿದರು. ಕುಟುಂಬದ ಯಜಮಾನ ಮಲ್ಲಪ್ಪ ನಾಯಿಕೊಡಿ ಮಾತನಾಡಿ ಮೊಮ್ಮಗನ ಮದುವೆ ಬರುವಂತೆ ಸ್ವಾಮೀಜಿಗಳಿಗೆ ಆಮಂತ್ರಿಸಿದ್ದೇವು. ಅಲ್ಲದೇ ಕೊರೋನಾ ಹಾವಳಿಯ ಹಿನ್ನಲೆಯಲ್ಲಿ ಸರಳ ವಿವಾಹ ಏರ್ಪಡಿಸಿದ್ದೇವು. ಮೊಬೈಲ್‍ನಲ್ಲಿ ಸ್ವಾಮೀಜಿ ಆಶೀರ್ವದಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ಮದುವೆಗೆ ಆಗಮಿಸಿದವರೆಲ್ಲ ಮಾಸ್ಕ್ ಧರಿಸಿದ್ದರು. ಮತ್ತು ಅಂತರ ಕಾಯ್ದುಕೊಂಡಿದ್ದು ವಿಶೇಷವಾಗಿತ್ತು.
 

Follow Us:
Download App:
  • android
  • ios