ಉರಿಗೌಡ, ನಂಜೇಗೌಡ ಟಿಪ್ಪುವನ್ನು ಕೊಂದರು ಎಂದು ಹೇಳುವ ಮೂಲಕ ಬಿಜೆಪಿಯವರು ಒಕ್ಕಲಿಗ ಸಮಾಜಕ್ಕೆ ಕೆಟ್ಟಹೆಸರು ತರುವ ಪ್ರಯತ್ನ ನಡೆಸಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆರೋಪಿಸಿದರು.

ಮಂಡ್ಯ : ಉರಿಗೌಡ, ನಂಜೇಗೌಡ ಟಿಪ್ಪುವನ್ನು ಕೊಂದರು ಎಂದು ಹೇಳುವ ಮೂಲಕ ಬಿಜೆಪಿಯವರು ಒಕ್ಕಲಿಗ ಸಮಾಜಕ್ಕೆ ಕೆಟ್ಟಹೆಸರು ತರುವ ಪ್ರಯತ್ನ ನಡೆಸಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆರೋಪಿಸಿದರು.

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ತಾಲೂಕಿನ ಬೇವಿನಹಳ್ಳಿಯಲ್ಲಿ ಪ್ರಜಾಧ್ವನಿ ರಥಯಾತ್ರೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.

ಸಿ.ಟಿ.ರವಿ ಮತ್ತು ಡಾ.ಸಿ.ಎನ್‌ .ಅಶ್ವತ್ಥನಾರಾಯಣ ಅವರು ಉರಿಗೌಡ, ನಂಜೇಗೌಡ ಎಂಬ ಕಾಲ್ಪನಿಕ ವ್ಯಕ್ತಿಗಳ ಸೃಷ್ಟಿಕರ್ತರು. ಈ ಸಹೋದರರು ಟಿಪ್ಪುವನ್ನು ಕೊಂದರೆಂದು ಕತೆ ಕಟ್ಟಿಒಕ್ಕಲಿಗ ಸಮಾಜಕ್ಕೆ ಕಪ್ಪು ಮಸಿ ಬಳಿಯುವ ಪ್ರಯತ್ನ ನಡೆಸಿದ್ದರು. ಆದರೆ, ಅವರ ಪ್ರಯತ್ನ ಸಫಲವಾಗಲು ನಾವು ಬಿಡಲಿಲ್ಲ ಎಂದು ಹೇಳಿದರು.

ಟಿಪ್ಪು ಕುರಿತ ಬಿಜೆಪಿ ಸುಳ್ಳು ಇತಿಹಾಸಕಾರರಿಂದ ಬಯಲು: ಡಿಕೆಶಿ

ಜೆಡಿಎಸ್‌ ಬಿಜೆಪಿ ಹೊಂದಾಣಿಕೆ ಬಗ್ಗೆ ಸಿ.ಪಿ. ಯೋಗೇಶ್ವರ್‌ ಮಾತನಾಡಿರುವ ಬಗ್ಗೆ ಪ್ರಶ್ನಿಸಿದಾಗ, ಈ ವಿಷಯದ ಬಗ್ಗೆ ನಾನು ಮಾತನಾಡುವ ಅವಶ್ಯಕತೆ ಇಲ್ಲ. ಬಿಜೆಪಿಯ ಮಾಜಿ ಸಚಿವನೇ ಈ ಮಾತನ್ನು ಹೇಳಿರುವಾಗ ನಾನು ಮಾತನಾಡುವ ಅಗತ್ಯವಿಲ್ಲ. ಈ ವಿಷಯವನ್ನು ಮಾಧ್ಯಮದವರೇ ವ್ಯಾಖ್ಯಾನ ಮಾಡಲಿ. ಕಾಂಗ್ರೆಸ್‌ಗೆ ಬರುವ ಯಾರು ಈ ಮಾತುಗಳನ್ನು ಆಡಿಲ್ಲ ಎಂದಾದರೂ ನಾರಾಯಣಗೌಡರು ಕಾಂಗ್ರೆಸ್‌ ಸೇರುವ ಬಗ್ಗೆ ನನಗೆ ಗೊತ್ತಿಲ್ಲ ಎಂದು ಜಾರಿಕೆ ಉತ್ತರ ನೀಡಿದ

ಡಿಕೆಶಿ ದರ್ಪಕ್ಕೆ ಕಲಾವಿದರ ಬೇಸರ

ಮಂಡ್ಯ (ಮಾ.28): ಕಾಂಗ್ರೆಸ್‌ ವತಿಯಿಂದ ಮಂಡ್ಯ ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್‌ ಪ್ರಜಾಧ್ವನಿ ಯಾತ್ರೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಅಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಬಸ್‌ ಮೇಲಿಂದಲೇ ಜಾನಪದ ಕಲಾವಿದರಿಗೆ ಹಣವನ್ನು ಎರಚುವ ಮೂಲಕ ಚುನಾವಣೆ ಸಂದರ್ಭದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ.

