ಆನೇಕಲ್ ( ಸೆ.12)  ಆನೇಕಲ್ ನಲ್ಲಿ ಕಾಂಗ್ರೆಸ್ ಶಾಸಕರಿದ್ದರೂ ಬೊಮ್ಮಸಂದ್ರ ಪುರಸಭೆ ಬಿಜೆಪಿ ತೆಕ್ಕೆಗೆ ಬಂದಿದೆ.  ಬೊಮ್ಮಸಂದ್ರ ಪುರಸಭೆ ಉಪಾಧ್ಯಕ್ಷರಾಗಿ  ಶ್ರೀನಿವಾಸ ಅವಿರೋಧ ಆಯ್ಕೆಯಾಗಿದ್ದಾರೆ.

ಬಿಜೆಪಿ ಅಭ್ಯರ್ಥಿಯಾಗಿದ್ದ ಕಿತ್ತಗಾನಹಳ್ಳಿ ಶ್ರೀನಿವಾಸ ಆಯ್ಕೆಯಾಗಿದ್ದಾರೆ. ಕಳೆದ ಮೂರು ವರ್ಷದಿಂದೆ ನಡೆದಿದ್ದ ಚುನಾವಣೆ, ಅಧ್ಯಕ್ಷ -ಉಪಾಧ್ಯಕ್ಷ ಮೀಸಲಾತಿ ನ್ಯಾಯಾಲಯದ ಮೇಟ್ಟಿಲೇರಿತ್ತು. ಎರಡು ವರ್ಷದಿಂದೆ ಬಿಜೆಪಿ ಮುಖಂಡ ಶ್ರೀನಿವಾಸ್ ಪ್ರಸಾದ್ ಅಲಿಯಾಸ್ ವಾಸು ಕೊಲೆಯಾಗಿತ್ತು.  

ಆನೇಕಲ್‌ನಲ್ಲಿ ಹೆಣ್ಮಕ್ಕಳ ಬೀದಿ ರಂಪ.. ಬಡಿದಾಡಿಕೊಂಡಿದ್ದಾದರೂ ಹೇಗೆ!

ಬಿಜೆಪಿ ವಿಜಯವನ್ನು ಕಾರ್ಯಕರ್ತರು ಪಟಾಕಿ ,ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಶ್ರೀನಿವಾಸ್ ಪ್ರಸಾದ್ ಅಲಿಯಾಸ್ ವಾಸು ಹತ್ಯೆ ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಕೊಲೆಯಾದ ಶ್ರೀನಿವಾಸ್ ಪ್ರಸಾದ್ ಮತ್ತು ಇದೀಗ ಉಪಾಧ್ಯಕ್ಷರಾಗಿ ಆಯ್ಕೆಯಾದ ಶ್ರೀನಿವಾಸ್ ಇಬ್ಬರು ಕಿತ್ತಗಾನಹಳ್ಳಿಯವರೆ.

ಪುರಸಭೆಗೆ ಚುನಾವಣೆ ನಡೆದು 3.5  ವರ್ಷ ಆಗಿದ್ದರೂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಆಗಿರಲಿಲ್ಲ. ಮೀಸಲು ಗೊಂದಲದಿಂದ ಆಯ್ಕೆ ವಿಚಾರ ನ್ಯಾಯಾಲಯದ ಮೆಟ್ಟಿಲು ಏರಿತ್ತು. ಇದೀಗ ಉಪಾಧ್ಯಕ್ಷ ಸ್ಥಾನ ಕ್ಲಿಯರ್ ಆಗಿದ್ದು ಅಧ್ಯಕ್ಷ ಸ್ಥಾನದ ಗೊಂದಲ ಇನ್ನು ನ್ಯಾಯಾಲಯದಲ್ಲಿಯೇ ಇದೆ. 23 ಸ್ಥಾನದ ಪುರಸಭೆಯಲ್ಲಿ ಬಿಜೆಪಿ ಬಹುಮತ ಅಂದರೆ  16 ಸದಸ್ಯ ಬಲ ಹೊಂದಿದೆ. ಇನ್ನುಳಿದಂತೆ ಕಾಂಗ್ರೆಸ್ ಐದು, ಜೆಡಿಎಸ್ ಮತ್ತು ಸಿಪಿಐ ತಲಾ ಒಂದೊಂದು ಸ್ಥಾನ ಹೊಂದಿವೆ.