Asianet Suvarna News Asianet Suvarna News

25 ವರ್ಷದಿಂದ ದುಡಿದರೂ ಸ್ಥಾನಮಾನವಿಲ್ಲ : ಶೋಭಾ ಎದುರು ಕಣ್ಣೀರಿಟ್ಟ ಬಿಜೆಪಿ ನಾಯಕಿ

  • 25 ವರ್ಷದಿಂದ ಪಕ್ಷದಲ್ಲಿ ದುಡಿದು ನಾನು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಡರೂ ನನಗೆ ಸೂಕ್ತ ಸ್ಥಾನಮಾನ ದೊರೆತಿಲ್ಲ
  • ಶೋಭಾ ಎದುರು ಬಿಜೆಪಿ ಮಹಿಳಾ ಮೋರ್ಚಾದ ನಾಯಕಿ ಕಣ್ಣಿರು 
BJP woman  leader tears in front of union Minister shobha karandlaje snr
Author
Bengaluru, First Published Sep 5, 2021, 3:37 PM IST
  • Facebook
  • Twitter
  • Whatsapp

ಕಲಬುರಗಿ: (ಸೆ.05): 25 ವರ್ಷದಿಂದ ಪಕ್ಷದಲ್ಲಿ ದುಡಿದು ನಾನು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಡರೂ ನನಗೆ ಸೂಕ್ತ ಸ್ಥಾನಮಾನ ದೊರೆತಿಲ್ಲ ಎಂದು ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಕರ್ತೆ ಸಾವಿತ್ರಿ ಕುಳಗೇರಿ ಅವರು ಕಣ್ಣಿರು ಸುರಿಸಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ಮುಗಿದ ಬಳಿಕ, ಕೇಂದ್ರ ಸಚಿವೆ ಸಚಿವೆ ಶೋಭಾ ಕರಂದ್ಲಾಜೆಗೆ ಶಾಲು ಹೊದಿಸುವ ಸಂದರ್ಭದಲ್ಲಿ ಭಾವುಕರಾಗಿ ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ. ಬಿಜೆಪಿ ಮಾಜಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಸಾವಿತ್ರಿ ಕುಳಗೇರಿ ತಮ್ಮ ನೋವನ್ನು ಹೇಳುತ್ತಾ, ನಾನು ಮನೆ ಕೆಲಸ, ಮಕ್ಕಳನ್ನು ಬಿಟ್ಟು ಪಕ್ಷದ ಸಂಘಟನೆಗಾಗಿ 25 ವರ್ಷದಿಂದ ದುಡಿದು ಪಕ್ಷಕ್ಕಾಗಿ ಸೇವೆ ಸಲ್ಲಿಸಿದ್ದೇನೆ. ಇಷ್ಟಾದರೂ ಪಕ್ಷ ನನಗೆ ಗುರುತಿಸುವ ಕಾರ್ಯ ಮಾಡಲಿಲ್ಲ ಎಂದು ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.

ರೈತರನ್ನು ಸ್ವಾವಲಂಬಿಯಾಗಿಸಲು 10 ಸಾವಿರ ರೈತ ಉತ್ಪಾದಕ ಸಂಘ

ನಿನ್ನೆಯಷ್ಟೇ ನಡೆದ ಮಹಾ ನಗರ ಪಾಲಿಕೆ ಚುನಾವಣೆ ಗೆ ವಾರ್ಡ ನಂ- 31ರ ಬಿಜೆಪಿ ಟಿಕೆಟ್‌ ಕೇಳಿದ್ದೆ. ಆದರೆ ನನಗೆ ದೊರಕಿಲ್ಲ. ಮೊನ್ನೆ ಮೊನ್ನೆ ಬಂದವರಿಗೆ ನಿಗಮ ಮಂಡಳಿ ಸ್ಥಾನವನ್ನು ನೀಡಿ, ದಶಕಗಳಿಂದ ಪಕ್ಷದ ಸಂಘಟನೆಗಾಗಿ ದುಡಿದವರಿಗೆ ನೋವುಂಟಾಗಿದೆ. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್‌ ಅವರು ಮುಂಬರುವ ದಿನಗಳಲ್ಲಿ ನನಗೆ ಸೂಕ್ತ ಸ್ಥಾನಮಾನ ಕೊಡುವ ಬಗ್ಗೆ ಬರವಸೆ ನೀಡಿದ್ದು, ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತಳಾಗಿ ಕೆಲಸ ಮಾಡುವುದಾಗಿ ಸಾವಿತ್ರಿ ಕುಳಗೇರಿ ತಿಳಿಸಿದ್ದಾರೆ.

ಆದರೆ ಮಹಿಳಾ ಕಾರ್ಯಕರ್ತರು ಕಣ್ಣಿರಿಟ್ಟು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದರು, ಸಮಾಧಾನ ಮಾಡದೆ, ಸಚಿವೆ ಶೋಭಾ ಕರಂದ್ಲಾಜೆ ವೇದಿಕೆಯಿಂದ ಕಾಲು ಕಿತ್ತಿದ್ದಾರೆ.

Follow Us:
Download App:
  • android
  • ios