ಮಂಡ್ಯ ತಾಲೂಕಿನ ಹಾಗೂ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬೇವಿನಹಳ್ಳಿ ಗ್ರಾಮದಲ್ಲಿ ಇಂದು ಅದ್ಧೂರಿಯಾಗಿ ಕಾಂಗ್ರೆಸ್‌ ಪ್ರಜಾಧ್ವನಿ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಇನ್ನು ಅಲ್ಲಿನ ಅಭ್ಯರ್ಥಿ ರಮೇಶ್‌ ಬಂಡಿಸಿದ್ದೇಗೌಡ ಅವರ ಪರವಾಗಿ ಬೇವಿನಹಳ್ಳಿಯಲ್ಲಿ ಬಸ್‌ ಮೇಲಿಂದಲೇ ರೋಡ್‌ ಶೋ ಮೂಲಕ ಭರ್ಜರಿ ಚುನಾವಣಾ ಪ್ರಚಾರ ಮಾಡುತ್ತಿದ್ದರು. ಈ ವೇಳೆ ಬೇವಿನಹಳ್ಳಿ ಬಸ್‌ ನಿಲ್ದಾಣದ ಬಳಿ ಹಲವು ಜಾನಪದ ಕಲಾತಂಡಗಳು ಪೂಜಾಕುಣಿತ ಹಾಗೂ ಪಟ ಕುಣಿತದ ದೇವರು ಹೊತ್ತುಕೊಂಡು ಕುಣಿಯುತ್ತಿದ್ದವು. ಇದನ್ನು ನೊಡಿದ ಡಿ.ಕೆ. ಶಿವಕುಮಾರ್‌ ಬಸ್‌ ಮೇಲಿಂದಲೇ ನೋಟಿನ ಕಂತೆಯನ್ನು ತೆರೆದು ಕಲಾ ತಂಡಗಳತ್ತ ಎಸೆದು ದರ್ಪ ತೋರಿದ್ದಾರೆ.

ಮೀಸಲಾತಿ ವಿಚಾರದಲ್ಲಿ ಮುಖ್ಯಮಂತ್ರಿ ಗೊಂದಲ ಸೃಷ್ಟಿಸಿದ್ದಾರೆ: ಡಿ.ಕೆ.ಶಿವಕುಮಾರ್

500 ಮುಖಬೆಲೆಯ ನೋಟುಗಳು: ಇನ್ನು ಬಸ್‌ ಮೇಲಿಂದಲೇ ರೋಡ್‌ ಶೋ ಮೂಲಕ ಜನರತ್ತ ಕೈಬೀಸಿ ಮಾತನಾಡುತ್ತಾ ಸಾಗುತ್ತಿದ್ದ ವೇಳೆ ಡಿ.ಕೆ. ಶಿವಕುಮಾರ್‌ 500 ರೂ. ಮುಖಬೆಲೆಯ ಹಲವು ನೋಟುಗಳನ್ನು ಎರಚಿದ್ದಾರೆ. ಇನ್ನು ಜಾನಪದ ಕಲಾವಿದರಿಗೆ ಈ ಹಣ ಎರಚಲಾಗಿದೆ ಎಂದು ಕಾಂಗ್ರೆಸ್‌ ನಾಯಕರು ಹೇಳುತ್ತಿದ್ದರೂ, ಕಲಾವಿದರು ಪೂಜಾ ಕುಣಿತದ ದೇವರು ಹೊತ್ತುಕೊಂಡಿದ್ದು, ಇದು ಕಾಂಗ್ರೆಸ್‌ ಕಾರ್ಯಕರ್ತರ ಪಾಲಾಗಿದೆ ಎಂದು ಸ್ಥಳೀಯರು ಹಾಗೂ ಕಲಾತಂಡದ ಸದಸ್ಯರು ಹೇಳಿದ್ದಾರೆ. ಆದರೆ, ಕಲಾವಿದರ ಮೇಲೆ ಹಣವನ್ನು ಎರಚಿ ದರ್ಪ ತೋರಿಸಿದ ಡಿ.ಕೆ. ಶಿವಕುಮಾರ್‌ ಅವರ ಮೇಲೆ ಸ್ಥಳೀಯ ಮತದಾರರು ಮಾತ್ರ ಆಕ್ರೋಶ ಹೊರಹಾಕಿದ್ದಾರೆ.

ದಕ್ಷಿಣ ಕರ್ನಾಟಕ ಸಾರಥಿಯ ಎಡವಟ್ಟು: ದಕ್ಷಿಣ ಕರ್ನಾಟಕದಲ್ಲಿ ಕಾಂಗ್ರೆಸ್‌ ಪ್ರಜಾಧ್ವನಿ ಯಾತ್ರೆಯ ನೇತೃತ್ವ ವಹಿಸಿಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು, ಒಕ್ಕಲಿಗ ಸಮುದಾಯದ ಭದ್ರಕೋಟೆ ಆಗಿರುವ ಮಂಡ್ಯದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ. ಜೆಡಿಎಸ್‌ಗೆ ಪೈಪೋಟಿ ನೀಡಿ, ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲಿಸಿಕೊಳ್ಳುವ ಭರಾಟೆಯಲ್ಲಿ ಎಡವಟ್ಟು ಮಾಡಿಕೊಂಡಿದ್ದು, ಸ್ಥಳೀಯರು ಹಾಗೂ ವಿಪಕ್ಷಗಳಿಂದ ಭಾರಿ ಟೀಕೆ ವ್ಯಕ್ತವಾಗಿದೆ. ಇನ್ನು ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್‌ನ ಹಾಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಸೇರಿ ಜೆಡಿಎಸ್‌ ನಾಯಕರಿಗೆ ಟೀಕೆ ಮಾಡಲು ಅಸ್ತ್ರ ಸಿಕ್ಕಂತಾಗಿದೆ.