ಬೆಂಗಳೂರು(ಫೆ.05): ಬೆಂಗಳೂರು ಉತ್ತರ ತಾಲೂಕಿನ ಬ್ಯಾಟರಾಯನಪುರ ವ್ಯವಸಾಯ ಸೇವಾ ಸಹಕಾರ ಸಂಘದ ಆಡಳಿತ ಮಂಡಳಿ ಇದೇ ಮೊದಲ ಬಾರಿಗೆ ಬಿಜೆಪಿ ವಶಕ್ಕೆ ದಕ್ಕಿದೆ.

2020ರಿಂದ ಐದು ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ ಸಂಘದ ಒಟ್ಟು 12 ಸ್ಥಾನಗಳಲ್ಲಿ 10 ಸ್ಥಾನಗಳಲ್ಲಿ ಬಿಜೆಪಿ ಜಯಭೇರಿ ಗಳಿಸಿದ್ದು, ಕಳೆದ 71 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದೆ.

ಜಿಪಂ ಅಧ್ಯಕ್ಷರು ರಾಜೀನಾಮೆ ನೀಡಲು ಆರ್‌.ಅಶೋಕ್‌ ಸೂಚನೆ

1949ರಲ್ಲಿ ಆರಂಭವಾದ ಈ ಸಂಘ ಕಳೆದ 71 ವರ್ಷಗಳಿಂದ ಕಾಂಗ್ರೆಸ್‌ ಸದಸ್ಯರು ಆಡಳಿತ ನಡೆಸುತ್ತಿದ್ದರು. ಬಿಜೆಪಿ ಈವರೆಗೂ ಒಮ್ಮೆಯೂ ಅಧಿಕಾರಕ್ಕೆ ಬಂದಿರಲಿಲ್ಲ. ಪ್ರಸಕ್ತ ಅವಧಿಯಲ್ಲಿ ಬಿಜೆಪಿ ಪಕ್ಷಕ್ಕೆ ಬಹುಮತ ಗಳಿಸಿದ್ದು, ಪಕ್ಷದ ಸದಸ್ಯರು ಆಡಳಿತ ನಡೆಸುವುದಕ್ಕೆ ಅವಕಾಶ ಲಭ್ಯವಾಗಿದೆ.

ಬಿಜೆಪಿ ಹಿರಿಯ ಮುಖಂಡ ಚಕ್ರಪಾಣಿ ನೇತೃತ್ವದಲ್ಲಿ ಸಂಘವು ಬಿಜೆಪಿ ಆಡಳಿತಕ್ಕೊಳಪಡಿಸುವಂತೆ ಷೇರುದಾರರನ್ನು ಮನವೊಲಿಸಲಾಗಿದೆ. ಇದೇ ಕಾರಣದಿಂದ 10 ಸ್ಥಾನಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಜಯಶೀಲರಾಗಿರುವುದಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.

10ರಲ್ಲಿ ಒಬ್ಬ ಭಾರತೀಯಗೆ ಜೀವಿತಾವಧಿಯಲ್ಲಿ ಕ್ಯಾನ್ಸರ್‌!

ಬ್ಯಾಟರಾಯನಪುರದ ವಿಎಸ್‌ಎಸ್‌ಎನ್‌ ಬಿಬಿಎಂಪಿ ವ್ಯಾಪ್ತಿಗೆಯ ಕೊಡುಗೇಹಳ್ಳಿ, ತಿಂಡ್ಲು, ದೊಡ್ಡಬೊಮ್ಮಸಂದ್ರ, ಅಗ್ರಹಾರ, ಜಕ್ಕೂರು, ಜಕ್ಕೂರು ಬಾಡಾವಣೆ, ಶ್ರೀರಾಮಪುರ, ಚೊಕ್ಕನಹಳ್ಳಿ, ತಿರುಮೇನಹಳ್ಳಿ, ಹೆಬ್ಬಾಳ ವ್ಯಾಪ್ತಿಯ ವಿ.ನಾಗೇನಹಳ್ಳಿ, ಅಳ್ಳಾಲಸಂದ್ರಗಳನ್ನು ಒಳಗೊಂಡಿದೆ. ಈ ಭಾಗದ ಸದಸ್ಯರು ಸಂಘದ ಷೇರುದಾರರಾಗಿದ್ದಾರೆ. ಈ ಸಂಘದಲ್ಲಿ ಸ್ಥಳೀಯರಿಗೆ ಪಡಿತರ ವಿತರಣೆ ಮಾಡಲಾಗುತ್ತಿದೆ. ಅಲ್ಲದೆ, ಸಂಘದಲ್ಲಿ ದಾಸ್ತಾನು ಮಾಡಿ ಇತರೆ ಭಾಗಗಳಿಗೆ ಪಡಿತರ ವಿತರಣೆ ಮಾಡಲಾಗುತ್ತಿದೆ.

ಸಂಘದ ಮಂಡಳಿಯ ಸದಸ್ಯರಾಗಿ ಆಯ್ಕೆಯಾದವರು

ಎ.ಮೋಹನ್‌ರಾಜ್‌, ಟಿ.ಎನ್‌.ಅಶೋಕ್‌ಗೌಡ, ರಾಜೇಶ್‌, ಕೆ.ಎಸ್‌.ಸುಧಾಕರ್‌, ಟಿ.ಬಸವರಾಜು, ಎನ್‌.ಮುನೇಗೌಡ, ಎಸ್‌.ಸೋಮಶೇಖರ್‌, ಜಿ.ಕೆ.ಕಾರ್ತೀಕ್‌, ಬಿ.ಎಸ್‌.ರಾಜಶೇಖರ್‌ (ಅವಿರೋಧ ಆಯ್ಕೆ), ಎಲ್‌.ನಂಜಪ್ಪ, ಸರೋಜಮ್ಮ ರತ್ನಮ್ಮ.