ಚಿಕ್ಕಬಳ್ಳಾಪುರ (ಅ.11):  ನಗರದ ಹೊರ ವಲಯದ ತಿಪ್ಪೇನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗೆ ಶನಿವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಬಾರಿಸುವ ಮೂಲಕ ಚುನಾವಣೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿಕೂಟ ಮುಖಭಂಗ ಅನುಭವಿಸಿದೆ.

ಒಟ್ಟು 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 10 ಮಂದಿ ಜಯಭೇರಿ ಬಾರಿಸುವ ಮೂಲಕ ಆಡಳಿತದ ಚುಕ್ಕಾಣಿ ಹಿಡಯಲಿದ್ದು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಕೂಟದ ಅಭ್ಯರ್ಥಿಗಳಿಗೆ ಕೇವಲ ಎರಡು ಸ್ಥಾನ ಲಭ್ಯವಾಗಿದೆ. ಬೆಳಗ್ಗೆ ಚುನಾವಣಾ ಅಧಿಕಾರಿ ಮಂಜುಳ ಅಧ್ಯಕ್ಷತೆಯಲ್ಲಿ ಮತದಾನ ನಡೆದು ಫಲಿತಾಂಶ ಪ್ರಕಟಗೊಂಡಿತು.

'ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ' ...

ಚುನಾವಣೆಯಲ್ಲಿ ನೂತನ ನಿರ್ದೇಶಕರಾದ ಬಿಜೆಪಿ ಬೆಂಬಲಿತ ಗೋಪಾಲಕೃಷ್ಣ, ಜಗದೀಶ್‌, ವಿ.ವೆಂಕಟೇಶಪ್ಪ, ಶ್ರೀನಿವಾಸ್‌, ಮೂರ್ತಿ, ವೆಂಕಟೇಶಪ್ಪ, ಶಿವಣ್ಣ, ಮಹಿಳಾ ಕ್ಷೇತ್ರದಿಂದ ರಾಧಮ್ಮ, ಲಕ್ಷ್ಮಮ್ಮ, ಎಸ್‌ಸಿ ಮೀಸಲಿನಿಂದ ಮುನಿರಾಜು ಆಯ್ಕೆಗೊಂಡರೆ, ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿಗಳಾದ ತಿಮ್ಮಶೆಟ್ಟಿಹಾಗೂ ಅಶ್ವತ್ಥಪ್ಪ ಗೆಲವು ಸಾಧಿಸಿದ್ದಾರೆ.

ಈ ಸಂದರ್ಭದಲ್ಲಿ ನೂತನ ನಿರ್ದೇಶಕರನ್ನು ಅಭಿನಂದಿಸಿ ಮಾತನಾಡಿದ ಕೋಚಿಮಲ್‌ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್‌, ತಿಪ್ಪೇನಹಳ್ಳಿ ಎಂಪಿಸಿಎಸ್‌ಗೆ ಇದುವರೆಗೂ ಅವಿರೋಧ ಆಯ್ಕೆ ನಡೆದಿಲ್ಲ. ಪ್ರತಿ ಬಾರಿಯು ಚುನಾವಣೆ ಮೂಲಕ ಆಡಳಿತ ಮಂಡಳಿ ಸದಸ್ಯರು ಆಯ್ಕೆಗೊಂಡಿದ್ದಾರೆ. ಮೊದಲನಿಂದಲೂ ಜೆಡಿಎಸ್‌ ವಶದಲ್ಲಿತ್ತು. ಈಗ ನಾವು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸುಧಾಕರ್‌ ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ನಾವು ಅವರ ಹಾದಿಯಲ್ಲಿ ತೆರಳಿದ್ದು ಈಗ ತಿಪ್ಪೇನಹಳ್ಳಿ ಹಾಲು ಉತ್ಪಾದಕರ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಎಂದರು.