ಚಿಕ್ಕಬಳ್ಳಾಪುರ(ಡಿ.07): ನಿರೀಕ್ಷಿಯಂತೆ ಗ್ರೇಟರ್‌ ಹೈದ್ರಾಬಾದ್‌ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಮತಗಳು ಬಂದಿವೆ. ಸ್ಥಾನಗಳು ಬಂದಿವೆಯೆಂದು ಚುನಾವಣಾ ಕಾರ್ಯದಲ್ಲಿ ಸ್ವತಃ ಭಾಗಿಯಾಗಿದ್ದ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು. 

ಶೇ.10ರಷ್ಟಿದ್ದ ಮತಗಳು ಶೇ.36 ಬಂದಿವೆ. ಟಿಆರ್‌ಎಸ್‌ ಪಕ್ಷದ ದುರಾಡಳಿತ, ಭ್ರಷ್ಟಾಚಾರದ ವಿರುದ್ಧ ಅಲ್ಲಿನ ಮತದಾರರು ಚುನಾವಣೆಯಲ್ಲಿ ತೀರ್ಪು ನೀಡಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತೆಲಂಗಾಣದಲ್ಲಿ ಬಿಜೆಪಿ ಸರ್ಕಾರ ರಚನೆ ಆಗುವುದು ನೂರಕ್ಕೆ ನೂರಷ್ಟುಖಚಿತ ಎಂದು ಸುಧಾಕರ್‌ ವಿಶ್ವಾಸ ವ್ಯಕ್ತಪಡಿಸಿದರು.

'ಮುಂದಿನ 6 ತಿಂಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರುವ ಭವಿಷ್ಯ' ...

ರಾಜ್ಯದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಸಂಬಂಧ ಅನೈತಿಕ ಸಂಬಂಧ ಆಗುತ್ತದೆ. ಜನಾಭಿಪ್ರಾಯದ ವಿರುದ್ಧ ಇರುವ ಸರ್ಕಾರ ಆಗುತ್ತದೆಯೆಂದು ನಾನು 2018ರ ಚುನಾವಣೆಯಲ್ಲಿ ಶಾಸಕನಾದ ಮೊದಲ ದಿನವೇ ಹೇಳಿದ್ದೆ. ಇದನ್ನು ಇಬ್ಬರು ನಾಯಕರು ಈಗ ಬಹಿರಂಗವಾಗಿ ಹೇಳಿಕೊಂಡಿರುವುದು ಸ್ವಾಗರ್ತಾಹವಾದದು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.