ಮಂಡ್ಯ(ಅ.04): ಮನ್ಮುಲ್ ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನ ತಮ್ಮ ಕೈಗೆ ಒಲಿಯುತ್ತದೆ ಎಂದು ತೀವ್ರ ಉತ್ಸಾಹದಲ್ಲಿದ್ದ ಬಿಜೆಪಿ ನಾಯಕರಿಗೆ ಅಡ್ಡಮತದಾನ ದೊಡ್ಡ ಆಘಾತ ನೀಡಿದೆ.

ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್‌ ಬೆಂಬಲಿತರು ಗೆಲುವು ಸಾಧಿಸಲಿದ್ದಾರೆ. ಇದಕ್ಕೆ ಮತ ಚಲಾವಣೆ ಹಕ್ಕು ಹೊಂದಿದ್ದ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರು ಹಾಗೂ ಬಿಜೆಪಿ ಬೆಂಬಲಿತ ನಿರ್ದೆಶಕರೊಬ್ಬರ ಕ್ರಾಸ್‌ ವೋಟಿಂಗ್‌ ಕಾರಣ ಎಂದು ಬಲವಾದ ಶಂಕೆ ಈಗ ಬಿಜೆಪಿ ನಾಯಕರನ್ನು ಕಾಡತೊಡಗಿದೆ.

ಕಣ್ಣೀರಿಟ್ಟಸ್ವಾಮಿ ಬೆಂಬಲಿಗರು

ಮನ್ಮುಲ್ ಅಧ್ಯಕ್ಷ - ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಸ್‌.ಪಿ. ಸ್ವಾಮಿ ಸೋಲಿನ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಕಣ್ಣೀರಿಟ್ಟಪ್ರಸಂಗ ಮನ್ಮುಲ್ ಆವರಣದಲ್ಲಿ ಗುರುವಾರ ಜರುಗಿತು.

ಮನ್ಮುಲ್ ಅಧ್ಯಕ್ಷ ಚುನಾವಣೆಯಲ್ಲಿ ಎಸ್‌.ಪಿ. ಸ್ವಾಮಿ ಗೆಲುವು ಸಾಧಿಸುತ್ತಾರೆಂಬ ಆಶಾ ಭಾವನೆಯಿಂದ ಕಾರ್ಯಕರ್ತರು ಹಾರ-ತುರಾಯಿ ಸಮೇತ ಬಂದಿದ್ದರು. ಆದರೆ, ಅಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಎಸ್‌.ಪಿ. ಸ್ವಾಮಿ ಹಾಗೂ ಜೆಡಿಎಸ್‌ ಬೆಂಬಲಿತ ರಾಮಚಂದ್ರ ಅವರಿಗೆ ಸಮಬಲ ಬಂದಾಗ ಅಂತಿಮವಾಗಿ ಚುನಾವಣಾಧಿಕಾರಿ ಲಾಟರಿ ಮೊರೆ ಹೋದರು.

'ಕಾಂಗ್ರೆಸ್ ಕೈ ಬಿಡಲಿಲ್ಲ, ಜೆಡಿಎಸ್‌ ಮತ್ತೆ ಧೂಳಿನಿಂದ ಎದ್ದು ಬಂದಿದೆ'..!

ಲಾಟರಿಯಲ್ಲಿ ಜೆಡಿಎಸ್‌ ಬೆಂಬಲಿತ ರಾಮಚಂದ್ರ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಎಸ್‌.ಪಿ. ಸ್ವಾಮಿ ಆಪ್ತಸಹಾಯಕ ಮಧು ಸೇರಿದಂತೆ ಅವರ ಬೆಂಬಲಿಗರು ಕಣ್ಣೀರಿಟ್ಟರು. ತಂದಿದ್ದ ಹಾರ-ತುರಾಯಿಗಳನ್ನು ಎಸೆದು ಸ್ಥಳದಿಂದ ತೆರಳಿದರು.

ರೇವಣ್ಣ ಕರ್ನಾಟಕದ ಕುರಿಯನ್: ಪುಟ್ಟರಾಜು